ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಕುಶಲ ವಸ್ತುಗಳಿಗೆ 0% ಜಿಎಸ್ಟಿ, ಕೃಷಿ ಉಪಕರಣಗಳ ತೆರಿಗೆ ಕಡಿತ

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 18: ಜನರ ಹಕ್ಕೊತ್ತಾಯಕ್ಕೆ ಸರಕಾರ ಕೊನೆಗೂ ಮಣಿದಿದ್ದು ಕರಕುಶಲ ವಸ್ತುಗಳು ಹಾಗೂ ಕೃಷಿ ಯಂತ್ರೋಪಕರಣಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯನ್ನು ಇಳಿಕೆ ಮಾಡಲಾಗಿದೆ.

29 ಬಗೆಯ ಕರಕುಶಲ ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಶೇಕಡಾ 0ಕ್ಕೆ ಇಳಿಕೆ ಮಾಡಲಾಗಿದೆ. ಮತ್ತು 53 ಸೇವೆಗಳ ಜಿಎಸ್ಟಿ ದರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಉತ್ತರಾಖಂಡ್ ಹಣಕಾಸು ಸಚಿವ ಪ್ರಕಾಶ್ ಪಂತ್ ಜಿಎಸ್ಟಿ ಕೌನ್ಸಿಲ್ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಪರಿಷ್ಕೃತ ದರ ಜನವರಿ 25ರಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.

ಕರಕುಶಲ ವಸ್ತುಗಳ ಮೇಲೆ ಈ ಹಿಂದೆ ಶೇಕಡಾ 5 ತೆರಿಗೆ ವಿಧಿಸಲಾಗುತ್ತಿತ್ತು. ಈಗ ಇದನ್ನು ಶೇಕಡಾ 0ಗೆ ಇಳಿಕೆ ಮಾಡಲಾಗಿದೆ. ಕರಕುಶಲ ವಸ್ತುಗಳ ಮೇಲಿನ ತೆರಿಗೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಕರ್ನಾಟಕದಲ್ಲಿ ಭಾರೀ ಹೋರಾಟ ನಡೆದಿತ್ತು. ಕರಕುಶಲ ವಸ್ತುಗಳ ಮೇಲಿನ ತೆರಿಗೆ ರದ್ದಿಗೆ ಒತ್ತಾಯಿಸಿ ಪ್ರಸನ್ನ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು.

 GST on handicrafts items reduced to 0%

ಇಂದಿನ ಸಭೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆಯ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರಲು ಸಾಧ್ಯವಿದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಜೇಟ್ಲಿ ಹೇಳಿದರು.

"ಸಭೆಯಲ್ಲಿ ಜಿಎಸ್ಟಿ ರಿಟರ್ನ್ ಫೈಲಿಂಗ್ ಸರಳಗೊಳಿಸುವ ಬಗ್ಗೆ ಚರ್ಚೆ ನಡೆಯಿತು. ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸುವ ಬಗ್ಗೆ ನಂದನ್ ನಿಲೇಕಣಿ ವಿವರವಾದ ಮಾಹಿತಿ ನೀಡಿದರು," ಎಂದು ಅರುಣ್ ಜೇಟ್ಲಿ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

English summary
29 handicrafts items have been put in 0% slab and tax has been reduced on around 49 items. Decision on petroleum products is pending as of now," said Uttarakhand Finance Minister Prakash Pant after GST council meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X