ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ಲಾಭದ ವಂಚನೆ: ಜಿಲೆಟ್ ಇಂಡಿಯಾ ಹಾಗೂ P&Gಗೆ 241 ಕೋಟಿ ರೂ. ದಂಡ

|
Google Oneindia Kannada News

ನವದೆಹಲಿ, ನವೆಂಬರ್ 26: ಜಿಎಸ್‌ಟಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ 241 ಕೋಟಿ ಲಾಭಗಳಿಸಿರುವ ಜೆಲೆಟ್ ಇಂಡಿಯಾ ಹಾಗೂ ಪ್ರಾಕ್ಟರ್‌ ಆಂಡ್‌ ಗ್ಯಾಂಬಲ್‌ (P&G) ಗೆ ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ (ಎನ್‌ಎಎ) 241 ಕೋಟಿ ರೂ. ದಂಡ ವಿಧಿಸಿದೆ.

ಉಭಯ ಕಂಪನಿಗಳು 181.51 ಕೋಟಿ ರೂ., 2 ಕೋಟಿ ರೂ ಮತ್ತು 57.99 ಕೋಟಿ ರೂಪಾಯಿಗಳನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ ಎಂದು ನವೆಂಬರ್‌ 25ರ ಆದೇಶದಲ್ಲಿ ಎನ್‌ಎಎ ಹೇಳಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 95,480 ಕೋಟಿ GST ಸಂಗ್ರಹ: ಶೇ. 4ರಷ್ಟು ಏರಿಕೆಸೆಪ್ಟೆಂಬರ್ ತಿಂಗಳಿನಲ್ಲಿ 95,480 ಕೋಟಿ GST ಸಂಗ್ರಹ: ಶೇ. 4ರಷ್ಟು ಏರಿಕೆ

ಜಿಎಸ್‌ಟಿ ದರವನ್ನು ಕಡಿತಗೊಳಿಸಿದ ಬೆನ್ನಿಗೆ ಕಂಪನಿಯು 1,383 ಉತ್ಪನ್ನಗಳ ದರವನ್ನು ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಲಾಭ ಪಡೆದುಕೊಂಡ ಮೊತ್ತವನ್ನು ಹಾಗೂ ಬಡ್ಡಿಯ ಹಣವನ್ನು ಕೇಂದ್ರ ಮತ್ತು ರಾಜ್ಯ ಗ್ರಾಹಕ ಕಲ್ಯಾಣ ನಿಧಿಗೆ ಪಾವತಿ ಮಾಡುವಂತೆ ಎನ್‌ಎಎ ಸೂಚನೆ ನೀಡಿತ್ತು.

GST Authority Finds P&G, Gillete Guilty Of Profiteering: Fine Rs 241 Crore

ಎನ್‌ಎಎ ಅಧ್ಯಕ್ಷ ಬಿ.ಎನ್‌. ಶರ್ಮಾ ನೇತೃತ್ವದ ಸಮಿತಿಯು ಪಿ & ಜಿ ಹೋಮ್ ಪ್ರಾಡಕ್ಟ್ಸ್, ಪಿ & ಜಿ ಹೈಜೀನ್ ಮತ್ತು ಹೆಲ್ತ್‌ಕೇರ್ ಜೊತೆಗೆ ಜಿಲೆಟ್ ಇಂಡಿಯಾ ಕಂಪನಿಗಳು ಗ್ರಾಹಕರಿಗೆ ರವಾನಿಸದ ತೆರಿಗೆ ಲಾಭದ ಪ್ರಮಾಣವು ರೂ .181.51 ಕೋಟಿ, ರೂ .2 ಕೋಟಿ ಮತ್ತು 57.99 ರೂ. ಕೋಟಿ ರೂ. ಎಂದು ತಿಳಿಸಿದೆ.

ಲಾಭದ ಮೊತ್ತವನ್ನು ಆದೇಶ ನೀಡಿದ ಮೂರು ವಾರದ ಒಳಗೆ ಪಾವತಿ ಮಾಡಬೇಕು ಎಂದು ಎನ್‌ಎಎ ಹೇಳಿದೆ. ಆದರೆ ಎಲ್ಲಾ ಕಾನೂನು ಆಯ್ಕೆಗಳನ್ನು ಪರಿಶೀಲನೆ ಮಾಡುವುದಾಗಿ ಪಿ ಆಂಡ್‌ ಜಿ ವಕ್ತಾರರು ಹೇಳಿದ್ದಾರೆ.

English summary
The Goods and Services Tax (GST) anti-profiteering watchdog, National Anti-profiteering Authority (NAA), said on Wednesday said P&G and Gillette India has allegedly profiteered over Rs 241 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X