ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಗೂ ಮುನ್ನ ಸಿಮೆಂಟ್ ಬೆಲೆ ಇಳಿಕೆ ಸಾಧ್ಯತೆ!

|
Google Oneindia Kannada News

ನವದೆಹಲಿ, ಡಿಸೆಂಬರ್ 24: ಲೋಕಸಭೆ ಚುನಾವಣೆ 2019ಕ್ಕೂ ಮುನ್ನ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಶುಭ ಸುದ್ದಿ ಸಿಕ್ಕಿದ ರೀತಿಯಲ್ಲೇ ಸಿಮೆಂಟ್ ಉತ್ಪಾದನಾ ಕ್ಷೇತ್ರಕ್ಕೂ ಕೇಂದ್ರ ಸರ್ಕಾರವು ಶುಭ ಸುದ್ದಿ ನೀಡುವ ಸಾಧ್ಯತೆ ಹೆಚ್ಚಿದೆ. ಸಿಮೆಂಟ್ ಮೇಲಿನ ಜಿಎಸ್ಟಿ ಹೊರೆಯನ್ನು ಇಳಿಸಲು ಭಾರಿ ಒತ್ತಡ ಬಂದಿದೆ.

ಸದ್ಯ ಶೇ 28ರ ಸ್ಲ್ಯಾಬಿನಲ್ಲಿರುವ ಸಿಮೆಂಟ್ ಬೆಲೆಯನ್ನು ತಗ್ಗಿಸಿದರೆ, ಸರ್ಕಾರಕ್ಕೆ ವಾರ್ಷಿಕ 13,000ಕೋಟಿ ರು ಹೆಚ್ಚುವರಿ ಹೊರೆ ಬೀಳಲಿದೆ. ಆದರೆ, ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಮೇಲಿನ ಜಿಎಸ್ಟಿಯನ್ನು ಶೇ 5ಕ್ಕೆ ಇಳಿಸಿದರೆ, ಸಿಮೆಂಟ್ ಹಾಗೂ ಇನ್ನಿತರ ಕಟ್ಟಡ ನಿರ್ಮಾಣ ಬಳಕೆ ಸಾಮಾಗ್ರಿಗಳ ಮೇಲಿನ ಜಿಎಸ್ಟಿ ತಗ್ಗಿಸುವ ಸಾಧ್ಯತೆಯೂ ಹೆಚ್ಚಿದೆ.

ಜನವರಿ ನಂತರ ಅಪಾರ್ಟ್ಮೆಂಟ್ ಖರೀದಿಸಿ, ಜಿಎಸ್ಟಿ ತಗ್ಗಲಿದೆ!ಜನವರಿ ನಂತರ ಅಪಾರ್ಟ್ಮೆಂಟ್ ಖರೀದಿಸಿ, ಜಿಎಸ್ಟಿ ತಗ್ಗಲಿದೆ!

ದಾಲ್ಮಿಯಾ ಸಿಮೆಂಟ್ ಸಿಇಒ, ಸಿಮೆಂಟ್ ಉತ್ಪಾದಕರ ಸಂಘದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಸಿಂಘಿ ಈ ಬಗ್ಗೆ ಪ್ರತಿಕ್ರಿಯಿಸಿ, 'ಜಿಎಸ್ಟಿ ಇಳಿಕೆಯಿಂದ ಕಟ್ಟಡ ನಿರ್ಮಾಣಕ್ಕೂ ಉತ್ತೇಜನ ಸಿಗಲಿದೆ, ಫ್ಲಾಟ್, ಅಪಾರ್ಟ್ಮೆಂಟ್ ಖರೀದಿದಾರರಿಗೂ ಪ್ರೋತ್ಸಾಹ ಸಿಗಲಿದೆ. ಜಿಡಿಪಿ ಪ್ರಗತಿಯನ್ನು ಗಮನದಲ್ಲಿಟುಕೊಂಡು ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ. 2022ರ ವೇಳೆಗೆ 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಗುರಿಯಿದೆ' ಎಂದಿದ್ದಾರೆ.

ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್

GST on cement likely to be get lowered

ಕಟ್ಟಡ ನಿರ್ಮಾಣದ ವೆಚ್ಚ : ಶೇ12ರಷ್ಟು ತೆರಿಗೆ ಅಲ್ಲದೆ, ಮನೆ ಕಟ್ಟಲು ಬಳಸುವ ಸಾಮಾಗ್ರಿಗಳಾದ ಉಕ್ಕು(ಶೇ18), ಸಿಮೆಂಟ್ (28%), ಮಾರ್ಬಲ್ ಹಾಗೂ ಗ್ರಾನೈಟ್ (28%), ಮಾರ್ಬಲ್ ಬ್ಲಾಕ್ (12%), ಹಾರುವ ಬೂದಿ ಇಟ್ಟಿಗೆ (12%), ಮರಳು, ಕಲ್ಲು, ಜಲ್ಲಿ (ಶೇ5), ಲಿಫ್ಟ್ ಹಾಗೂ ಇನ್ನಿತರ ಪರಿಕರ (ಶೇ28) ಹೀಗೆ ಶೇ 18 ರಿಂದ 28ರ ಸರಾಸರಿಯಲ್ಲಿ ತೆರಿಗೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಏರಿಕೆಗೆ ಕಾರಣವಾಗಿದೆ.

ಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆ ಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆ

ಬಾಡಿಗೆ ಕಟ್ಟಡ, ಗೃಹ ಸಾಲ ಸೇರಿದಂತೆ ಅನೇಕ ಕಡೆಗಳಲ್ಲಿ ತೆರಿಗೆ ಎದುರಿಸಬೇಕಾಗಿದೆ. ಒಟ್ಟಾರೆಯಾಗಿ, 1 ಕೋಟಿ ರುಗೂ ಕಡಿಮೆ ದರ ಮನೆ(2,000 ಚದರ ಅಡಿ)ಗೆ ಶೇ 3.75ರಷ್ಟು ತೆರಿಗೆ ಎದುರಿಸಬೇಕಾಗುತ್ತದೆ. ಇದಲ್ಲದೆ, ಆಯಾ ರಾಜ್ಯಗಳ ಸೆಸ್ ಸೇರಿ ರಿಯಲ್ ಎಸ್ಟೇಟ್ ಉದ್ಯಮ, ಗ್ರಾಹಕ ಇಬ್ಬರಿಗೂ ತೆರಿಗೆ ಹೊರೆಯಾಗಲಿದೆ.

English summary
The Union government is expected to lowered the Goods and Service Tax (GST) on Cement before Lok sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X