ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಗೂ ಮುನ್ನ ಅಪಾರ್ಟ್ಮೆಂಟ್ ಖರೀದಿದಾರರಿಗೆ ಶುಭ ಸುದ್ದಿ

|
Google Oneindia Kannada News

ನವದೆಹಲಿ, ಫೆಬ್ರವರಿ 24: ಲೋಕಸಭೆ ರಿಯಲ್ ಎಸ್ಟೇಟ್ ಕ್ಷೇತ್ರದ ಬೇಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು 33ನೇ ಜಿಎಸ್ಟಿ ಕೌನ್ಸಿಲ್ ಸಭೆ ನಡೆಸಲಾಗಿದೆ. ಈ ಕ್ಷಣದ ಅಪ್ಡೇಟ್ ನಂತೆ ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ ಹಾಗೂ ಮನೆಗಳ ಖರೀದಿ ಮೇಲೆ ಶೇ 5 ರಷ್ಟು ಜಿಎಸ್​ಟಿ ಕಡಿತ ಮಾಡುವ ನಿರ್ಧಾರ ಪ್ರಕಟಿಸಲಾಗಿದೆ. ಹೀಗಾಗಿ, ಫ್ಲಾಟ್ ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ.

ಲೋಕಸಭೆ ಚುನಾವಣೆಗೂ ಮುನ್ನ ಸಿಮೆಂಟ್ ಬೆಲೆ ಇಳಿಕೆ ಸಾಧ್ಯತೆ! ಲೋಕಸಭೆ ಚುನಾವಣೆಗೂ ಮುನ್ನ ಸಿಮೆಂಟ್ ಬೆಲೆ ಇಳಿಕೆ ಸಾಧ್ಯತೆ!

ಸಣ್ಣ ಮತ್ತು ಮಧ್ಯಮ ವರ್ಗದ ಎಂಟ್ರಪ್ರೈಸಸ್​ಗಳ ಮೇಲಿನ ಹೆಚ್ಚುವರಿ ಜಿಎಸ್​ಟಿ ತಗ್ಗಿಸುವ ಬಗ್ಗೆ ಜಿಎಸ್ಟಿ ಕೌನ್ಸಿಲ್ ನ ಫಿಟ್ಮೆಂಟ್ ಸಮಿತಿ ಸಭೆ ಚರ್ಚೆ ನಡೆದಿದೆ. ಇದಲ್ಲದೆ 45 ಲಕ್ಷ ರು ಕಡಿಮೆ ದರದ ವಸತಿ ನಿವೇಶನಗಳನ್ನು ಕೈಗೆಟಕುವ ವಸತಿ ಎಂದು ಪರಿಗಣಿಸಿ ಶೇ 1ರಷ್ಟು ಜಿ ಎಸ್ಟಿ ಹಾಕಲಾಗಿದೆ. ಈ ಮುಂಚೆ ಶೇ 8ರಷ್ಟು ತೆರಿಗೆ ಕಟ್ಟಬೇಕಾಗಿತ್ತು. ಆದರೆ, 45 ಲಕ್ಷ ರು ಮಿತಿಯ ನಿರ್ಮಾಣ ಹಂತದ ಕಟ್ಟಡವಾದರೆ ಶೇ 5ರಷ್ಟು ಜಿಎಸ್ಟಿ ಕಟ್ಟಬೇಕಾಗುತ್ತದೆ. ಆದರೆ, ಮೆಟ್ರೋ ನಗರಗಳಲ್ಲಿ 90 ಚದರ ಮೀಟರ್ ಹಾಗೂ ಮೆಟ್ರೋಯೇತ್ರ ನಗರಗಳಲ್ಲಿ 60 ಚದರ ಮೀಟರ್ ವಿಸ್ತೀರ್ಣದ ಮಿತಿ ಇದೆ.

ಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆ ಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆ

GST Council Approves 5% Rate For Under-Construction Properties

ಕಟ್ಟಡ ನಿರ್ಮಾಣದ ವೆಚ್ಚ : ಶೇ12ರಷ್ಟು ತೆರಿಗೆ ಅಲ್ಲದೆ, ಮನೆ ಕಟ್ಟಲು ಬಳಸುವ ಸಾಮಾಗ್ರಿಗಳಾದ ಉಕ್ಕು(ಶೇ18), ಸಿಮೆಂಟ್ (28%), ಮಾರ್ಬಲ್ ಹಾಗೂ ಗ್ರಾನೈಟ್ (28%), ಮಾರ್ಬಲ್ ಬ್ಲಾಕ್ (12%), ಹಾರುವ ಬೂದಿ ಇಟ್ಟಿಗೆ (12%), ಮರಳು, ಕಲ್ಲು, ಜಲ್ಲಿ (ಶೇ5), ಲಿಫ್ಟ್ ಹಾಗೂ ಇನ್ನಿತರ ಪರಿಕರ (ಶೇ28) ಹೀಗೆ ಶೇ 18 ರಿಂದ 28ರ ಸರಾಸರಿಯಲ್ಲಿ ತೆರಿಗೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಏರಿಕೆಗೆ ಕಾರಣವಾಗಿದೆ. ಬಾಡಿಗೆ ಕಟ್ಟಡ, ಗೃಹ ಸಾಲ ಸೇರಿದಂತೆ ಅನೇಕ ಕಡೆಗಳಲ್ಲಿ ತೆರಿಗೆ ಎದುರಿಸಬೇಕಾಗಿದೆ.

English summary
The Goods and Services Tax Council has approved lowering the tax rate on under-construction properties to 5 percent, from 12 percent earlier. Affordable housing projects will attract 1 percent tax. The definition of what constitutes affordable housing has been changed. However, developers won’t be allowed to claim input tax credit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X