ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬಾಡಿಗೆ ಮೇಲೂ ಶೇಕಡಾ 18ರಷ್ಟು ಜಿಎಸ್‌ಟಿ ಕಟ್ಟಬೇಕಾ?: ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

|
Google Oneindia Kannada News

ಜೂನ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 47 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆರಿಗೆ ಪದ್ಧತಿಯಲ್ಲಿ ಪ್ರಸ್ತಾಪಿಸಲಾದ ಹಲವಾರು ಬದಲಾವಣೆಗಳಿಗೆ ಅನುಮೋದನೆಯ ದೊರೆತಿದೆ. ಜಿಎಸ್‌ಟಿ ನೂತನ ತೆರಿಗೆ ಜುಲೈ 18ರಿಂದಲೇ ಅನ್ವಯವಾಗುತ್ತದೆ.

ಈ ಹಿಂದೆ, ಬಾಡಿಗೆ ಅಥವಾ ಗುತ್ತಿಗೆ ಆಧಾರದ ಮೇಲೆ ನೀಡಲಾದ ಕಚೇರಿಗಳು ಅಥವಾ ವ್ಯಾಪಾರ ಮಳಿಗೆಗಳಂತಹ ಸ್ಥಳಗಳು, ವಾಣಿಜ್ಯ ಆಸ್ತಿಗಳ ಮೇಲೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಮನೆಗಳು ಅಥವಾ ವ್ಯಕ್ತಿಗಳಿಂದ ವಸತಿ ಆಸ್ತಿಗಳ ಬಾಡಿಗೆ ಅಥವಾ ಗುತ್ತಿಗೆಯ ಮೇಲೆ ಯಾವುದೇ ಜಿಎಸ್‌ಟಿ ವಿಧಿಸುತ್ತಿರಲಿಲ್ಲ.

ಚೆಕ್‌ಬುಕ್, ಐಸಿಯು, ಅಂತ್ಯಕ್ರಿಯೆ ಮೇಲೆ ಜಿಎಸ್‌ಟಿ ವಿಧಿಸಿಲ್ಲ: ನಿರ್ಮಲಾ ಸೀತಾರಾಮನ್‌ಚೆಕ್‌ಬುಕ್, ಐಸಿಯು, ಅಂತ್ಯಕ್ರಿಯೆ ಮೇಲೆ ಜಿಎಸ್‌ಟಿ ವಿಧಿಸಿಲ್ಲ: ನಿರ್ಮಲಾ ಸೀತಾರಾಮನ್‌

ನೂತನ ನಿಯಮದ ಪ್ರಕಾರ, ಬಾಡಿಗೆದಾರರು ಮನೆ ಬಾಡಿಗೆಗೆ ಶೇಕಡ 18 ರಷ್ಟು ಜಿಎಸ್‌ಟಿ ಪಾವತಿಸಲು ಕಡ್ಡಾಯಗೊಳಿಸಲಾಗಿದೆ. ಆದರೆ ಈ ನೂತನ ಜಿಎಸ್‌ಟಿ ನಿಯಮಗಳು ಬಾಡಿಗೆದಾರರು ಮತ್ತು ಮನೆ ಮಾಲೀಕರಲ್ಲಿ ಹಲವು ಗೊಂದಲ ಮೂಡಿಸಿದೆ.

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಬಾಡಿಗೆದಾರರು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇನ್‌ಪುಟ್ ತೆರಿಗೆ ಕ್ರೆಡಿಟ್ ಅಡಿಯಲ್ಲಿ ಬಾಡಿಗೆ ಮೇಲೆ ಪಾವತಿಸಿದ ಜಿಎಸ್‌ಟಿಯನ್ನು ಕ್ಲೈಮ್ ಮಾಡಬಹುದಾಗಿದೆ.

 ಎಲ್ಲಾ ಬಾಡಿಗೆದಾರರಿಗೂ ಜಿಎಸ್‌ಟಿ ಅನ್ವಯ ಆಗಲ್ಲ

ಎಲ್ಲಾ ಬಾಡಿಗೆದಾರರಿಗೂ ಜಿಎಸ್‌ಟಿ ಅನ್ವಯ ಆಗಲ್ಲ

ಆದರೆ, ನೂತನ ನಿಯಮ ಜಾರಿಗೆ ಬಂದರೂ ಎಲ್ಲರೂ ಬಾಡಿಗೆ ಮೇಲೆ ಜಿಎಸ್‌ಟಿ ಕಟ್ಟುವ ಅವಶ್ಯಕತೆ ಇಲ್ಲ. ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳದ ಸಾಮಾನ್ಯ ವೇತನದಾರರು ತಾವು ಕಟ್ಟುವ ಮನೆ ಬಾಡಿಗೆ ಮೇಲೆ ಜಿಎಸ್‌ಟಿ ಅನ್ವಯ ಆಗುವುದಿಲ್ಲ. ಈ ಮೂಲಕ ಸಾಮಾನ್ಯ ನಾಗರಿಕರು ಬಾಡಿಗೆ ಮೇಲಿನ ಜಿಎಸ್‌ಟಿಯಿಂದ ವಿನಾಯಿತಿ ಪಡೆಯುತ್ತಾರೆ.

ಇದೇ ನಿಯಮ ಮನೆ ಬಾಡಿಗೆದಾರ ಅಥವಾ ಮಾಲಿಕರಿಗೆ ಅನ್ವಯಿಸುತ್ತದೆ, ಮನೆ ಮಾಲೀಕರು ಜಿಎಸ್‌ಟಿ ನೋಂದಣಿ ಮಾಡಿಕೊಂಡಿಲ್ಲದಿದ್ದರೆ, ಅಥವಾ ಅವರ ಆದಾಯ ಜಿಎಸ್‌ಟಿ ವ್ಯಾಪ್ತಿಗೆ ಬಂದಿಲ್ಲವಾದರೆ ಮನೆ ಅಥವಾ ಆಸ್ತಿಯ ಮಾಲಿಕರು ತಾವು ಪಡೆಯುವ ಬಾಡಿಗೆ ಹಣಕ್ಕೆ ಯಾವುದೇ ಜಿಎಸ್‌ಟಿ ಅನ್ವಯ ಆಗುವುದಿಲ್ಲ.

 ಭಾರತದಲ್ಲಿ ಜಿಎಸ್‌ಟಿ ಬಂಪರ್; ಜುಲೈನಲ್ಲಿ 1.48 ಲಕ್ಷ ಕೋಟಿ ಆದಾಯ ಭಾರತದಲ್ಲಿ ಜಿಎಸ್‌ಟಿ ಬಂಪರ್; ಜುಲೈನಲ್ಲಿ 1.48 ಲಕ್ಷ ಕೋಟಿ ಆದಾಯ

 ಜಿಎಸ್‌ಟಿ ನೋಂದಾಯಿತ ವ್ಯಕ್ತಿಗಳಿಗೆ ಅನ್ವಯ

ಜಿಎಸ್‌ಟಿ ನೋಂದಾಯಿತ ವ್ಯಕ್ತಿಗಳಿಗೆ ಅನ್ವಯ

ಜಿಎಸ್‌ಟಿ ನೋಂದಾಯಿತ ವ್ಯಕ್ತಿಗಳಿಗೆ ತೆರಿಗೆಯನ್ನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಮೂಲಕ ವಿಧಿಸಲಾಗುತ್ತದೆ. ಈ ನಿಯಮದಂತೆ ಬಾಡಿಗೆದಾರ ಜಿಎಸ್‌ಟಿ ನೋಂದಾಯಿತ ವ್ಯಕ್ತಿಯಾಗಿದ್ದರೆ ಆತ ಬಾಡಿಗೆ ಮೇಲೂ ಕೂಡ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಆಸ್ತಿಯ ಇಲ್ಲಿ ಮಾಲಿಕರು ತೆರಿಗೆಯಿಂದ ವಿನಾಯಿತಿ ಪಡೆಯುತ್ತಾರೆ.

ಉದಾಹರಣೆಗೆ, ಒಂದು ಕಂಪನಿ ತನ್ನ ಉದ್ಯೋಗಿಗಳಿಗೆ ವಸತಿಗಾಗಿ ಫ್ಲಾಟ್‌ಗಳನ್ನು ಬಾಡಿಗೆಗೆ ನೀಡಿದರೆ, ಆ ಕಂಪನಿಯನ್ನು ಬಾಡಿಗೆದಾರ ಎಂದು ಪರಿಗಣಿಸಲಾಗುತ್ತದೆ. ಕಂಪನಿ ಯಾವುದೇ ಜಿಎಸ್‌ಟಿ ಪಾವತಿ ಮಾಡಬೇಕಿಲ್ಲ, ಆದರೆ ಉದ್ಯೋಗಿಗಳು ಬಾಡಿಗೆ ಮೇಲೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ರಿವರ್ಸ್ ಚಾರ್ಜ್ ಕಾರ್ಯವಿಧಾನದ ಅಡಿಯಲ್ಲಿ, ತೆರಿಗೆ ಪಾವತಿಸುವ ಹೊಣೆಗಾರಿಕೆಯು ಸರಕು ಅಥವಾ ಸೇವೆಯ ಪೂರೈಕೆದಾರರ ಬದಲಿಗೆ ಸರಕು ಅಥವಾ ಸೇವೆಯನ್ನು ಸ್ವೀಕರಿಸುವರ ಮೇಲೆ ಅನ್ವಯ ಆಗುತ್ತದೆ.

 ಕೆಲವು ಸಂಭವನೀಯ ಸನ್ನಿವೇಶಗಳು

ಕೆಲವು ಸಂಭವನೀಯ ಸನ್ನಿವೇಶಗಳು

ಮನೆ ಅಥವಾ ಆಸ್ತಿಯ ಮಾಲೀಕರು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸದಿದ್ದಲ್ಲಿ ಆ ಮನೆ ಅಥವಾ ಆಸ್ತಿಯನ್ನು ಬಾಡಿಗೆ ಅಥವಾ ಗುತ್ತಿಗೆಗೆ ಪಡೆದ ವ್ಯಕ್ತಿ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದರೆ ಈ ಸಂದರ್ಭದಲ್ಲಿ ಬಾಡಿಗೆದಾರನೇ ಬಾಡಿಗೆ ಅಥವಾ ಗುತ್ತಿಗೆ ಹಣದ ಮೇಲೆ ಜಿಎಸ್‌ಟಿ ಪಾವತಿಸಲು ಜವಾಬ್ದಾರನಾಗಿರುತ್ತಾನೆ.

ಮಾಲೀಕರು ಮತ್ತು ಬಾಡಿಗೆದಾರರು ಇಬ್ಬರೂ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸದಿದ್ದರೆ, ನೂತನ ಜಿಎಸ್‌ಟಿ ನಿಯಮಗಳು ಅನ್ವಯ ಆಗುವುದಿಲ್ಲ.

"ವ್ಯಾಪಾರ ಅಥವಾ ವೃತ್ತಿಯನ್ನು ನಿರ್ವಹಿಸುವ ಜಿಎಸ್‌ಟಿ-ನೋಂದಾಯಿತ ವ್ಯಕ್ತಿಯು ಮಾಲೀಕರಿಗೆ ಪಾವತಿಸುವ ಬಾಡಿಗೆ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ" ಎಂದು ಕ್ಲಿಯರ್‌ಟ್ಯಾಕ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ವಿವರಿಸಿದ್ದಾರೆ.

 ಜಿಎಸ್‌ಟಿ ನೋಂದಣಿ ಮಿತಿ ಎಷ್ಟು?

ಜಿಎಸ್‌ಟಿ ನೋಂದಣಿ ಮಿತಿ ಎಷ್ಟು?

ಜಿಎಸ್‌ಟಿ ಕಾನೂನಿನಡಿಯಲ್ಲಿ, ನೋಂದಾಯಿತ ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ವ್ಯಾಪಾರ ಅಥವಾ ವೃತ್ತಿಯನ್ನು ನಡೆಸುತ್ತಿರುವ ವ್ಯಕ್ತಿಯು ಮಿತಿಗಿಂತ ಹೆಚ್ಚಿನ ವಾರ್ಷಿಕ ವಹಿವಾಟನ್ನು ಹೊಂದಿದ್ದಾಗ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದೆ.

ಜಿಎಸ್‌ಟಿ ಕಾನೂನಿನ ಅಡಿಯಲ್ಲಿ ಮಿತಿಯು ಪೂರೈಕೆಯ ಸ್ವರೂಪ ಮತ್ತು ಸ್ಥಳದ ಪ್ರಕಾರ ಬದಲಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಸೇವಾ ಪೂರೈಕೆದಾರರ ವಹಿವಾಟು 20 ಲಕ್ಷ ರುಪಾಯಿ ಮತ್ತು ಸರಕು ಪೂರೈಕೆದಾರ ವಹಿವಾಟು 40 ಲಕ್ಷ ರುಪಾಯಿ ಮೀರಿದಾಗ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

English summary
The goods and services tax (GST) is in attention these days as to whether a salaried individual should pay GST on home rent. As recommended at the 47th GST Council meeting, the tenant should pay 18 per cent GST on a reverse charge basis (RCM). However, they can claim this value as a deduction while they pay tax on sales in GST returns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X