ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GST : ಜಿಎಸ್‌ಟಿ ತೆರಿಗೆ ಸ್ಲ್ಯಾಬ್ ಏರಿಕೆ ಆಗುತ್ತಾ?

|
Google Oneindia Kannada News

ನವದೆಹಲಿ, ಏಪ್ರಿಲ್ 18: ಮುಂದಿನ ತಿಂಗಳು ತನ್ನ ಮುಂಬರುವ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ಮಂಡಳಿ (ಜಿಎಸ್‌ಟಿ) ಕೌನ್ಸಿಲ್ ಶೇಕಡ 5ರ ತೆರಿಗೆ ಸ್ಲ್ಯಾಬ್ ಅನ್ನು ರದ್ದು ಮಾಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ವರದಿಯು ಉಲ್ಲೇಖ ಮಾಡಿದೆ. ಹಾಗೆಯೇ ಜಿಎಸ್‌ಟಿ ತೆರಿಗೆ ಸ್ಲ್ಯಾಬ್ ಅನ್ನು ಏರಿಕೆ ಮಾಡುವ ಸಾಧ್ಯತೆ ಇದೆ.

ಹೆಚ್ಚಾಗಿ ಬಳಕೆ ಮಾಡುವ ಕೆಲವು ಸರಕುಗಳ ತೆರಿಗೆ ಸ್ಲ್ಯಾಬ್ ಅನ್ನು ಶೇಕಡ 3ಕ್ಕೆ ಹಾಗೂ ಉಳಿದವುಗಳನ್ನು ಶೇಕಡ 8ಕ್ಕೆ ಬದಲಾವಣೆ ಮಾಡುವ ಬಗ್ಗೆ ಚರ್ಚೆಗಳು ನಡೆಯಲಿದೆ. ಈ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿದೆ ಎಂದು ವರದಿ ಹೇಳಿದೆ.

ಆದಾಯ ತೆರಿಗೆ ಅಲರ್ಟ್: ಏ.1ರಿಂದ ಈ ನಿಯಮಗಳು ಬದಲಾವಣೆಆದಾಯ ತೆರಿಗೆ ಅಲರ್ಟ್: ಏ.1ರಿಂದ ಈ ನಿಯಮಗಳು ಬದಲಾವಣೆ

ಪ್ರಸ್ತುತ, ಜಿಎಸ್‌ಟಿಯು ನಾಲ್ಕು ಸ್ಲ್ಯಾಬ್‌ಗಳನ್ನು ಹೊಂದಿದೆ. 5, 12, 18 ಮತ್ತು 28 ಈ ನಾಲ್ಕು ಸ್ಲ್ಯಾಬ್ ಆಗಿದೆ. ಇನ್ನು ಚಿನ್ನದ ಆಭರಣಗಳು 3 ಪ್ರತಿಶತ ತೆರಿಗೆಯನ್ನು ಹೊಂದಿದೆ. ಪ್ಯಾಕ್ ಮಾಡಿರದ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದೆ.

GST Council may replace 5% rate with 3% & 8% slabs; Know Details

ಆದಾಯ ಹೆಚ್ಚಳದ ಗುರಿ

"ವರಮಾನವನ್ನು ಅಧಿಕ ಮಾಡುವ ನಿಟ್ಟಿನಲ್ಲಿ ಸರಕು ಮತ್ತು ಸೇವಾ ತೆರಿಗೆ ಮಂಡಳಿ (ಜಿಎಸ್‌ಟಿ) ಕೌನ್ಸಿಲ್ ವಿನಾಯಿತಿ ಇರುವ ಕೆಲವು ಆಹಾರೇತರ ವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಚಿಂತನೆ ನಡೆಸುತ್ತಿದೆ. ಶೇಕಡ 3ರ ತೆರಿಗೆ ಸ್ಲ್ಯಾಬ್‌ಗೆ ಕೆಲವು ಆಹಾರೇತರ ವಸ್ತುಗಳನ್ನು ಒಳಪಡಿಸಿ ಈ ಮೂಲಕ ತೆರಿಗೆ ವಿನಾಯಿತಿ ಪಟ್ಟಿಯಲ್ಲಿ ಕಡಿತ ಮಾಡುವ ಗುರಿಯನ್ನು ಹೊಂದಿದೆ," ಎಂದು ವರದಿಯು ಉಲ್ಲೇಖ ಮಾಡಿದೆ.

ಗಮನಿಸಿ: ಹೊಸ ವರ್ಷದಲ್ಲಿ ಈ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ..ಗಮನಿಸಿ: ಹೊಸ ವರ್ಷದಲ್ಲಿ ಈ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ..

5 ಪ್ರತಿಶತ ತೆರಿಗೆ ಸ್ಲ್ಯಾಬ್ ಅನ್ನು 7 ಅಥವಾ 8 ಅಥವಾ 9 ಪ್ರತಿಶತಕ್ಕೆ ಏರಿಸುವ ಚರ್ಚೆಗಳು ನಡೆಯುತ್ತಿವೆ. ಆದರೆ ಅಂತಿಮ ನಿರ್ಧಾರವನ್ನು ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಸಚಿವರುಗಳು ಕೈಗೊಳ್ಳಲಿದ್ದಾರೆ. ಆದಾಯವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ಬದಲಾವಣೆಯನ್ನು ತರಲು ಸರ್ಕಾರವು ಮುಂದಾಗಲಿದೆ ಎಂದು ವರದಿಯು ಹೇಳಿದೆ.

GST Council may replace 5% rate with 3% & 8% slabs; Know Details

ಸರ್ಕಾರಕ್ಕೆ ಎಷ್ಟು ಆದಾಯ ಸಿಗಲಿದೆ?

Recommended Video

ಫುಲ್ ಜೋಶ್‌ನಲ್ಲಿ KGF 2 ನೋಡಿದ RCB ಪ್ಲೇಯರ್ಸ್ ಏನ್‌ ಹೇಳ್ಬೋದು?ಗೆಸ್ ಮಾಡಿ | Oneindia Kannada

ಶೇ 5ರ ತೆರಿಗೆ ಸ್ಲ್ಯಾಬ್‌ನಲ್ಲಿನ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ಶೇ 1ರಷ್ಟು ತೆರಿಗೆ ವಿಧಿಸಿದರೆ ವಾರ್ಷಿಕವಾಗಿ ಹೆಚ್ಚುವರಿ 50 ಸಾವಿರ ಕೋಟಿ ರೂಪಾಯಿ ವರಮಾನ ಲಭ್ಯವಾಗಲಿದೆ. ಈಗ ಶೇ 5ರಷ್ಟು ತೆರಿಗೆ ಇರುವ ಬಹುತೇಕ ವಸ್ತುಗಳಿಗೆ ಶೇ 8ರಷ್ಟು ತೆರಿಗೆ ವಿಧಿಸಲು ಮಂಡಳಿ ನಿರ್ಧಾರ ಮಾಡಬಹುದು ಎಂದು ಮೂಲಗಳು ಹೇಳಿವೆ. ಒಂದು ವೇಳೆ ಸರ್ಕಾರವು ಶೇ 5ರ ತೆರಿಗೆ ಸ್ಲ್ಯಾಬ್‌ಗಳಲ್ಲಿ ಶೇಕಡ 3ರಷ್ಟು ಅಧಿಕ ತೆರಿಗೆ ವಿಧಿಸಿದರೆ ಹೆಚ್ಚುವರಿ 150 ಸಾವಿರ ಕೋಟಿ ರೂಪಾಯಿ ಆದಾಯ ದೊರೆಯುವ ಸಾಧ್ಯತೆ ಇದೆ.

English summary
Sources said that discussions are on to raise the 5 per cent slab to either 7 or 8 or 9 per cent, a final call will be taken by the GST Council. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X