ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ಕೌನ್ಸಿಲ್ ಸಭೆ: ಯಾವೆಲ್ಲ ವಸ್ತುಗಳ ಮೇಲೆ ತೆರಿಗೆ ಕಡಿತ?

|
Google Oneindia Kannada News

Recommended Video

ಜಿಎಸ್ಟಿ ಕೌನ್ಸಿಲ್ ಸಭೆ: ಯಾವೆಲ್ಲ ವಸ್ತುಗಳ ಮೇಲೆ ತೆರಿಗೆ ಕಡಿತ? | Oneindia Kannada

ನವದೆಹಲಿ, ಜನವರಿ 19: ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಿನ್ನೆ(ಜ.18) ನಡೆದ 25 ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ 29 ವಸ್ತುಗಳ ಜಿಎಸ್ಟಿ ದರವನ್ನು ಕಡಿತಗೊಳಿಸಲಾಗಿದೆ.

ಜಿಎಸ್ಟಿ ಹೊರೆಯಿಂದ ಪರಿತಪಿಸುತ್ತಿದ್ದ ಶ್ರೀಸಾಮಾನ್ಯನಿಗೆ ಇದು ಸಿಹಿಸುದ್ದಿ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಜಿಎಸ್ಟಿ ಅಡಿಯಲ್ಲಿ ತರುವ ಪ್ರಸ್ತಾಪದ ಕುರಿತು ನಿನ್ನೆಯ ಸಭೆಯಲ್ಲಿ ಚರ್ಚೆ ನಡಡೆದಿಲ್ಲ ಎಂದು ಸ್ವತಃ ಅರುಣ್ ಜೇಟ್ಲಿ ಹೇಳಿದ್ದಾರೆ.

ಕರಕುಶಲ ವಸ್ತುಗಳಿಗೆ 0% ಜಿಎಸ್ಟಿ, ಕೃಷಿ ಉಪಕರಣಗಳ ತೆರಿಗೆ ಕಡಿತಕರಕುಶಲ ವಸ್ತುಗಳಿಗೆ 0% ಜಿಎಸ್ಟಿ, ಕೃಷಿ ಉಪಕರಣಗಳ ತೆರಿಗೆ ಕಡಿತ

ಈ ಸಭೆಯಲ್ಲಿ ಐಟಿ ರಿಟರ್ನ್ಸ್ ಫೈಲಿಂಗ್ ಪ್ರಕ್ರಿಯೆಯನ್ನೂ ಸರಳಗೊಳಿಸುವ ಕುರಿತಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಗಳನ್ನೂ ಜಿಎಸ್ಟಿ ಅಡಿಯಲ್ಲಿ ತರುವ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಈಗಾಗಲೇ 29 ವಸ್ತುಗಳ ಮೇಲೆ ಕಡಿತಗೊಳಿಸಲಾದ ಪರಿಷ್ಕೃತ ಜಿಎಸ್ಟಿ ದರ ಜ.25 ರಿಂದ ಅನ್ವಯವಾಗಲಿದೆ.

ನಿನ್ನೆ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಂತೆ ಯಾವೆಲ್ಲ ವಸ್ತುಗಳ ಮೇಲಿನ ಜಿಎಸ್ಟಿ ದರ ಕಡಿಮೆಯಾಗಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸೆಕೆಂಡ್ ಹ್ಯಾಂಡ್ ಕಾರುಗಳ ಜಿಎಸ್ಟಿ ಇಳಿಕೆ

ಸೆಕೆಂಡ್ ಹ್ಯಾಂಡ್ ಕಾರುಗಳ ಜಿಎಸ್ಟಿ ಇಳಿಕೆ

ಸೆಕೆಂಡ್ ಹ್ಯಾಂಡ್ ಕಾರುಗಳು ಮತ್ತು ಎಸ್ ಯುವಿ ಗಳ ಮೇಲೆ ಇದ್ದ 28 ಪ್ರತಿಶತ ತೆರಿಗೆಯನ್ನು ಶೇ.18 ಕ್ಕೆ ಇಳಿಸಲಾಗಿದೆ. ಹಳೆಯ ಕಾರುಗಳ ಮೇಲೆ ಶೇ.12 ಪ್ರತಿಶತ ಜಿಎಸ್ಟಿ ವಿಧಿಸಲಾಗುತ್ತದೆ.

ವಜ್ರದ ಜಿಎಸ್ಟಿ ಕಡಿತ

ವಜ್ರದ ಜಿಎಸ್ಟಿ ಕಡಿತ

ವಜ್ರ ಮತ್ತು ಇನ್ನಿತರ ಅನರ್ಘ್ಯ ರತ್ನಗಳ ಮೇಲೆ ಹೇರಲಾಗುತ್ತಿದ್ದ ಶೇ. 3 ರಷ್ಟು ಜಿಎಸ್ಟಿಯನ್ನು ಶೇ.0.25 ಕ್ಕೆ ಇಳಿಸಲಾಗಿದೆ. ಮಹಿಳೆಯರ ಮಟ್ಟಿಗಂತೂ ಇದು ಸಿಹಿ ಸುದ್ದಿಯೇ ಸರಿ!

ಪರಿಸರ ಸ್ನೇಹಿ ವಾಹನಗಳಿಗೆ ವರದಾನ

ಪರಿಸರ ಸ್ನೇಹಿ ವಾಹನಗಳಿಗೆ ವರದಾನ

ಜೈವಿಕ ಇಂಧನಗಳ ಜಿಎಸ್ಟಿ ದರವನ್ನು ಶೇ.18 ರಿಂದ ಶೇ.12 ಕ್ಕೆ ಇಳಿಸಲಾಗಿದೆ. ಅಲ್ಲದೆ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಬಸ್ಸುಗಳಿಗೆ ಬಳಸುವ ಜೈವಿಕ ಇಂಧನದ ಮೇಲಿನ ಜಿಎಸ್ಟಿಯನ್ನೂ ಶೇ.28 ರಿಂದ ಶೇ.18ಕ್ಕೆ ಇಳಿಸಲಾಗಿದೆ.

ಜಿಎಸ್ಟಿ ಕಡಿತಗೊಂಡ ಇನ್ನಿತರ ವಸ್ತುಗಳು

ಜಿಎಸ್ಟಿ ಕಡಿತಗೊಂಡ ಇನ್ನಿತರ ವಸ್ತುಗಳು

ನೀರಾವರಿ ಸಾಧನಗಳು, ಸಕ್ಕರೆ ಮಿಠಾಯಿ, ಪ್ಯಾಕ್ ಮಾಡಲಾದ 20 ಲೀ. ಕುಡಿಯುವ ನೀರಿನ ಬಾಟಲ್, ಮೆಹಂದಿ ಕೋನ್, ಖಾಸಗಿ ಹಂಚಿಕೆದಾರರಿಂದ ಪಡೆವ ಎಲ್ ಪಿಜಿ, ವೆಲ್ವೇಟ್ ಫ್ಯಾಬ್ರಿಕ್, ರೈಸ್ ಬ್ರಾನ್, ರಸಗೊಬ್ಬರಕ್ಕೆ ಬಳಸುವ ಫಾಸ್ಪರಿಕ್ ಆಸಿಡ್ ಗಳ ಜಿಎಸ್ಟಿ ದರದಲ್ಲೂ ಕಡಿತವಾಗಿದೆ.ಗಸತ

English summary
The GST Council headed by finance minsiter Arun Jaitley, in its 25th meeting decided to cut tax rate on another 29 items on Jan 18th. The new rates would be effective from Jan 25th 2018. Here is deatils about what are cheaper now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X