ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಸಂದರ್ಭದಲ್ಲಿ ಹೊಸ ಅಪಾರ್ಟ್ಮೆಂಟ್ ಖರೀದಿದಾರರಿಗೆ ಸುದ್ದಿ

|
Google Oneindia Kannada News

ನವದೆಹಲಿ, ಮಾರ್ಚ್ 20: ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಬೇಡಿಕೆಗೆ ಮೋದಿ ಸರ್ಕಾರ ಅಸ್ತು ಎಂದಿದ್ದು, ಹೊಸ ಅಪಾರ್ಟ್​ವೆುಂಟ್​ಗಳು ಏಪ್ರಿಲ್ 01 ರಿಂದ ಪರಿಷ್ಕೃತ ಜಿಎಸ್​ಟಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಂದಾಯ ಕಾರ್ಯದರ್ಶಿ ಎ.ಬಿ.ಪಾಂಡೆ ತಿಳಿಸಿದ್ದಾರೆ.

33ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ ಹಾಗೂ ಮನೆಗಳ ಖರೀದಿ ಮೇಲೆ ಶೇ 5 ರಷ್ಟು ಜಿಎಸ್​ಟಿ ಕಡಿತ ಮಾಡುವ ನಿರ್ಧಾರ ಪ್ರಕಟಿಸಲಾಗಿದೆ. ಹೀಗಾಗಿ, ಫ್ಲಾಟ್ ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ.

ಜಿಎಸ್ಟಿ ತಗ್ಗಿದ್ದರಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೇನು ಲಾಭ? ಜಿಎಸ್ಟಿ ತಗ್ಗಿದ್ದರಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೇನು ಲಾಭ?

ಮಂಗಳವಾರದಂದು ನಡೆದ ರಿಯಲ್ ಎಸ್ಟೇಟ್ ವಲಯದ ಪರಿಷ್ಕೃತ ತೆರಿಗೆ ಜಾರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ 34ನೇ ಸಭೆಯ ನಂತರ ಮಾತನಾಡಿದ ಕಂದಾಯ ಕಾರ್ಯದರ್ಶಿ ಎ.ಬಿ.ಪಾಂಡೆ, ಬಿಲ್ಡರ್ ಗಳು ಎರಡು ಹಂತದಲ್ಲಿ ತೆರಿಗೆ ದರ ಕಟ್ಟಬಹುದು, ಮಾರ್ಚ್ 31ರೊಳಗೆ ನಿರ್ಮಾಣ ಹಂತದ ಕಟ್ಟಡಕ್ಕೆ ಶೇ12ರಂತೆ ಜಿಎಸ್ಟಿ ಬಳಸಬಹುದು ಅಥವಾ ಏಪ್ರಿಲ್ 01ರಿಂದ ಶೇ 5ರಂತೆ ದರ ವಿಧಿಸಬಹುದು ಎಂದರು.

GST on Real Estate: GST Council allows builders to choose between 2 tax rates

45 ಲಕ್ಷ ರು ಕಡಿಮೆ ದರದ ವಸತಿ ನಿವೇಶನಗಳನ್ನು ಕೈಗೆಟಕುವ ವಸತಿ ಎಂದು ಪರಿಗಣಿಸಿ ಶೇ 1ರಷ್ಟು ಜಿ ಎಸ್ಟಿ ಹಾಕಲಾಗಿದೆ. ಈ ಮುಂಚೆ ಶೇ 8ರಷ್ಟು ತೆರಿಗೆ ಕಟ್ಟಬೇಕಾಗಿತ್ತು. ಆದರೆ, 45 ಲಕ್ಷ ರು ಮಿತಿಯ ನಿರ್ಮಾಣ ಹಂತದ ಕಟ್ಟಡವಾದರೆ ಶೇ 5ರಷ್ಟು ಜಿಎಸ್ಟಿ ಕಟ್ಟಬೇಕಾಗುತ್ತದೆ

ಕಟ್ಟಡ ನಿರ್ಮಾಣದ ವೆಚ್ಚ : ಶೇ12ರಷ್ಟು ತೆರಿಗೆ ಅಲ್ಲದೆ, ಮನೆ ಕಟ್ಟಲು ಬಳಸುವ ಸಾಮಾಗ್ರಿಗಳಾದ ಉಕ್ಕು(ಶೇ18), ಸಿಮೆಂಟ್ (28%), ಮಾರ್ಬಲ್ ಹಾಗೂ ಗ್ರಾನೈಟ್ (28%), ಮಾರ್ಬಲ್ ಬ್ಲಾಕ್ (12%), ಹಾರುವ ಬೂದಿ ಇಟ್ಟಿಗೆ (12%), ಮರಳು, ಕಲ್ಲು, ಜಲ್ಲಿ (ಶೇ5), ಲಿಫ್ಟ್ ಹಾಗೂ ಇನ್ನಿತರ ಪರಿಕರ (ಶೇ28) ಹೀಗೆ ಶೇ 18 ರಿಂದ 28ರ ಸರಾಸರಿಯಲ್ಲಿ ತೆರಿಗೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಏರಿಕೆಗೆ ಕಾರಣವಾಗಿದೆ. ಬಾಡಿಗೆ ಕಟ್ಟಡ, ಗೃಹ ಸಾಲ ಸೇರಿದಂತೆ ಅನೇಕ ಕಡೆಗಳಲ್ಲಿ ತೆರಿಗೆ ಎದುರಿಸಬೇಕಾಗಿದೆ.

English summary
The GST Council on Tuesday sought to address builders’ concerns related to their inventory of under-construction housing units by allowing them to choose between the existing higher tax rate with input credit and the new flat rate that will be effective from April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X