ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರ್ಷಿಕ 40 ಲಕ್ಷ ರೂ.ಗಳ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿ

|
Google Oneindia Kannada News

ನವದೆಹಲಿ, ಆಗಸ್ಟ್‌ 24: ಕೇಂದ್ರ ಹಣಕಾಸು ಸಚಿವಾಲಯ ತೆರಿಗೆದಾರರಿಗೆ ಸೋಮವಾರ ಶುಭ ಸುದ್ದಿ ನೀಡಿದೆ. ವಾರ್ಷಿಕವಾಗಿ 40 ಲಕ್ಷ ರೂಪಾಯಿಗಳ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿ ನೀಡುವುದಾಗಿ ಘೋಷಿಸಿದೆ.

''ಈಗ, ವಾರ್ಷಿಕ 40 ಲಕ್ಷ ರೂ.ಗಳ ವಹಿವಾಟು ಹೊಂದಿರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ. ಆರಂಭದಲ್ಲಿ ಈ ಮಿತಿ 20 ಲಕ್ಷ ರೂಪಾಗಿಂತ ಹೆಚ್ಚುವರಿಯಾಗಿ ನೀಡಲಾಗಿದೆ. 1.5 ಕೋಟಿ ರೂ.ಗಳ ವಹಿವಾಟು ಹೊಂದಿರುವವರು ಸಂಯೋಜನೆ ಯೋಜನೆಯನ್ನು ಆರಿಸಿಕೊಳ್ಳಬಹುದು ಮತ್ತು ಕೇವಲ 1% ತೆರಿಗೆಯನ್ನು ಪಾವತಿಸಬಹುದು'' ಎಂದು ಹಣಕಾಸು ಸಚಿವಾಲಯ ಟ್ವಿಟರ್‌ನಲ್ಲಿ ಟ್ವೀಟ್ ಮೂಲಕ ತಿಳಿಸಿದೆ.

ತೆರಿಗೆ ಸಂಗ್ರಹ: ಸರ್ಕಾರಕ್ಕೆ ಬಹುದೊಡ್ಡ ಹೊಡೆತ ಕೊಟ್ಟ ಲಾಕ್‌ಡೌನ್ತೆರಿಗೆ ಸಂಗ್ರಹ: ಸರ್ಕಾರಕ್ಕೆ ಬಹುದೊಡ್ಡ ಹೊಡೆತ ಕೊಟ್ಟ ಲಾಕ್‌ಡೌನ್

ಜಿಎಸ್‌ಟಿ ಬಿಡುಗಡೆಯಾದ ನಂತರ ತೆರಿಗೆದಾರರ ಸಂಖ್ಯೆ ದ್ವಿಗುಣಗೊಂಡಿದೆ. ಜಿಎಸ್‌ಟಿ ಪ್ರಾರಂಭವಾದ ಸಮಯದಲ್ಲಿ ಅದರ ಮೌಲ್ಯಮಾಪಕರ ಸಂಖ್ಯೆ ಸುಮಾರು 65 ಲಕ್ಷಗಳು. ಈಗ ಮೌಲ್ಯಮಾಪಕರ ಸಂಖ್ಯೆ 1.24 ಕೋಟಿ ಮೀರಿದೆ. ಜಿಎಸ್‌ಟಿಯಲ್ಲಿನ ಎಲ್ಲಾ ಪ್ರಕ್ರಿಯೆಗಳು ಸಂಪೂರ್ಣ ಸ್ವಯಂಚಾಲಿತವಾಗಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

GST Exemption : Businesses with an annual turnover of up to Rs 40 lakh are GST exempt

ಜಿಎಸ್‌ಟಿ ಜಾರಿಯಾದ ಬಳಿಕ ಇಲ್ಲಿಯವರೆಗೆ 400 ವಸ್ತುಗಳ ಮೇಲೆ ಮತ್ತು 80 ಸೇವೆಗಳ ಮೇಲಿನ ಜಿಎಸ್‌ಟಿ ಕಡಿತವಾಗಿದೆ. ಈ ದರ ಕಡಿತದಿಂದಾಗಿ 1 ಲಕ್ಷ ಕೋಟಿ ರೂಪಾಯಿ ತೆರಿಗೆದಾರರಿಗೆ ಉಳಿತಾಯವಾಗಿದೆ ಎಂದಿದೆ.

English summary
Now, businesses with an annual turnover of up to Rs 40 lakh are GST exempt. Initially, this limit was Rs 20 lakh. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X