ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ ನಂತರ ಅಪಾರ್ಟ್ಮೆಂಟ್ ಖರೀದಿಸಿ, ಜಿಎಸ್ಟಿ ತಗ್ಗಲಿದೆ!

|
Google Oneindia Kannada News

ನವದೆಹಲಿ, ಡಿಸೆಂಬರ್ 24: ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಅನೇಕ ಕ್ಷೇತ್ರಗಳಿಗೆ ಶುಭ ಸುದ್ದಿ ಸಿಕ್ಕರೂ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಯಾವುದೇ ಆಶಾದಾಯಕ ಸೂಚನೆ ಸಿಕ್ಕಿರಲಿಲ್ಲ. ಆದರೆ, ಈಗ ರಿಯಲ್ ಎಸ್ಟೇಟ್ ಕ್ಷೇತ್ರದ ಬೇಡಿಕೆಗೆ ಜಿಎಸ್ಟಿ ಕೌನ್ಸಿಲ್ ಒಪ್ಪಿಗೆ ಸೂಚಿಸುವ ಸಾಧ್ಯತೆ ಕಂಡು ಬಂದಿದೆ.

ಹೀಗಾಗಿ, ಜನವರಿ ತಿಂಗಳ ನಂತರ ನಿರ್ಮಾಣ ಹಂತದ ಫ್ಲಾಟ್, ಅಪಾರ್ಟ್ಮೆಂಟ್ ಖರೀದಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗುವ ಸಾಧ್ಯತೆಯಿದೆ. ಈ ಬಗ್ಗೆ ಜಿಎಸ್ಟಿ ಕೌನ್ಸಿಲ್ ನ ಫಿಟ್ಮೆಂಟ್ ಸಮಿತಿ ನಿರ್ಧಾರ ಕೈಗೊಳ್ಳಲಿದೆ.

ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್ ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್

ಕಟ್ಟಡ ನಿರ್ಮಾಣದ ವೆಚ್ಚ : ಶೇ12ರಷ್ಟು ತೆರಿಗೆ ಅಲ್ಲದೆ, ಮನೆ ಕಟ್ಟಲು ಬಳಸುವ ಸಾಮಾಗ್ರಿಗಳಾದ ಉಕ್ಕು(ಶೇ18), ಸಿಮೆಂಟ್ (28%), ಮಾರ್ಬಲ್ ಹಾಗೂ ಗ್ರಾನೈಟ್ (28%), ಮಾರ್ಬಲ್ ಬ್ಲಾಕ್ (12%), ಹಾರುವ ಬೂದಿ ಇಟ್ಟಿಗೆ (12%), ಮರಳು, ಕಲ್ಲು, ಜಲ್ಲಿ (ಶೇ5), ಲಿಫ್ಟ್ ಹಾಗೂ ಇನ್ನಿತರ ಪರಿಕರ (ಶೇ28) ಹೀಗೆ ಶೇ 18 ರಿಂದ 28ರ ಸರಾಸರಿಯಲ್ಲಿ ತೆರಿಗೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಏರಿಕೆಗೆ ಕಾರಣವಾಗಿದೆ. ಬಾಡಿಗೆ ಕಟ್ಟಡ, ಗೃಹ ಸಾಲ ಸೇರಿದಂತೆ ಅನೇಕ ಕಡೆಗಳಲ್ಲಿ ತೆರಿಗೆ ಎದುರಿಸಬೇಕಾಗಿದೆ.

GST cut in real estate: Buying flats can may become cheaper

ಒಟ್ಟಾರೆಯಾಗಿ, 1 ಕೋಟಿ ರುಗೂ ಕಡಿಮೆ ದರ ಮನೆ(2,000 ಚದರ ಅಡಿ)ಗೆ ಶೇ 3.75ರಷ್ಟು ತೆರಿಗೆ ಎದುರಿಸಬೇಕಾಯಿತು. ಇದಲ್ಲದೆ, ಆಯಾ ರಾಜ್ಯಗಳ ಸೆಸ್ ಸೇರಿ ರಿಯಲ್ ಎಸ್ಟೇಟ್ ಉದ್ಯಮ, ಗ್ರಾಹಕ ಇಬ್ಬರಿಗೂ ತೆರಿಗೆ ಹೊರೆಯಾಗಲಿದೆ.

ಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆ ಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆ

ಈಗ ಎರಡು ಪ್ರಸ್ತಾವನೆ ಬಂದಿದೆ. ಜಿಎಸ್ಟಿ ಶೇ 12ಕ್ಕೆ ಸೀಮಿತಗೊಳಿಸುವುದು, ಬಿಲ್ಡರ್ ಗಳಿಗೆ ಇನ್ಪುಟ್ ತೆರಿಗೆ ಕ್ರೆಡಿಟ್ ಸೇರಿಸಿದರೆ ಶೇ 8ಕ್ಕೆ ಭೂ ಪ್ರದೇಶ ಖರೀದಿಗೆ ದೊರೆಯಲಿದೆ.

GST cut in real estate: Buying flats can may become cheaper

ಶೇ 99ರಷ್ಟು ವಸ್ತುಗಳು ಶೇ 18ರ ಜಿಎಸ್ ಟಿ ಪಟ್ಟಿಯೊಳಗೆ: ಮೋದಿ ಶೇ 99ರಷ್ಟು ವಸ್ತುಗಳು ಶೇ 18ರ ಜಿಎಸ್ ಟಿ ಪಟ್ಟಿಯೊಳಗೆ: ಮೋದಿ

ಮತ್ತೊಂದು ಪ್ರಸ್ತಾವನೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಜಿಎಸ್ಟಿಯನ್ನು ಶೇ 5ರ ಸ್ಲ್ಯಾಬಿಗೆ ತರುವಂತೆ ಕೋರಲಾಗಿದೆ. ಆದರೆ, ಈ ಸ್ಲ್ಯಾಬಿಗೆ ತರುವ ಮುನ್ನ ಬಿಲ್ಡರ್ ಗಳು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಪೈಕಿ ಶೇ80ರಷ್ಟು ಜಿಎಸ್ಟಿ ನೋಂದಾಯಿತ ಸಂಖ್ಯೆ ಹೊಂದಿದೆ ಎಂಬುದನ್ನು ತೋರಿಸಬೇಕಾಗುತ್ತದೆ.

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಒಟ್ಟಾರೆ ಶೇ18ರಷ್ಟಿರುವ ಜಿಎಸ್ಟಿ ತಗ್ಗಿದರೆ, ಗ್ರಾಹಕರು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಕೊಂಚ ನೆಮ್ಮದಿ ಸಿಗಲಿದೆ.

English summary
The Goods and Services Tax (GST) Council is mulling over proposals to cut GST rates on real estate. Sources in the Council said a positive decision in this regard is expected to be taken during the next meeting that will be held in January.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X