ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GST ವಾರ್ಷಿಕ ವಿವರ ಸಲ್ಲಿಕೆ ಗಡುವು 1 ತಿಂಗಳ ಮಟ್ಟಿಗೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 01: 2018-19ನೇ ಸಾಲಿನ ಜಿಎಸ್‌ಟಿಆರ್ 9 ಮತ್ತು 9 ಸಿ ಸಲ್ಲಿಸಲು ನಿಗದಿತ ದಿನಾಂಕವನ್ನು ಸರ್ಕಾರ ಬುಧವಾರ ವಿಸ್ತರಿಸಿದೆ. ಈ ಸಾಲಿನ ಹಣಕಾಸು ವರ್ಷಕ್ಕೆ ಸಂಬಂಧಿಸದಿ ಜಿಎಸ್‌ಟಿ ವಾರ್ಷಿಕ ವಿವರ ಮತ್ತು ಲೆಕ್ಕಪತ್ರ ವಿವರ ಸಲ್ಲಿಸಲು ಇದ್ದ ಗಡುವನ್ನು ಕೇಂದ್ರ ಸರ್ಕಾರವು ಒಂದು ತಿಂಗಳ ಮಟ್ಟಿಗೆ ಮುಂದೂಡಿದೆ. ಇದರ ಅನ್ವಯ ಅಕ್ಟೋಬರ್ 31ರೊಳಗೆ ಈ ವಿವರ ಸಲ್ಲಿಸಬೇಕು.

ಕೇಂದ್ರವು GST ಹಣವನ್ನು ಬೇರೆಡೆ ಬಳಸಿ, ಕಾನೂನು ಉಲ್ಲಂಘಿಸಿದೆ: ಸಿಎಜಿಕೇಂದ್ರವು GST ಹಣವನ್ನು ಬೇರೆಡೆ ಬಳಸಿ, ಕಾನೂನು ಉಲ್ಲಂಘಿಸಿದೆ: ಸಿಎಜಿ

''ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ, ಚುನಾವಣಾ ಆಯೋಗದಿಂದ ಅನುಮತಿ ಪಡೆದು ದಿನಾಂಕ ವಿಸ್ತರಣೆ ಮಾಡಲಾಗಿದೆ'' ಎಂದು ಕೇಂದ್ರ ಪರೋಕ್ಷ ತೆರಿಗೆ ಮಂಡಳಿ ಹೇಳಿದೆ. ಈ ಮೊದಲಿನ ಗುಡಿವನ ಪ್ರಕಾರ ಸೆಪ್ಟೆಂಬರ್ 30ರೊಳಗೆ ಈ ವಿವರಗಳನ್ನು ಸಲ್ಲಿಸಬೇಕಿತ್ತು.

GST

ಇದಕ್ಕೂ ಮೊದಲು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಜಿಎಸ್‌ಟಿ ಕೌನ್ಸಿಲ್‌ಗೆ 2018-19 ಜಿಎಸ್‌ಟಿ ವಾರ್ಷಿಕ ರಿಟರ್ನ್ ಫೈಲಿಂಗ್ ಗಡುವನ್ನು ಡಿಸೆಂಬರ್ 31 ರವರೆಗೆ ಮೂರು ತಿಂಗಳವರೆಗೆ ಮುಂದೂಡಬೇಕೆಂದು ಕೋರಿತ್ತು. ಮೇ ತಿಂಗಳಲ್ಲಿ ಸರ್ಕಾರವು ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವನ್ನು 2018-19ರ ಹಣಕಾಸು ವರ್ಷ ಸೆಪ್ಟೆಂಬರ್ 2020 ರವರೆಗೆ ವಿಸ್ತರಿಸಿತ್ತು.

ಕೋವಿಡ್-19 ಸಾಂಕ್ರಾಮಿಕ ಕಾರಣದಿಂದ ಜಿಎಸ್‌ಟಿ ವಾರ್ಷಿಕ ವಿವರ ಸಲ್ಲಿಸಲು ಹೆಣಗಾಟ ನಡೆಸುತ್ತಿರುವ ಉದ್ಯಮಗಳಿಗೆ ಇದರಿಂದ ನೆರವಾಗುತ್ತದೆ ಎನ್ನಲಾಗಿದೆ.

English summary
The Government on Wednesday extended the due date to file GSTR9 and 9C for 2018-19 by a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X