ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ಹಿನ್ನಲೆ, ಜಿಎಸ್ಟಿಯಲ್ಲಿ ಭಾರಿ ಬದಲಾವಣೆ!

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 01: ಮುಂಬರುವ ಲೋಕಸಭೆ ಚುನಾವಣೆ 2019ರ ಹಿನ್ನಲೆಯಲ್ಲಿ ಸರಕು ಸೇವಾ ತೆರಿಗೆ (ಜಿಎಸ್ಟಿ) ಮತ್ತಷ್ಟು ಸುಧಾರಣೆಗೊಳ್ಳುವ ಸೂಚನೆ ಸಿಕ್ಕಿದೆ. ಹಾಲಿ ನಾಲ್ಕು ಸ್ತರದ ತೆರಿಗೆಯನ್ನು ಮೂರು ಸ್ತರಕ್ಕೆ ಸೀಮಿತಗೊಳಿಸುವ ಪ್ರಸ್ತಾವನೆಯೊಂದು ವಿತ್ತ ಸಚಿವಾಲಯದ ಮುಂದಿದೆ. ಹೀಗಾದರೆ, ಮತ್ತೊಮ್ಮೆ ಸಾಮಾಗ್ರಿಗಳ ಬೆಲೆಯಲ್ಲಿ ಏರಿಳಿತವಾಗುತ್ತದೆಯೇ? ಶೇ 28ರಷ್ಟು ಜಿಎಸ್ಟಿ ಹೊರೆಯಾಗುತ್ತಿಲ್ಲವೇ? ಮುಂದೆ ಓದಿ...

ದೇಶದಾದ್ಯಂತ ಏಕರೂಪ ತೆರಿಗೆ ಜಾರಿಗೆ ತರುವ ಉದ್ದೇಶದಿಂದ ಅನುಷ್ಠಾನಗೊಂಡ ಜಿಎಸ್ಟಿಗೆ ಒಂದು ವರ್ಷವಾಗಿದೆ. ಒಂದು ವರ್ಷದಲ್ಲಿ ಸುಮಾರು 328 ಸರಕು ಸೇವೆಗಳ ಮೇಲಿನ ತೆರಿಗೆ ಹೊರೆ ಇಳಿಸಲಾಗಿದೆ. ಆದರೆ, ವಿವಿಧ ಸ್ತರದಲ್ಲಿರುವ ಜನ ಸಾಮಾನ್ಯರ ದಿನ ನಿತ್ಯ ಬಳಕೆಯ ಸೇವೆಗಳ ಮೇಲಿನ ತೆರಿಗೆ ತಗ್ಗಿಸುವ ಬೇಡಿಕೆ ಇನ್ನೂ ಮುಂದುವರೆದಿದೆ.

ಜಿಎಸ್ಟಿ ದರ ಕಡಿತ : ಯಾವ್ಯಾವ ಉತ್ಪನ್ನಗಳು ಸೋವಿಯಾಗಿವೆಜಿಎಸ್ಟಿ ದರ ಕಡಿತ : ಯಾವ್ಯಾವ ಉತ್ಪನ್ನಗಳು ಸೋವಿಯಾಗಿವೆ

ದೆಹಲಿಯಲ್ಲಿ ಕಳೆದ ತಿಂಗಳು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ನ್ಯಾಪ್ಕಿನ್, ಕೈಮಗ್ಗ, ಕರಕುಶಲ ಉತ್ಪನ್ನ ಸೇರಿದಂತೆ 40ಕ್ಕೂ ಅಧಿಕ ಸರಕು, ಸೇವೆಗಳ ತೆರಿಗೆ ಹೊರೆ ಇಳಿಸುವ ಪ್ರಸ್ತಾವನೆ ಬಂದಿತ್ತು. ಆದರೆ, ನಿರೀಕ್ಷೆಗೂ ಮೀರಿ 90ಕ್ಕೂ ಅಧಿಕ ಸಾಮಾಗ್ರಿಗಳ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ.

ಶೇ. 28ರ ಸ್ತರವನ್ನು ರದ್ದು ಮಾಡಬೇಕು ಎಂಬ ಬೇಡಿಕೆ ಜೊತೆಗೆ ಈಗ ಹೊಸದೊಂದು ಬೇಡಿಕೆ ಶುರುವಾಗಿದೆ. ಈ ಬಗ್ಗೆ ಅಂತಿಮ ನಿರ್ಣಯ ನವೆಂಬರ್ ಹೊತ್ತಿಗೆ ತಿಳಿಯಲಿದೆ. ಸದ್ಯಕ್ಕೆ ಸಾಧ್ಯಾಸಾಧ್ಯತೆ ಬಗ್ಗೆ ವಿವರಣೆ ಮುಂದಿದೆ...

ಶೇ 12 ಹಾಗೂ ಶೇ 18ರ ಸ್ತರಗಳು ಇರಲ್ಲ

ಶೇ 12 ಹಾಗೂ ಶೇ 18ರ ಸ್ತರಗಳು ಇರಲ್ಲ

ಶೇ. 5, 12, 18 ಮತ್ತು ಶೇ. 28ರ ಸ್ತರದಲ್ಲಿ 1300ಕ್ಕೂ ಹೆಚ್ಚು ವಸ್ತುಗಳು ಹಾಗೂ 500ಕ್ಕೂ ಅಧಿಕ ಸೇವೆಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಚಿನ್ನಕ್ಕೆ ಶೇ. 3 ಮತ್ತು ಬೆಲೆಬಾಳುವ ಹರಳುಗಳಿಗೆ ಶೇ. 0.25 ತೆರಿಗೆ ವಿಧಿಸಲಾಗುತ್ತಿದೆ. ಈಗ ಶೇ. 12 ಮತ್ತು 18ನ್ನು ವಿಲೀನಗೊಳಿಸಿ ಶೇ. 15ರ ಹೊಸ ಸ್ತರ ಪರಿಚಯಿಸುವ ಚಿಂತನೆ ಇದೆ. ಈ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ನವೆಂಬರ್ 2018ರಿಂದ ಕೇವಲ ಮೂರು ಸ್ತರಗಳಲ್ಲಿ ಮಾತ್ರ ಜಿಎಸ್ಟಿ ಇರಲಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ಹೇಳಿವೆ.

ಯಾವ ಪದಾರ್ಥಗಳ ಮೇಲೆ ತೆರಿಗೆ ಇರಲ್ಲ

ಯಾವ ಪದಾರ್ಥಗಳ ಮೇಲೆ ತೆರಿಗೆ ಇರಲ್ಲ

ಲಕೋಟೆಯಲ್ಲಿ ಪ್ಯಾಕ್ ಮಾಡದ ಆಹಾರ ಧಾನ್ಯಗಳು, ಹಾಲು, ಮೊಟ್ಟೆ, ಮೊಸರು, ಲಸ್ಸಿ, ಪನ್ನೀರ್, ಬ್ರಾಂಡ್ ಅಲ್ಲದ ನೈಸರ್ಗಿಕ ಜೇನು ತುಪ್ಪ, ತರಕಾರಿ, ಪ್ಯಾಕ್ ಮಾಡದ ಗೋಧಿ, ಮೈದಾ, ಕಡಲೆ ಹಿಟ್ಟು, ಉಪ್ಪು, ಗರ್ಭನಿರೋಧಕಗಳು, ಕಚ್ಛಾ ಸೆಣಬು, ಕಚ್ಛಾ ರೇಷ್ಮೆ ಜಿಎಸ್ಟಿಯಿಂದ ಮುಕ್ತವಾಗಿವೆ. ಇನ್ನು ಶಿಕ್ಷಣ ಮತ್ತು ಆರೋಗ್ಯ ವಲಯವನ್ನು ಜಿಎಸ್ಟಿಯಿಂದ ಹೊರಗಿಡಲಾಗಿದೆ. ಎರಡೂ ಸೇವೆಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಇಲ್ಲ

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಇಲ್ಲ

ಜಿಎಸ್ ಟಿ ಪೆಟ್ರೋಲಿಯಂ ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೆ ಅನ್ವಯವಾಗಲ್ಲ. ಇದರಿಂದ ಸರ್ಕಾದರ ಬೊಕ್ಕಸಕ್ಕೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಪೆಟ್ರೋಲ್ ಮೇಲಿನ ಬೆಲೆ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38ರು ಆಗಲಿದೆ ಎಂಬ ಎಣಿಕೆಯಿದೆ. ಆದರೆ, ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ.

ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ

ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ

ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ ತರಬೇಕು ಎಂಬ ಬೇಡಿಕೆ ಇದ್ದರೂ, ಕಷ್ಟಸಾಧ್ಯ. ಎಲ್ಲಾ ರಾಜ್ಯಗಳ ಆದಾಯ ಸೇರಿ 31,000 ಕೋಟಿ ರು ವಾರ್ಷಿಕ ಆದಾಯದ ಈ ಕ್ಷೇತ್ರದಲ್ಲಿ ಜಿಎಸ್ಟಿ ಜಾರಿಯಾದರೆ ವಿದ್ಯುತ್ ಆಧಾರಿತ ಉತ್ಪನ್ನಗಳ ಮೇಲಿನ ತೆರಿಗೆ ಕೂಡಾ ಪರಿಷ್ಕರಣೆಗೊಳ್ಳಬೇಕಾಗುತ್ತದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡಕ್ಕೂ ಆದಾಯ ಖೋತಾ ಹಾಗೂ ನಷ್ಟ ಎದುರಾಗಲಿದೆ. ಒಂದು ವೇಳೆ ಶೇ 5ರಷ್ಟು ತೆರಿಗೆ ಜಾರಿಗೆ ಬಂದರೆ, ರಾಜ್ಯ ಸರ್ಕಾರ ತನ್ನ ನಷ್ಟ ಸರಿದೂಗಿಸಲು ಜಿಎಸ್ಟಿಯೇತರ ಸೆಸ್ ಹಾಕಬಹುದು. ಒಟ್ಟಾರೆ, ಗ್ರಾಹಕನ ಮೇಲೆ ಹೊರೆ ತಪ್ಪಿದ್ದಲ್ಲ

English summary
Goods and Services Tax ( GST) Council in July 2018 has slashed tax for more than 90 products and services which were pinching the pockets of common people. Now GST slab of 12 per cent and 18 per cent to be merged to form 15 per cent in November and thus having only three tax slabs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X