ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ಪರಿಹಾರದ ಕೊರತೆ: ಸಾಲದ ಆಯ್ಕೆಗೆ 13 ರಾಜ್ಯಗಳ ಒಪ್ಪಿಗೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಆಡಳಿತವಿರುವ 13 ರಾಜ್ಯಗಳು ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಹಾರ ವಿತರಣೆಗೆ ಪರ್ಯಾಯವಾಗಿ ನೀಡಿರುವ ಸಾಲ ಪಡೆಯುವ ಆಯ್ಕೆಯನ್ನು ಒಪ್ಪಿಕೊಂಡಿವೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ವಿಶೇಷ ಅವಕಾಶದ ಮೂಲಕ ಸಾಲ ಪಡೆಯುವ ಆಯ್ಕೆಯನ್ನು 13 ರಾಜ್ಯಗಳ ಪೈಕಿ ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಮೇಘಾಲಯ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ ಮತ್ತು ಒಡಿಶಾಗಳನ್ನು ಒಪ್ಪಿಕೊಂಡಿವೆ. ಇನ್ನು ಮಣಿಪುರ ಮಾರುಕಟ್ಟೆಯಿಂದ ಸಾಲ ಪಡೆಯುವ ಆಯ್ಕೆಯನ್ನು ಆಯ್ದುಕೊಂಡಿದೆ.

ಕಾರು, ಬೈಕ್ ಬೆಲೆ ಇಳಿಕೆ ಸಾಧ್ಯತೆ: ಜಿಎಸ್‌ಟಿ ಕಡಿತಕ್ಕೆ ಸರ್ಕಾರ ಪರಿಶೀಲನೆಕಾರು, ಬೈಕ್ ಬೆಲೆ ಇಳಿಕೆ ಸಾಧ್ಯತೆ: ಜಿಎಸ್‌ಟಿ ಕಡಿತಕ್ಕೆ ಸರ್ಕಾರ ಪರಿಶೀಲನೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಂದ 2.35 ಲಕ್ಷ ಕೋಟಿ ಜಿಎಸ್‌ಟಿ ಕೊರತೆಯನ್ನು ಅಂದಾಜಿಸಲಾಗಿದೆ. ಕೇಂದ್ರದ ಲೆಕ್ಕಾಚಾರದ ಪ್ರಕಾರ ಸುಮಾರು 97,000 ಕೋಟಿ ರೂ ಜಿಎಸ್‌ಟಿ ಅನುಷ್ಠಾನ ಮತ್ತು ಉಳಿದ 1.38 ಲಕ್ಷ ಕೋಟಿ ಮೊತ್ತದಷ್ಟು ಸಂಗ್ರಹವು ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ರಾಜ್ಯಗಳ ಆದಾಯದ ಮೇಲೆ ಬೀರಿದ ಪರಿಣಾಮದಿಂದಾಗಿ ಸಾಧ್ಯವಾಗಿಲ್ಲ.

GST Compensation Shortfall: 13 States Opt For Centres Proposal Of Borrow

ಕಳೆದ ತಿಂಗಳು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಎರಡು ಆಯ್ಕೆಯನ್ನು ನೀಡಿತ್ತು. ಆರ್‌ಬಿಐ ಮೂಲಕ ನೀಡಲಾಗುತ್ತಿರುವ ವಿಶೇಷ ಗವಾಕ್ಷಿ ಮೂಲಕ 97,000 ಕೋಟಿ ರೂ ಅನ್ನು ರಾಜ್ಯಗಳು ಸಾಲದ ರೂಪದಲ್ಲಿ ಪಡೆಯುವುದು ಅಥವಾ ಮಾರುಕಟ್ಟೆಯಿಂದ 2.35 ಲಕ್ಷ ರೂ ಸಾಲ ಪಡೆಯುವುದರ ಜತೆಗೆ, ಐಷಾರಾಮಿ ಮತ್ತು ಕಡಿಮೆ ಗುಣಮಟ್ಟದ ಸರಕುಗಳ ಮೇಲೆ ಸೆಸ್ ವಿನಾಯಿತಿ ಪರಿಹಾರದ ಮತ್ತೊಂದು ಆಯ್ಕೆಯನ್ನು ಕೂಡ ನೀಡಿತ್ತು.

 ಆಗಸ್ಟ್‌ ತಿಂಗಳಿನಲ್ಲಿ ಭಾರತದ ಜಿಎಸ್‌ಟಿ ಆದಾಯ 86,449 ಕೋಟಿ ರೂಪಾಯಿ ಆಗಸ್ಟ್‌ ತಿಂಗಳಿನಲ್ಲಿ ಭಾರತದ ಜಿಎಸ್‌ಟಿ ಆದಾಯ 86,449 ಕೋಟಿ ರೂಪಾಯಿ

ಇವುಗಳಲ್ಲಿ ಎರಡು ಆಯ್ಕೆಯನ್ನು 13 ರಾಜ್ಯಗಳು ಒಪ್ಪಿಕೊಂಡಿವೆ. ಕೆಲವು ರಾಜ್ಯಗಳು ತಮ್ಮ ಆಯ್ಕೆಯ ಆದ್ಯತೆಯನ್ನು ನೀಡುವ ಬದಲು ತಮ್ಮ ಅಭಿಪ್ರಾಯಗಳನ್ನು ಜಿಎಸ್‌ಟಿ ಸಮಿತಿಯ ಅಧ್ಯಕ್ಷರಿಗೆ ನೀಡಿವೆ. ಬಿಜೆಪಿಯೇತರ ಆಡಳಿತವಿರುವ ಪಶ್ಚಿಮ ಬಂಗಾಳ, ಕೇರಳ, ದೆಹಲಿ, ತೆಲಂಗಾಣ, ಛತ್ತೀಸಗಡ ಮತ್ತು ತಮಿಳುನಾಡು ರಾಜ್ಯಗಳು ಈ ಆಯ್ಕೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

English summary
GST Compensation Shortfall: 13 states ruled by BJP and its allies have opted the borrowing options proposed by Centre to meet GST compensation shortfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X