ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಜಿಎಸ್‌ಟಿ ಬಂಪರ್; ಜುಲೈನಲ್ಲಿ 1.48 ಲಕ್ಷ ಕೋಟಿ ಆದಾಯ

|
Google Oneindia Kannada News

ನವದೆಹಲಿ, ಆಗಸ್ಟ್ 1: ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹಣೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಕಳೆದ ಜುಲೈನಲ್ಲಿ ಜಿಎಸ್‌ಟಿ ಸಂಗ್ರಹವು ಸರಿಸುಮಾರು 1.49 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದೇಶದಲ್ಲಿ ಒಂದೇ ತಿಂಗಳಲ್ಲಿ ಸಂಗ್ರಹವಾದ ಎರಡನೇ ಅತಿಹೆಚ್ಚಿನ ಆದಾಯ ಇದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಕಳೆದ ಜುಲೈ-2022ರ ತಿಂಗಳಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು 1,48,995 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದನ್ನು ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ, ಜಿಎಸ್‌ಟಿ ಆದಾಯದಲ್ಲಿ ಶೇ.28ರಷ್ಟು ಹೆಚ್ಚಾಗಿದೆ. ಕಳೆದ 2021ರ ಜುಲೈ ತಿಂಗಳಿನಲ್ಲಿ 1,16,393 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹಣೆಯಾಗಿತ್ತು.

14 ಅಗತ್ಯ ಆಹಾರ ಧಾನ್ಯಗಳು ಜಿಎಸ್‌ಟಿಯಿಂದ ಹೊರಗೆ: ನಿರ್ಮಲಾ ಸೀತಾರಾಮನ್14 ಅಗತ್ಯ ಆಹಾರ ಧಾನ್ಯಗಳು ಜಿಎಸ್‌ಟಿಯಿಂದ ಹೊರಗೆ: ನಿರ್ಮಲಾ ಸೀತಾರಾಮನ್

ಜೂನ್ ತಿಂಗಳ ಅವಧಿಗೆ ಹೋಲಿಸಿದರೆ ಸರಕುಗಳ ಆಮದು ಆದಾಯವು ಶೇಕಡಾ 48ರಷ್ಟು ಹೆಚ್ಚಾಗಿದೆ. ಸೇವೆಗಳ ಆಮದು ಸೇರಿದಂತೆ ದೇಶೀಯ ವಹಿವಾಟಿನಿಂದ ಬರುವ ಆದಾಯದಲ್ಲಿ ಶೇ.22ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಇದೇ ಮೂಲಗಳಿಂದ ಬಂದ ಆದಾಯವು 2022ರಲ್ಲಿ ಆಗಿರುವ ಸಂಗ್ರಹಣೆಗಿಂತ ಶೇ.22ರಷ್ಟು ಕಡಿಮೆಯಾಗಿತ್ತು. ಈ ವರ್ಷದ ಜುಲೈ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ ಆದಾಯ ಹಚ್ಚಾಗಲು ಕಾರಣವೇನು?, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಹಂಚಿಕೆಯಾದ ತೆರಿಗೆ ಪ್ರಮಾಣವೆಷ್ಟು ಎಂಬುದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಒಟ್ಟು ಜಿಎಸ್‌ಟಿ ಸಂಗ್ರಹಣೆ ಮೂಲಗಳು

ಒಟ್ಟು ಜಿಎಸ್‌ಟಿ ಸಂಗ್ರಹಣೆ ಮೂಲಗಳು

ಭಾರತದಲ್ಲಿನ ಒಟ್ಟು ಸಂಗ್ರಹಗಳಲ್ಲಿ ಕೇಂದ್ರದ ಜಿಎಸ್‌ಟಿ ಮೂಲಕ 25,751 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ರಾಜ್ಯ ‌ಜಿಎಸ್‌ಟಿ ಮುಖೇನ 32,807 ಕೋಟಿ ರೂಪಾಯಿ ಸಂಗ್ರಹಿಸಿದ್ದು, ಮದ್ಯವರ್ತಿ ಜಿಎಸ್‌ಟಿ ಮೂಲಕ 79,518 ಕೋಟಿ ರೂಪಾಯಿ ಅನ್ನು ಸಂಗ್ರಹಿಸಲಾಗಿದೆ. ಈ ಪೈಕಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ. 41,420 ಕೋಟಿ ಸೇರಿದೆ. ಅದೇ ರೀತಿ ಸಂಗ್ರಹವಾದ 10,920 ಕೋಟಿ ರೂಪಾಯಿ ಸೆೆಸ್ ನಲ್ಲಿ 995 ಕೋಟಿ ರೂಪಾಯಿ ಆಮದು ಸೆಸ್ ಸೇರಿಕೊಂಡಿದೆ.

ಕೇಂದ್ರ ಮತ್ತು ರಾಜ್ಯಕ್ಕೆ ಮಧ್ಯವರ್ತಿ ಜಿಎಸ್‌ಟಿಯಿಂದ ಸಿಕ್ಕಿದ್ದೆಷ್ಟು?

ಕೇಂದ್ರ ಮತ್ತು ರಾಜ್ಯಕ್ಕೆ ಮಧ್ಯವರ್ತಿ ಜಿಎಸ್‌ಟಿಯಿಂದ ಸಿಕ್ಕಿದ್ದೆಷ್ಟು?

ಮಧ್ಯವರ್ತಿ ಜಿಎಸ್‌ಟಿಯಲ್ಲಿ ಸಂಗ್ರಹಣೆ ಮಾಡಿರುವ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಐಜಿಎಸ್‌ಟಿಯಿಂದ ಕೇಂದ್ರದ ಜಿಎಸ್‌ಟಿಗೆ 32,365 ಕೋಟಿ ರೂಪಾಯಿ ಮತ್ತು ರಾಜ್ಯದ ಜಿಎಸ್‌ಟಿಗೆ 26,774 ಕೋಟಿ ರೂಪಾಯಿ ಹಂಚಿಕೆ ಮಾಡಿಕೊಳ್ಳಲಾಗಿದೆ.

ತೆರಿಗೆ ಹಂಚಿಕೆ ನಂತರ ರಾಜ್ಯ ಮತ್ತು ಕೇಂದ್ರಕ್ಕೆ ಸಿಕ್ಕಿದೆಷ್ಟು?

ತೆರಿಗೆ ಹಂಚಿಕೆ ನಂತರ ರಾಜ್ಯ ಮತ್ತು ಕೇಂದ್ರಕ್ಕೆ ಸಿಕ್ಕಿದೆಷ್ಟು?

2022ರ ಜುಲೈ ತಿಂಗಳ ಆದಾಯವನ್ನು ಇತ್ಯರ್ಥಗೊಳಿಸಿದ ನಂತರದಲ್ಲಿ ಕೇಂದ್ರಕ್ಕೆ ಜಿಎಸ್‌ಟಿ ಮೂಲಕ 58,116 ಕೋಟಿ ರೂಪಾಯಿ ಆದಾಯ ಸಂಗ್ರಹಣೆಯಾಗಿದೆ. ಅದೇ ರೀತಿ ರಾಜ್ಯಗಳಿಗೆ 59,581 ಕೋಟಿ ರೂಪಾಯಿ ಆದಾಯ ಹಂಚಿಕೆ ಮಾಡಿದಂತೆ ಆಗಿದೆ. ವಿಶೇಷವೆಂದರೆ ಇತ್ತೀಚಿನ ಐದು ತಿಂಗಳಿನಿಂದ ನಿರಂತರವಾಗಿ ಮಾಸಿಕ ಜಿಎಸ್‌ಟಿ ಆದಾಯವು 1.4 ಲಕ್ಷ ಕೋಟಿಗಿಂತಲೂ ಹೆಚ್ಚಾಗುತ್ತಿದೆ. ಇದು ಪ್ರತಿ ತಿಂಗಳ ಆದಾಯದಲ್ಲಿನ ಸ್ಥಿರತೆಯನ್ನು ತೋರಿಸುತ್ತದೆ.

ದೇಶದ ಜಿಎಸ್‌ಟಿಯಲ್ಲಿ ಗಣನೀಯ ಏರಿಕೆ

ದೇಶದ ಜಿಎಸ್‌ಟಿಯಲ್ಲಿ ಗಣನೀಯ ಏರಿಕೆ

ಕಳೆದ 2021ರ ಜುಲೈ ತಿಂಗಳಿಗೆ ಹೋಲಿಸಿದರೆೆ, 2022ರ ಜಿಎಸ್‌ಟಿ ಆದಾಯದಲ್ಲಿ ಶೇ.35ರಷ್ಟು ಹೆಚ್ಚಳವಾಗಿದೆ. ಈ ಹಿಂದೆ ಜಿಎಸ್‌ಟಿ ಸಮಿತಿಯು ತೆಗೆದುಕೊಂಡ ಕ್ರಮದಿಂದಾಗಿ ಉತ್ತಮ ಆದಾಯ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಆರ್ಥಿಕ ಚೇತರಿಕೆ ಜೊತೆ ಉತ್ತಮ ಹಾಗೂ ಸ್ಥಿರ ಆದಾಯವು ಜಿಎಸ್‌ಟಿ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. 2022ರ ಜೂನ್ ತಿಂಗಳಇನಲ್ಲಿ 7.45 ಕೋಟಿ ಇ-ವೇ ಬಿಲ್‌ಗಳನ್ನು ರಚಿಸಲಾಗಿದೆ. 2022ರ ಮೇ ತಿಂಗಳಿನಲ್ಲಿ 7.36 ಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ.

Recommended Video

ಫಾಝಿಲ್ ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಚೇಸ್ ಮಾಡಿ ಅರೆಸ್ಟ್ ಮಾಡಿದ್ದು ಹೇಗೆ? | *Crime |Oneindia Kannada

English summary
GST Revenue Collections in July 2022: Gross GST revenue collected in July 2022 is Rs 1,48,995 crore. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X