ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ಕೌನ್ಸಿಲ್ ಸಭೆ: ಬ್ಯಾಂಕ್ ಸೇವೆಗೂ ಜಿಎಸ್‌ಟಿ, ಯಾವ್ಯಾವ ವಸ್ತುಗಳು ದುಬಾರಿ ಗೊತ್ತಾ?

|
Google Oneindia Kannada News

ಚಂಡೀಗಢ, ಜೂನ್ 29: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಸಮಿತಿಯ ಸಭೆಯಲ್ಲಿ ಮಂಗಳವಾರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ತೆರಿಗೆಯನ್ನು ತರ್ಕಬದ್ಧಗೊಳಿಸುವ ಉದ್ದೇಶದಿಂದ ವಿನಾಯಿತಿಗಳನ್ನು ಹಿಂತೆಗೆದುಕೊಳ್ಳುವ ಕುರಿತು ರಾಜ್ಯಗಳ ಸಚಿವರ ತಂಡದ ಶಿಫಾರಸನ್ನು ಅಂಗೀಕರಿಸಿರುವುದರಿಂದ ಹಲವಾರು ವಸ್ತುಗಳು ಈಗ ಸರಕು ಮತ್ತು ಸೇವಾ ತೆರಿಗೆಯ ವ್ಯಾಪ್ತಿಗೆ ಬರಲಿವೆ.

ಜೀವ ಮತ್ತು ಆರೋಗ್ಯ ವಿಮೆ ಮೇಲಿನ ತೆರಿಗೆಗೆ ವಿನಾಯಿತಿ ಇಲ್ಲ: ಜಿಎಸ್‌ಟಿ ಕೌನ್ಸಿಲ್ಜೀವ ಮತ್ತು ಆರೋಗ್ಯ ವಿಮೆ ಮೇಲಿನ ತೆರಿಗೆಗೆ ವಿನಾಯಿತಿ ಇಲ್ಲ: ಜಿಎಸ್‌ಟಿ ಕೌನ್ಸಿಲ್

ಪೂರ್ವ ಪ್ಯಾಕೆಟ್ ಮತ್ತು ಲೇಬಲ್ ಮಾಡಿದ ಮಾಂಸ, ಮೀನು, ಮೊಸರು, ಜೇನುತುಪ್ಪ, ಒಣಗಿದ ದ್ವಿದಳ ಧಾನ್ಯದ ತರಕಾರಿ, ಒಣಗಿದ ದ್ವಿದಳ ಧಾನ್ಯದ ತರಕಾರಿ, ಗೋಧಿ ಮತ್ತು ಇತರ ಧಾನ್ಯಗಳು, ಗೋಧಿ ಅಥವಾ ಮೆಸ್ಲಿನ್ ಹಿಟ್ಟು, ಬೆಲ್ಲ, ಮಂಡಕ್ಕಿ ಸೇರಿದಂತೆ ಪ್ಯಾಕ್ ಮಾಡಿದ ವಸ್ತುಗಳು ಮತ್ತು ಲೇಬಲ್‌ ಮಾಡಿದ ಆಹಾರ ಪದಾರ್ಥಗಳಿಗೂ ಇನ್ನು ಮುಂದೆ ಶೇಕಡಾ 5ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ.

GST Council Meeting: Now These Items Coming Under The Purview Of The GST

ಇವುಗಳ ಹೊರತಾಗಿ, ಎಲ್ಲಾ ಸರಕುಗಳು ಮತ್ತು ಸಾವಯವ ಗೊಬ್ಬರ ಮತ್ತು ತೆಂಗಿನನಾರಿನ ಗೊಬ್ಬರ ಖರೀದಿಗೆ ಕೂಡ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಮಾತ್ರವಲ್ಲದೆ ಚೆಕ್‌ಗಳ ವಿತರಣೆಗೆ ಬ್ಯಾಂಕ್‌ಗಳು ವಿಧಿಸುವ ಶುಲ್ಕದ ಮೇಲೂ ಗ್ರಾಹಕರು ಇನ್ನುಮುಂದೆ ತೆರಿಗೆ ನೀಡಬೇಕಾಗುತ್ತದೆ.

ಬ್ಯಾಂಕ್ ಚೆಕ್ ವಿತರಣೆಗೂ ಜಿಎಸ್‌ಟಿ

ಚೆಕ್‌ಗಳ ವಿತರಣೆಗೆ ಬ್ಯಾಂಕ್‌ಗಳು ವಿಧಿಸುವ ಶುಲ್ಕದ ಮೇಲೂ ಶೇಕಡಾ 18ರಷ್ಟು ತೆರಿಗೆಯನ್ನು ಗ್ರಾಹಕರು ನೀಡಬೇಕಾಗುತ್ತದೆ. ಪ್ರಸ್ತುತ ತೆರಿಗೆ ವಿನಾಯಿತಿ ಹೊಂದಿರುವ 1,000 ರು.ಗಿಂತ ಕಡಿಮೆ ಬಾಡಿಗೆಯ ಹೋಟೆಲ್‌ ಕೊಠಡಿಗಳಿಗೂ ಇನ್ನು ಮುಂದೆ ಶೇ. 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. 5,000 ರೂ.ಗಿಂತ ಹೆಚ್ಚಿನ ದರ ಹೊಂದಿರುವ ಆಸ್ಪತ್ರೆ ಕೊಠಡಿಗಳಿಗೂ ಇನ್ನು ಮುಂದೆ ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ.

ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಮೇಲೆ ಜಿಎಸ್‌ಟಿ ಇಳಿಕೆ?ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಮೇಲೆ ಜಿಎಸ್‌ಟಿ ಇಳಿಕೆ?

ಮಂಗಳವಾರ ನಡೆದ ಸಭೆಯಲ್ಲಿ ಜಿಎಸ್‌ಟಿ ತೆರಿಗೆಗಳನ್ನು ಪರಿಷ್ಕರಿಸುವ ಮತ್ತು ಕೆಲವು ಉತ್ಪನ್ನಗಳ ಮೇಲಿನ ವಿನಾಯಿತಿಗಳನ್ನು ವಾಪಸ್‌ ಪಡೆಯಬೇಕು ಎನ್ನುವ ಬೇಡಿಕೆ ಸೇರಿದಂತೆ ರಾಜ್ಯಗಳ ಸಚಿವರ ಸಮಿತಿಯ ಬಹುತೇಕ ಶಿಫಾರಸುಗಳನ್ನು ಜಿಎಸ್‌ಟಿ ಮಂಡಳಿ ಅಂಗೀಕರಿಸಿದೆ.

GST Council Meeting: Now These Items Coming Under The Purview Of The GST

ಜಿಎಸ್‌ಟಿ ಆದಾಯದಲ್ಲಿ ರಾಜ್ಯಗಳ ಪಾಲನ್ನು ಶೇಕಡಾ 50ರಿಂದ 70-80ಕ್ಕೆ ಹೆಚ್ಚಿಸುವಂತೆ ಹಲವು ರಾಜ್ಯಗಳು ಒತ್ತಾಯಿಸಿವೆ.

ಜಿಎಸ್‌ಟಿ ಕೌನ್ಸಿಲ್ ಖಾದ್ಯ ತೈಲ, ಕಲ್ಲಿದ್ದಲು, ಎಲ್‌ಇಡಿ ಲ್ಯಾಂಪ್‌ಗಳು, ಪ್ರಿಂಟಿಂಗ್, ಡ್ರಾಯಿಂಗ್ ಇಂಕ್, ಫಿನಿಶ್ಡ್ ಲೆದರ್ ಮತ್ತು ಸೋಲಾರ್ ವಾಟರ್ ಹೀಟರ್ ಸೇರಿದಂತೆ ವಸ್ತುಗಳ ಸುಂಕ ಇಳಿಸುವ ತಿದ್ದುಪಡಿಯನ್ನು ಶಿಫಾರಸು ಮಾಡಿದೆ.

Recommended Video

ಟೈಲರ್ ಶಿರಚ್ಛೇದ: ರಾಜಸ್ಥಾನದಲ್ಲಿ ನಿಷೇಧಾಜ್ಞೆ ಜಾರಿ, ಇಂಟರ್ನೆಟ್ ಸೇವೆ ಸ್ಥಗಿತ | *India | OneIndia Kannada

ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ವಿಸ್ತರಣೆ, ಆನ್‌ಲೈನ್‌ ಗೇಮ್ಸ್‌, ಕುದುರೆ ರೇಸ್‌, ಕ್ಯಾಸಿನೊಗೆ ಶೇಕಡಾ 28ರಷ್ಟು ತೆರಿಗೆ ವಿಧಿಸಬೇಕು ಎನ್ನುವ ವಿಚಾರಗಳ ಕುರಿತು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಬುಧವಾರ ಚರ್ಚೆಯಾಗುವ ಸಾಧ್ಯತೆ ಇದೆ.

English summary
Significant decisions were made on Tuesday at a GST Council meeting chaired by Union Finance Minister Nirmala Sitharaman. A number of items are now coming under the purview of the GST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X