• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜುಲೈ 2021ರಲ್ಲಿ ಜಿಎಸ್‌ಟಿ ಆದಾಯ ಸಂಗ್ರಹ 1,16,393 ಕೋಟಿ ರು

|
Google Oneindia Kannada News

ನವದೆಹಲಿ, ಆಗಸ್ಟ್ 02: ಜುಲೈ 2021ರಲ್ಲಿ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹ 1,16,393 ಕೋಟಿ ರೂ ಆಗಿದ್ದು, ಆ ಪೈಕಿ ಸಿಜಿಎಸ್‌ಟಿ 22,197 ಕೋಟಿ ರೂ, ಎಸ್ ಜಿಎಸ್‌ಟಿ 28,541 ಕೋಟಿ ರೂ, ಐಜಿಎಸ್‌ಟಿ 57,864 ಕೋಟಿ ರೂ. (ಇದರಲ್ಲಿ 27,900 ಕೋಟಿ ರೂ. ಆಮದು ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ) ಮತ್ತು 7,790 ಕೋಟಿ ರೂ. ಸೆಸ್ ಆಗಿದ್ದು, (ಇದರಲ್ಲಿ 815 ಕೋಟಿ ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ ). ಈ ಮೇಲಿನ ಅಂಕಿ ಅಂಶಗಳಲ್ಲಿ 2021ರ ಜುಲೈ 1ರಿಂದ ಜು.31ರವರೆಗೆ ಫೈಲ್ ಆಗಿರುವ ಜಿಎಸ್‌ಟಿಆರ್-3 ಬಿ ಮತ್ತು ಐಜಿಎಸ್‌ಟಿ ಮತ್ತು ಇದೇ ಅವಧಿಯಲ್ಲಿ ಆಮದು ವಸ್ತುಗಳಿಂದ ಸಂಗ್ರಹವಾದ ಸೆಸ್ ಸಹ ಸೇರಿದೆ.

2021ರ ಜುಲೈ 1ರಿಂದ 5ರವರೆಗೆ ಜಿಎಸ್‌ಟಿ ರಿಟರ್ನ್ 4,937 ಕೋಟಿ ರೂ, ಸಂಗ್ರಹವಾಗಿದೆ ಇದರಲ್ಲಿ ಜೂನ್ 2021ರ ತಿಂಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ನೀಡಲಾಗಿದ್ದು, ಅದರಲ್ಲಿ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆ ಹಿನ್ನೆಲೆಯಲ್ಲಿ ಸರಾಸರಿ ವಹಿವಾಟು 5 ಕೋಟಿ ವರೆಗೆ ಹೊಂದಿರುವ ತೆರಿಗೆ ಪಾವತಿದಾರರಿಗೆ ಜೂನ್ ತಿಂಗಳ 21ರವರೆಗೆ 15 ದಿನಗಳಲ್ಲಿ ವಿಳಂಬವಾಗಿ ಪಾವತಿ ಮಾಡಿದರೂ ಸಹ ಬಡ್ಡಿ ಮನ್ನಾ/ವಿನಾಯ್ತಿ ಸೇರಿ ಹಲವು ಪರಿಹಾರ ಕ್ರಮಗಳನ್ನು ತೆರಿಗೆ ಪಾವತಿದಾರರಿಗೆ ಪ್ರಕಟಿಸಲಾಗಿತ್ತು.

ಜೂನ್ 2021ರಲ್ಲಿ ₹92,849 ಕೋಟಿ ಜಿಎಸ್‌ಟಿ ಆದಾಯ ಸಂಗ್ರಹ ಜೂನ್ 2021ರಲ್ಲಿ ₹92,849 ಕೋಟಿ ಜಿಎಸ್‌ಟಿ ಆದಾಯ ಸಂಗ್ರಹ

ಸರ್ಕಾರ ಮಾಮೂಲಿನಂತೆ 28,087 ಕೋಟಿ ಸಿಜಿಎಸ್‌ಟಿ ಮತ್ತು 24,100 ಕೋಟಿ ಎಸ್‌ಜಿಎಸ್‌ಟಿ ಮೊತ್ತವನ್ನು ಪಾವತಿಸಿದೆ. ಜುಲೈ 2021ರಲ್ಲಿ ಕೇಂದ್ರ ಮತ್ತು ರಾಜ್ಯಗಳು ನಿಗದಿತ ಪಾವತಿಗಳ ನಂತರ 50,284 ಕೋಟಿ ಸಿಜಿಎಸ್‌ಟಿ ಮತ್ತು 52,641 ಕೋಟಿ ಎಸ್‌ಜಿಎಸ್‌ಟಿಯನ್ನು ಸಂಗ್ರಹ ಮಾಡಿದೆ.

ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಆದಾಯ ಹೆಚ್ಚಳ:
2021ರ ಜುಲೈನಲ್ಲಿ ಸಂಗ್ರಹಿಸಿರುವ ಜಿಎಸ್‌ಟಿ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.33ರಷ್ಟು ಅಧಿಕವಾಗಿದೆ. ತಿಂಗಳ ಅವಧಿಯಲ್ಲಿ ಸರಕುಗಳ ಆಮದಿನ ಆದಾಯವು ಶೇ. 36ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಲ್ಲಿ ಬಂದ ಆದಾಯಕ್ಕಿಂತ ಶೇ.32ರಷ್ಟು ಹೆಚ್ಚಾಗಿದೆ.

ಜೂನ್ 2021ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ ₹92,849 ಕೋಟಿಯಾಗಿದ್ದು, ಅದರಲ್ಲಿ ಸಿಜಿಎಸ್‌ಟಿ ₹16,424 ಕೋಟಿ, ಎಸ್‌ಜಿಎಸ್‌ಟಿ 20,397, ಐಜಿಎ ಎಸ್ ಟಿ ₹49,079 ಕೋಟಿ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ, ₹25,762 ಕೋಟಿ ಸೇರಿದಂತೆ) ಮತ್ತು ಸೆಸ್ ₹6,949 ಕೋಟಿ (ಸರಕುಗಳ ಆಮದಿಗೆ ಸಂಗ್ರಹಿಸಿದ ₹809 ಕೋಟಿ ಸೇರಿದಂತೆ) ಎಂದು ವಿತ್ತ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಜಿಎಸ್ಟಿ ಸಂಗ್ರಹ ಸತತ 8 ತಿಂಗಳು 1 ಲಕ್ಷ ಕೋಟಿಗೂ ಅಧಿಕ ಮುಂದುವರಿದಿದೆ, ಆದರೆ ಜೂನ್ 2021ರಲ್ಲಿ 1 ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು, ಜೂನ್ ತಿಂಗಳಲ್ಲಿ ಸಂಗ್ರಹವಾಗಿದ್ದ ಮೊತ್ತ ಬಹುತೇಕ 2021ರ ಮೇ ತಿಂಗಳಿಗೆ ಸೇರಿದ್ದು, ಏಕೆಂದರೆ ಕೋವಿಡ್ ಕಾರಣದಿಂದಾಗಿ ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಅಥವಾ ಭಾಗಶಃ ಲಾಕ್ ಡೌನ್ ವಿಧಿಸಿರುವುದು ಕಾರಣವಾಗಿತ್ತು.

ಕೋವಿಡ್ ನಿರ್ಬಂಧಗಳ ಸಡಿಲಿಕೆ ಪರಿಣಾಮ, ಜಿಎಸ್‌ಟಿ ಆದಾಯ ಸಂಗ್ರಹ 2021ರ ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ.ಗೂ ಮೇಲೇರಿದೆ, ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸಂಕೇತವಾಗಿದೆ. ಮುಂದಿನ ತಿಂಗಳುಗಳಲ್ಲಿಯೂ ಸಹ ಜಿಎಸ್‌ಟಿ ಸಂಗ್ರಹ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ. (ಅಂಕಿ ಅಂಶ ಕೃಪೆ: ವಿತ್ತ ಸಚಿವಾಲಯ)

2021ರ ಜುಲೈನಲ್ಲಿ ರಾಜ್ಯವಾರು ಜಿಎಸ್‌ಟಿ ಆದಾಯ ಸಂಗ್ರಹ ವಿವರ
ಕ್ರಮ ಸಂಖ್ಯೆ ರಾಜ್ಯ ಜುಲೈ 2020 ಜುಲೈ 2021 ಪ್ರಗತಿ
01 ಜಮ್ಮು ಮತ್ತು ಕಾಶ್ಮೀರ 298 432 45%
02 ಹಿಮಾಚಲ ಪ್ರದೇಶ 605 667 10%
03 ಪಂಜಾಬ್ 1,188 1,533 29%
04 ಚಂಡಿಗಢ 137 169 23%
05 ಉತ್ತರಾಖಂಡ 988 1,106 12%
06 ಹರಿಯಾಣ 3,483 5,330 53%
07 ದೆಹಲಿ 2,629 3,815 45%
08 ರಾಜಸ್ಥಾನ 2,797 3,129 12%
09 ಉತ್ತರ ಪ್ರದೇಶ 5,099 6,011 18%
10 ಬಿಹಾರ 1,061 1,281 21%
11 ಸಿಕ್ಕಿಂ 186 197 6%
12 ಅರುಣಾಚಲ ಪ್ರದೇಶ 33 55 69%
13 ನಾಗಾಲ್ಯಾಂಡ್ 25 28 11%
14 ಮಣಿಪುರ 25 37 48%
15 ಮಿಜೋರಾಂ 16 21 31%
16 ತ್ರಿಪುರ 48 65 36%
17 ಮೇಘಾಲಯ 120 121 1%
18 ಅಸ್ಸಾಂ 723 882 22%
19 ಪಶ್ಚಿಮ ಬಂಗಾಳ 3,010 3,463 15%
20 ಜಾರ್ಖಂಡ್ 1,340 2,056 54%
21 ಒಡಿಶಾ 2,348 3,615 54%
22 ಚತ್ತಿಸ್ ಗಢ 1,832 2,432 33%
23 ಮಧ್ಯಪ್ರದೇಶ 2,289 2,657 16%
24 ಗುಜರಾತ್ 5,621 7,629 36%
25 ದಾಮನ್ ಮತ್ತು ದಿಯು 77 0 -99%
26 ದಾದ್ರ ಮತ್ತು ನಾಗರ್ ಹವೇಲಿ 130 227 74%
27 ಮಹಾರಾಷ್ಟ್ರ 12,508 18,899 51%
28 ಕರ್ನಾಟಕ 6,014 6,737 12%
29 ಗೋವಾ 257 303 18%
30 ಲಕ್ಷದ್ವೀಪ 2 1 -42%
31 ಕೇರಳ 1,318 1,675 27%
32 ತಮಿಳುನಾಡು 4,635 6,302 36%
33 ಪುದುಚೆರಿ 136 129 -6%
34 ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು 18 19 6%
35 ತೆಲಂಗಾಣ 2,876 3,610 26%
36 ಆಂಧ್ರ ಪ್ರದೇಶ 2,138 2,730 28%
37 ಲಡಾಖ್ 7 13 95%
38 ಇತರೆ ಭೂಭಾಗ 97 141 45%
39 ಕೇಂದ್ರೀಯ ವ್ಯಾಪ್ತಿ 179 161 -10%
ಒಟ್ಟು 66,291 ಕೋಟಿ ರು 87,678 ಕೋಟಿ ರು 1 32%

English summary
GST revenue for the month of July stood at over Rs 1.16 lakh crore, 33 per cent higher than the collection in the same month of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X