ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ಬದಲಾವಣೆ: ಟಿವಿ, ಮೊಬೈಲ್ ಫೋನ್ ಬೆಲೆ ಏರಿಕೆ ನಿರೀಕ್ಷೆ

|
Google Oneindia Kannada News

ನವದೆಹಲಿ, ಮಾರ್ಚ್ 13: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಪ್ರಮಾಣದಲ್ಲಿ ಭಾರಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಸುದ್ದಿ ಬಂದಿದೆ. ಮಾರ್ಚ್ 14ರಂದು ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆ ಬಳಿಕ ಯಾವೆಲ್ಲ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ ಎಂಬುದು ಸ್ಪಷ್ಟವಾಗಲಿದೆ.

ಮೊಬೈಲ್ ಹ್ಯಾಂಡ್‍ಸೆಟ್ ಮೇಲಿನ ಜಿಎಸ್‍ಟಿ ದರವನ್ನು ಶೇಕಡ 12ರಿಂದ 18ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಿಎಸ್‍ಟಿ ದರ ಬದಲಾವಣೆಯು ಮೊಬೈಲ್ ಫೋನ್ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಇದು ಬಹು ಸೇವೆಗಳ ಮತ್ತು ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಂಥ ಪ್ರಮುಖ ಸೇವೆ ಮತ್ತು ಪ್ರೋಗಾಂಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಐಸಿಇಎ ಅಭಿಪ್ರಾಯಪಟ್ಟಿದೆ.

ಬೆಲೆ ಏರಿಕೆ ಬಿಸಿ: ಮೊಬೈಲ್ ಫೋನ್‍ಗಳ ಮೇಲಿನ ಜಿಎಸ್‍ಟಿ ದರ ಹೆಚ್ಚಳ?ಬೆಲೆ ಏರಿಕೆ ಬಿಸಿ: ಮೊಬೈಲ್ ಫೋನ್‍ಗಳ ಮೇಲಿನ ಜಿಎಸ್‍ಟಿ ದರ ಹೆಚ್ಚಳ?

ಸದ್ಯದ ಮಾಹಿತಿಯಂತೆ ಶೇ 12ರಷ್ಟು ಜಿಎಸ್ಟಿ ಹೊಂದಿದ್ದ ಕೆಲ ವಸ್ತುಗಳು ಶೇ 18ಕ್ಕೇರುವ ಸಾಧ್ಯತೆಯಿದೆ. ಹೀಗಾಗಿ, ಮೊಬೈಲ್ ಫೋನ್ ಬೆಲೆ ಏರಿಕೆ ನಿರೀಕ್ಷಿಸಬಹುದು. ಮಿಕ್ಕಂತೆ ಟಿವಿ, ಗೀಸರ್, ಹೀಟರ್, ಮಿಕ್ಸರ್, ಟಾರ್ಚ್, ಕೈಮಗ್ಗ ಜವಳಿ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ.

ಸ್ಮಾರ್ಟ್ ಫೋನ್‍ಗಳಿಗ ಮಾರುಕಟ್ಟೆ ಬೇಡಿಕೆ

ಸ್ಮಾರ್ಟ್ ಫೋನ್‍ಗಳಿಗ ಮಾರುಕಟ್ಟೆ ಬೇಡಿಕೆ

ಸ್ಮಾರ್ಟ್ ಫೋನ್‍ಗಳಿಗ ಮಾರುಕಟ್ಟೆ ಬೇಡಿಕೆ ವ್ಯಾಪಕವಾಗಿದ್ದು, ಪ್ರತಿ ವರ್ಷ ಕೂಡಾ ಶ್ಲಾಘನೀಯ ದರದಲ್ಲಿ ಪ್ರಗತಿ ಕಾಣುತ್ತಿದೆ. 2013-14ರಲ್ಲಿ ಮೊಬೈಲ್ ಹ್ಯಾಂಡ್‍ಸೆಟ್‍ಗಳಿಗೆ ಇದ್ದ ಬೇಡಿಕೆ ದರ 57000 ಕೋಟಿ ರೂಪಾಯಿ ಇದ್ದುದು 2018-19ರ ವೇಳೆಗೆ 1,80,000 ಕೋಟಿ ರೂಪಾಯಿ ಆಗಿ, ಪ್ರಗತಿದರ ಶೇಕಡ 315ರಷ್ಟಾಗಿದೆ. ಅಂತೆಯೇ ಮೊಬೈಲ್ ಹ್ಯಾಂಡ್‍ಸೆಟ್ ದೇಶೀಯ ಉತ್ಪಾದನೆ ಪ್ರಮಾಣ 2014-15ರಲ್ಲಿ 18900 ಕೋಟಿ ರೂಪಾಯಿ ಇದ್ದುದು 2018-19ರ ಅವಧಿಯಲ್ಲಿ ಇದು ಶೇಕಡ 315ರಷ್ಟು ಅಧಿಕ.

ಹ್ಯಾಂಡ್‍ಸೆಟ್‍ಗಳ ದೇಶಿಯ ಬಳಕೆ

ಹ್ಯಾಂಡ್‍ಸೆಟ್‍ಗಳ ದೇಶಿಯ ಬಳಕೆ

2018-19ರ ಅವಧಿಯಲ್ಲಿ ಮೊಬೈಲ್ ಹ್ಯಾಂಡ್‍ಸೆಟ್‍ಗಳ ದೇಶಿಯ ಬಳಕೆ ಮೌಲ್ಯ 25 ಶತಕೋಟಿ ಡಾಲರ್ ಇದ್ದರೂ, ದರವನ್ನು ತೀರಾ ಅಧಿಕಮಟ್ಟಕ್ಕೆ ಹೆಚ್ಚಾಗಿ ಅಂದಾಜಿಸಲಾಗಿದೆ. ಮಾರುಕಟ್ಟೆ ಬೇಡಿಕೆಯನ್ನು 80 ಶತಕೋಟಿ ಡಾಲರ್‍ಗೆ ಹೆಚ್ಚಿಸಬೇಕಾದರೆ, ಸಾಂಪ್ರದಾಯಿಕ ಪ್ರಗತಿದರದ ಅಂದಾಜನ್ನು ಮೀರಿ ಬೆಳೆಯುವ ನಿರೀಕ್ಷೆ ಇದೆ.

ಜಿಎಸ್‍ಟಿ ದರ ಪರಿಷ್ಕರಣೆ

ಜಿಎಸ್‍ಟಿ ದರ ಪರಿಷ್ಕರಣೆ

ಈ ಚಾಂಪಿಯನ್ ಉತ್ಪನ್ನದ ಮೇಲಿನ ಜಿಎಸ್‍ಟಿ ದರವನ್ನು ಪರಿಷ್ಕರಿಸುವ ಯಾವುದೇ ಪ್ರಯತ್ನ, ಇಡೀ ಉದ್ಯಮಕ್ಕೆ ಮಾರಕವಾಗಲಿದೆ. ಈ ಸಂದರ್ಭದಲ್ಲಿ ಇಲ್ಲಿ ಉಲ್ಲೇಖಿಸುವ ಇನ್ನೊಂದು ಪ್ರಮುಖ ಅಂಶವೆಂದರೆ, ಜಿಎಸ್‍ಟಿ ಪೂರ್ವ ಯುಗದಲ್ಲಿ ಕೂಡಾ, ವಿಎಟಿ ವ್ಯವಸ್ಥೆಯಡಿಯಲ್ಲಿ, ಮೊಬೈಲ್ ಸೆಟ್‍ಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಶೇಕಡ 4-5ರಷ್ಟು ಮಾತ್ರ ಇತ್ತು ಎಂದು ವಿವರಿಸಿದ್ದಾರೆ.

ಯಾವೆಲ್ಲ ಪದಾರ್ಥ ಬೆಲೆ ಏರಿಕೆ ಸಾಧ್ಯತೆ?

ಯಾವೆಲ್ಲ ಪದಾರ್ಥ ಬೆಲೆ ಏರಿಕೆ ಸಾಧ್ಯತೆ?

ಟಿವಿ, ಟಾರ್ಚ್, ಗೀಸರ್, ಐರನ್ ಬಾಕ್ಸ್, ಹೀಟರ್, ಮಿಕ್ಸರ್, ಜ್ಯೂಸರ್ ಇತ್ಯಾದಿ ಬೆಲೆ ಶೇ 18ಕ್ಕೇರಲಿದ್ದು, ಬೆಲೆ ಏರಿಕೆ ಅನಿವಾರ್ಯ ಎನ್ನಲಾಗಿದೆ. ಆಮದು ಮೊಬೈಲ್ ಫೋನ್ ಮೇಲೆ ಹೆಚ್ಚುವರಿ ಸುಂಕ ಶೇ 12.5 ರಷ್ಟು ವಿಧಿಸಲಾಗುತ್ತಿದೆ. ಇದಲ್ಲದೆ, ರಸಗೊಬ್ಬರ ಶೇ 12ರಷ್ಟು ತೆರಿಗೆ ಸ್ಲ್ಯಾಬ್ ನಲ್ಲಿದೆ. ಇನ್ಪುಟ್ ತೆರಿಗೆ ಕ್ರೆಡಿಟ್ ರೂಪದಲ್ಲಿ 6000 ಕೋಟಿ ರು ಸಂದಾಯವಾಗಿದೆ. ಆದರೆ ಅಮೋನಿಯಾ, ಸಲ್ಫರ್ ನಿಂದ ಹೆಚ್ಚಿನ ಇನ್ಪುಟ್ ಬಂದಿಲ್ಲ ಹೀಗಾಗಿ ಶೇ 18ರಷ್ಟು ತೆರಿಗೆ ಸ್ಲ್ಯಾಬಿಗೆ ತರುವ ಸಾಧ್ಯತೆಯಿದೆ.

English summary
GST rates on mobile phones, fertilisers, man-made fabrics and garments are likely to be hiked to 18 per cent in the next GST Council meeting on March 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X