ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GST ಸಂಗ್ರಹ 1 ಲಕ್ಷ ಕೋಟಿಗೂ ಕಡಿಮೆ; ಆಗಸ್ಟ್ ನಲ್ಲಿ 98,202 ಕೋಟಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ಭಾರತದ ಒಟ್ಟಾರೆ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಆಗಸ್ಟ್ ತಿಂಗಳಲ್ಲಿ 1 ಲಕ್ಷ ಕೋಟಿಗಿಂತ ಕಡಿಮೆಗೆ ಇಳಿದಿದ್ದು, ಭಾನುವಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ- ಅಂಶದ ಪ್ರಕಾರ 98,202 ಕೋಟಿ ರುಪಾಯಿ ಸಂಗ್ರಹ ಮಾಡಲಾಗಿದೆ.

ಜುಲೈ ತಿಂಗಳ ಒಟ್ಟಾರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹ 1.02 ಲಕ್ಷ ಕೋಟಿ ರುಪಾಯಿ ಆಗಿತ್ತು. ಆದರೂ 2019ನೇ ಇಸವಿಯ ಆಗಸ್ಟ್ ತಿಂಗಳ ಜಿಎಸ್ ಟಿ ಸಂಗ್ರಹವನ್ನು ಕಳೆದ ವರ್ಷದ ಆಗಸ್ಟ್ ಗೆ ಹೋಲಿಸಿದರೆ (ರು. 93,960 ಕೋಟಿ) 4.5% ಹೆಚ್ಚು ತೆರಿಗೆ ಸಂಗ್ರಹ ಆಗಿದೆ.

ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲಿನ ಜಿಎಸ್‌ಟಿ ಇಳಿಕೆಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲಿನ ಜಿಎಸ್‌ಟಿ ಇಳಿಕೆ

ಈ ವರ್ಷದಲ್ಲಿ ಇದು ಎರಡನೇ ಬಾರಿಗೆ ಜಿಎಸ್ ಟಿ ಮೂಲಕ ಆದಾಯ ಸಂಗ್ರಹವು 1 ಲಕ್ಷ ಕೋಟಿಗಿಂತ ಕೆಳಗೆ ಇಳಿದಿದೆ. ಹೀಗೆ ಮೊದಲ ಬಾರಿಗೆ ಆಗಿದ್ದು ಜೂನ್ ತಿಂಗಳಲ್ಲಿ. ಆ ಬಾರಿ 99,939 ಕೋಟಿ ರುಪಾಯಿ ಸಂಗ್ರಹ ಆಗಿತ್ತು.

GST

ಕೇಂದ್ರ ಜಿಎಸ್ ಟಿ ಸಂಗ್ರಹ 17,733 ಕೋಟಿ ರುಪಾಯಿ, ರಾಜ್ಯ ಜಿಎಸ್ ಟಿ ಸಂಗ್ರಹ 24,239 ಕೋಟಿ ರುಪಾಯಿ ಮತ್ತು ಸಮಗ್ರ ಜಿಎಸ್ ಟಿ 48,958 ಕೋಟಿ ರುಪಾಯಿ (ಆಮದಿನ ಮೇಲೆ ಸಂಗ್ರಹಿಸಿರುವ 24,818 ಕೋಟಿ ರುಪಾಯಿ ಒಳಗೊಂಡಿದೆ) ಆಗಸ್ಟ್ ನಲ್ಲಿ ಸಂಗ್ರಹ ಆಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

English summary
GST collection this year for second time in the month of August below 1 lakh crore. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X