ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿರ್ಬಂಧಗಳ ನಡುವೆ ಮೇ ತಿಂಗಳಲ್ಲಿ 1 ಲಕ್ಷ ಕೋಟಿ ರೂ ಮೀರಿದ ಜಿಎಸ್‌ಟಿ ಆದಾಯ

|
Google Oneindia Kannada News

ನವದೆಹಲಿ, ಜೂನ್ 05: ದೇಶದ ಹಲವೆಡೆ ಲಾಕ್‌ಡೌನ್ ನಿರ್ಬಂಧಗಳ ನಡುವೆಯೂ ಮೇ ತಿಂಗಳಿನ ಜಿಎಸ್‌ಟಿ ಆದಾಯ ಸಂಗ್ರಹ ಒಂದು ಲಕ್ಷ ಕೋಟಿ ರೂಪಾಯಿ ಮೀರಿದೆ.

ಹಣಕಾಸು ಸಚಿವಾಲಯ ಶನಿವಾರ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದ್ದು, ಮೇ ತಿಂಗಳಿನಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿ ಮೊತ್ತವು 1,02,709 ಕೋಟಿ ರೂಪಾಯಿಯಾಗಿದ್ದು, ಅದರಲ್ಲಿ ಸಿಜಿಎಸ್‌ಟಿ 17,592 ಕೋಟಿ ರೂ ಆಗಿದೆ. ಎಸ್‌ಜಿಎಸ್‌ಟಿ 22,653 ಕೋಟಿ ರೂ ಆಗಿದೆ. ಐಜಿಎಸ್‌ಟಿ 53,199 ಕೋಟಿ ರೂ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 26,002 ಕೋಟಿ ರೂ ಒಳಗೊಂಡು) ಹಾಗೂ 9,265 ಕೋಟಿ ರೂ ಸೆಸ್ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 868 ಕೋಟಿ ರೂ ಒಳಗೊಂಡು) ಆಗಿದೆ.

GST Collection in May: GST Revenues Cross Rs 1 lakh Crore in May 2021

ಜೂನ್ 4ರವರೆಗಿನ ದೇಶೀಯ ವಹಿವಾಟಿನ ಜಿಎಸ್‌ಟಿ ಸಂಗ್ರಹವೂ ಇದರಲ್ಲಿ ಒಳಗೊಂಡಿದೆ. ತೆರಿಗೆ ಪಾವತಿದಾರರಿಗೆ ಬಡ್ಡಿ ಕಡಿತದ ರೂಪದಲ್ಲಿ ಪರಿಹಾರ ಕ್ರಮಗಳನ್ನು ನೀಡಲಾಗಿತ್ತು.

ಈ ತಿಂಗಳಿನಲ್ಲಿ ಸರ್ಕಾರ ಸಿಜಿಎಸ್‌ಟಿಗೆ 15,014 ಕೋಟಿ ರೂ. ಮತ್ತು ಐಜಿಎಸ್‌ಟಿಯಿಂದ ಎಸ್‌ಜಿಎಸ್‌ಟಿಗೆ 11,653 ಕೋಟಿ ರೂ. ನೀಡಿದೆ.

ಮಾರ್ಚ್ ತಿಂಗಳಲ್ಲಿ ದಾಖಲೆಯ 1.23 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹಮಾರ್ಚ್ ತಿಂಗಳಲ್ಲಿ ದಾಖಲೆಯ 1.23 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಎಸ್‌ಟಿ ಆದಾಯ ಹೆಚ್ಚಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿನ ಆದಾಯಕ್ಕಿಂತ ಮೇ 2021ರಲ್ಲಿ ಶೇ. 65ರಷ್ಟು ಆದಾಯ ಹೆಚ್ಚಾಗಿದೆ. ಮೇ ತಿಂಗಳಿನಲ್ಲಿ ಸರಕು ಆಮದಿನ ಆದಾಯ ಶೇ 56ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಶೇ. 69ರಷ್ಟು ಆದಾಯ ಹೆಚ್ಚಾಗಿದೆ. ಭಾರತದ ಆರ್ಥಿಕತೆ ಮೇಲಿನ ಲಾಕ್‌ಡೌನ್ ಪರಿಣಾಮ ನಿರೀಕ್ಷೆಗಿಂತ ಕಡಿಮೆಯಿದೆ ಎಂದು ಡೆಲಾಯ್ಡ್‌ ಇಂಡಿಯಾದ ಹಿರಿಯ ನಿರ್ದೇಶಕ ಎಂ.ಎಸ್. ಮಣಿ ಹೇಳಿದ್ದಾರೆ. ಇದರೊಂದಿಗೆ ಮುಂದಿನ ತಿಂಗಳುಗಳ ಆದಾಯ ಸಂಗ್ರಹವನ್ನೂ ಗಮನಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಮೇ ತಿಂಗಳನ್ನು ಒಳಗೊಂಡು ಸತತ ಎಂಟನೇ ತಿಂಗಳು ಜಿಎಸ್‌ಟಿ ಆದಾಯ ಸಂಗ್ರಹ ಒಂದು ಲಕ್ಷ ಕೋಟಿ ರೂಪಾಯಿಯನ್ನು ಮೀರಿದೆ.

English summary
GST revenues cross Rs 1 lakh crore in May 2021 in between lockdown in many states
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X