ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GST : 143 ವಸ್ತುಗಳ ಬೆಲೆ ಏರಿಕೆ ಬಗ್ಗೆ ರಾಜ್ಯದ ಅಭಿಪ್ರಾಯ ಕೋರಿದ ಜಿಎಸ್‌ಟಿ ಕೌನ್ಸಿಲ್: ಯಾವೆಲ್ಲಾ ವಸ್ತುಗಳು?

|
Google Oneindia Kannada News

ನವದೆಹಲಿ, ಏಪ್ರಿಲ್ 24: ಆದಾಯವನ್ನು ಹೆಚ್ಚಿಸಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಡಳಿತದ ಅಡಿಯಲ್ಲಿ ಕೆಲವೊಂದು ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿದೆ. 143 ವಸ್ತುಗಳ ಮೇಲಿನ ದರಗಳನ್ನು ಹೆಚ್ಚಿಸುವ ಕುರಿತು ಜಿಎಸ್‌ಟಿ ಕೌನ್ಸಿಲ್ ರಾಜ್ಯಗಳ ಅಭಿಪ್ರಾಯಗಳನ್ನು ಕೇಳಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಈ 143 ವಸ್ತುಗಳ ಬೆಲೆಯನ್ನು ಪರೋಕ್ಷ ತೆರಿಗೆ ಆಡಳಿತದ ಆಡಳಿತ ಮಂಡಳಿಯು ಶೇಕಡಾ 92 ರಷ್ಟು ವಸ್ತುಗಳ ಮೇಲಿನ ತೆರಿಗೆಯನ್ನು 18 ಶೇಕಡಾದಿಂದ ಸುಮಾರು 28 ಶೇಕಡಕ್ಕೆ ಏರಿಕೆ ಮಾಡುವ ಪ್ರಸ್ತಾಪವನ್ನು ಮಾಡಿದೆ.

 ಬೆಂಗಳೂರು: ಊಬರ್ ಪ್ರಯಾಣ ದರ ಶೇ.10 ಏರಿಕೆ, ಓಲಾದಲ್ಲೂ ಹೆಚ್ಚಳ ಆಗುತ್ತಾ? ಬೆಂಗಳೂರು: ಊಬರ್ ಪ್ರಯಾಣ ದರ ಶೇ.10 ಏರಿಕೆ, ಓಲಾದಲ್ಲೂ ಹೆಚ್ಚಳ ಆಗುತ್ತಾ?

ಬಹಳಷ್ಟು ಪ್ರಸ್ತಾವಿತ ದರ ಬದಲಾವಣೆಗಳು 2019 ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ, ನವೆಂಬರ್ 2017 ಮತ್ತು ಡಿಸೆಂಬರ್ 2018 ರಲ್ಲಿ ಕೌನ್ಸಿಲ್ ತೆಗೆದುಕೊಂಡ ದರ ಕಡಿತದ ನಿರ್ಧಾರಕ್ಕೆ ವಿರುದ್ಧವಾಗಿ ಕಂಡು ಬಂದಿದೆ ಎಂದು ವರದಿ ಆಗಿದೆ. ಈ ಹಿಂದೆ ಚುನಾವಣೆಗೆ ಮುಂಚಿತವಾಗಿ ಜಿಎಸ್‌ಟಿ ಕಡಿತದ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಆದರೆ ಈ ಬಾರಿ ಜಿಎಸ್‌ಟಿ ಏರಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಹಾಗಾದರೆ ಯಾವೆಲ್ಲಾ ವಸ್ತುಗಳ ಬೆಲೆ ಏರಿಕೆಗೆ ಕೌನ್ಸಿಲ್ ಚರ್ಚೆ ನಡೆಸುತ್ತಿದೆ ಎಂದು ತಿಳಿಯೋಣ ಮುಂದೆ ಓದಿ...

GST : ಜಿಎಸ್‌ಟಿ ತೆರಿಗೆ ಸ್ಲ್ಯಾಬ್ ಏರಿಕೆ ಆಗುತ್ತಾ?GST : ಜಿಎಸ್‌ಟಿ ತೆರಿಗೆ ಸ್ಲ್ಯಾಬ್ ಏರಿಕೆ ಆಗುತ್ತಾ?

 ಯಾವೆಲ್ಲಾ ವಸ್ತುಗಳ ಬೆಲೆ ಏರಿಕೆಯ ಚರ್ಚೆ?

ಯಾವೆಲ್ಲಾ ವಸ್ತುಗಳ ಬೆಲೆ ಏರಿಕೆಯ ಚರ್ಚೆ?

ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿರುವ ಮೂಲಗಳ ಪ್ರಕಾರ, ಹಪ್ಪಳ, ಪವರ್ ಬ್ಯಾಂಕ್‌ಗಳು, ಸೂಟ್‌ಕೇಸ್‌ಗಳು, ಬೆಲ್ಲ, ಕೈಚೀಲಗಳು, ಸುಗಂಧ ದ್ರವ್ಯಗಳು/ಡಿಯೋಡರೆಂಟ್‌ಗಳು, ವಾಚ್‌ಗಳು, ಕಲರ್ ಟಿವಿ ಸೆಟ್‌ಗಳು (32 ಇಂಚುಗಳಿಗಿಂತ ಕಡಿಮೆ), ಚಾಕೊಲೇಟ್‌ಗಳು, ವಾಲ್‌ನಟ್ಸ್, ಕಸ್ಟರ್ಡ್ ಪೌಡರ್, ಚೂಯಿಂಗ್ ಗಮ್‌ಗಳು, ಆಲ್ಕೊಹಾಲ್ ಇಲ್ಲದ ಪಾನೀಯಗಳು, ವಾಶ್ ಬೇಸಿನ್‌ಗಳು, ಸೆರಾಮಿಕ್ ಸಿಂಕ್‌ಗಳು, ಕನ್ನಡಕಗಳು, ಕನ್ನಡಕಗಳ ಕವರ್, ಚರ್ಮದ ಉಡುಪುಗಳು ಮತ್ತು ಬಟ್ಟೆ ಪರಿಕರಗಳ ಬೆಲೆಯನ್ನು ಏರಿಕೆ ಮಾಡುವ ನಿರ್ಧಾರ ಆಗಲಿದೆ.

 2017ರಲ್ಲಿ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?

2017ರಲ್ಲಿ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?

ನವೆಂಬರ್ 2017 ರಲ್ಲಿ ಗುವಾಹಟಿಯಲ್ಲಿ ನಡೆದ ಸಭೆಯಲ್ಲಿ, ಜಿಎಸ್‌ಟಿ ಕೌನ್ಸಿಲ್ ಸುಗಂಧ ದ್ರವ್ಯಗಳು, ಚರ್ಮದ ಉಡುಪುಗಳು ಮತ್ತು ಪರಿಕರಗಳು, ಚಾಕೊಲೇಟ್‌ಗಳು, ಕೋಕೋ ಪೌಡರ್, ಸೌಂದರ್ಯ ಅಥವಾ ಮೇಕಪ್ ವಸ್ತುಗಳು, ಪಟಾಕಿಗಳು, ಪ್ಲಾಸ್ಟಿಕ್‌ಗಳ ನೆಲದ ಹೊದಿಕೆಗಳು, ದೀಪಗಳು, ಧ್ವನಿ ರೆಕಾರ್ಡಿಂಗ್‌ನಂತಹ ವಸ್ತುಗಳ ದರವನ್ನು ಕಡಿಮೆ ಮಾಡಲಾಗಿದೆ. ಉಪಕರಣ, ಮತ್ತು ಶಸ್ತ್ರಸಜ್ಜಿತ ಟ್ಯಾಂಕ್‌ಗಳ ಬೆಲೆಯನ್ನು ಕೂಡಾ ಕಡಿಮೆ ಮಾಡಿತ್ತು.

 2018ರಲ್ಲಿ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?

2018ರಲ್ಲಿ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?

ಡಿಸೆಂಬರ್ 2018 ರ ಸಭೆಯಲ್ಲಿ ಕಲರ್ ಟಿವಿ ಸೆಟ್‌ಗಳು ಮತ್ತು ಮಾನಿಟರ್‌ಗಳು (32 ಇಂಚುಗಳಿಗಿಂತ ಕಡಿಮೆ), ಡಿಜಿಟಲ್ ಮತ್ತು ವಿಡಿಯೋ ಕ್ಯಾಮೆರಾ ರೆಕಾರ್ಡರ್‌ಗಳು ಮತ್ತು ಪವರ್ ಬ್ಯಾಂಕ್‌ಗಳಂತಹ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡಲಾಗಿದೆ. ಈ ವಸ್ತುಗಳ ದರವನ್ನು ಈಗ ಮತ್ತೊಮ್ಮೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

 ಯಾವ ವಸ್ತುಗಳ ಜಿಎಸ್‌ಟಿ, ಎಷ್ಟು ಹೆಚ್ಚಳ?

ಯಾವ ವಸ್ತುಗಳ ಜಿಎಸ್‌ಟಿ, ಎಷ್ಟು ಹೆಚ್ಚಳ?

ಇನ್ನು ಹಪ್ಪಳ ಹಾಗೂ ಬೆಲ್ಲದಂತಹ ವಸ್ತುಗಳ ಜಿಎಸ್‌ಟಿ ದರಗಳನ್ನು ಶೂನ್ಯದಿಂದ ಶೇಕಡಾ 5 ರಷ್ಟು ತೆರಿಗೆ ಸ್ಲ್ಯಾಬ್‌ಗೆ ವರ್ಗಾಯಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಚರ್ಮದ ಉಡುಪುಗಳು ಮತ್ತು ಪರಿಕರಗಳು, ರೇಜರ್‌ಗಳು, ಕೈಗಡಿಯಾರಗಳು, ಕ್ಷೌರಕ್ಕೆ ಬಳಸುವ ವಸ್ತುಗಳು, ಸುಗಂಧ ದ್ರವ್ಯಗಳು, ಡೆಂಟಲ್ ಫ್ಲೋಸ್, ದೋಸೆಗಳು, ಚಾಕೊಲೇಟ್‌ಗಳು, ಕೋಕೋ ಪೌಡರ್, ಹುಡಿಗಳು ಮತ್ತು ಕಾಫಿಯ ಹುಡಿಗಳು, ಕೈಚೀಲಗಳು/ಶಾಪಿಂಗ್ ಬ್ಯಾಗ್‌ಗಳು, ಆಲ್ಕೋಹಾಲ್ ರಹಿತ ಪಾನೀಯಗಳು, ಜೊತೆಗೆ ಮನೆ ನಿರ್ಮಾಣ ಸೆರಾಮಿಕ್ ಸಿಂಕ್‌ಗಳು, ವಾಶ್‌ ಬೇಸಿನ್‌ಗಳು, ಪ್ಲೈವುಡ್, ಬಾಗಿಲುಗಳು, ಕಿಟಕಿಗಳು, ವಿದ್ಯುತ್ ಉಪಕರಣಗಳು (ಸ್ವಿಚ್‌ಗಳು, ಸಾಕೆಟ್‌ಗಳು ಇತ್ಯಾದಿ) ಜಿಎಸ್‌ಟಿ ದರವನ್ನು ಶೇಕಡಾ 18 ರಿಂದ ಶೇಕಡಾ 28 ಕ್ಕೆ ಹೆಚ್ಚಿಸಬಹುದು. ವಾಲ್‌ನಟ್ಸ್‌ನ ಜಿಎಸ್‌ಟಿ ದರವನ್ನು ಶೇ 5 ರಿಂದ ಶೇ 12 ಕ್ಕೆ, ಕಸ್ಟರ್ಡ್ ಪೌಡರ್‌ಗೆ ಶೇ 5 ರಿಂದ ಶೇ 18 ಕ್ಕೆ ಮತ್ತು ಮರದ ಟೇಬಲ್ ಮತ್ತು ಅಡುಗೆ ಸಾಮಾನುಗಳಿಗೆ ಶೇ 12 ರಿಂದ ಶೇ 18 ಕ್ಕೆ ಹೆಚ್ಚಿಸಬಹುದು.

English summary
GST Council Seeks States View On Hiking Rates Of 143 Items, Details Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X