ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಬಿಸಿಐ ಟಾಪ್ 10 ಪಟ್ಟಿಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

|
Google Oneindia Kannada News

ಬೆಂಗಳೂರು, ಜನವರಿ 21: ಜಿಬಿಸಿಐ ಇಂಡಿಯಾ (ಗ್ರೀನ್ ಬ್ಯುಸಿನೆಸ್ ಸರ್ಟಿಫಿಕೇಶನ್ ಇಂಕ್) ಲೀಡರ್‍ಶಿಪ್ ಇನ್ ಎನರ್ಜಿ ಅಂಡ್ ಎನ್‍ವಾಯರ್‍ನ್ಮೆಂಟಲ್ ಡಿಸೈನ್‍ನಲ್ಲಿ ಭಾರತದ ಅತ್ಯುತ್ತಮ 10 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ 2 ನೇ ಅತ್ಯುತ್ತಮ ರಾಜ್ಯವಾಗಿ ಹೊರಹೊಮ್ಮಿದೆ. ಸತತ ಮೂರನೇ ವರ್ಷ ಭಾರತದ ರಾಜ್ಯಗಳು ಟಾಪ್ 10 ರಲ್ಲಿ ಸ್ಥಾನ ಪಡೆದಿವೆ.

ಯುಎಸ್‍ನ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಅಂಡ್ ಜಿಬಿಸಿಐನ ಸಿಇಒ ಮಹೇಶ್ ರಾಮಾನುಜಂ ಅವರು ಮಾತನಾಡಿ, "ಗ್ರೀನ್ ಬಿಲ್ಡಿಂಗ್ ಕ್ಷೇತ್ರದಲ್ಲಿ ಭಾರತ ನಾಯಕನ ಸ್ಥಾನದಲ್ಲಿದೆ. ಕಟ್ಟಡಗಳು ಮತ್ತು ಜಾಗಕ್ಕೆ ಸಂಬಂಧಿಸಿದಂತೆ ಲೀಡ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ವಿಚಾರದಲ್ಲಿ ಭಾರತ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಗೆ ಸಾಕಷ್ಟು ಕೊಡುಗೆಯನ್ನು ನೀಡುತ್ತಿದೆ. ಭಾರತವು ತನ್ನ ನಾಗರಿಕರಿಗೆ ಆರೋಗ್ಯ ಮತ್ತು ಸಮರ್ಪಕವಾದ ಕಟ್ಟಡ ಹಾಗೂ ಸಮುದಾಯಗಳಿಗೆ ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ನೀಡುತ್ತಿದೆ" ಎಂದರು.

ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಪಟ್ಟಿಯಲ್ಲಿ ಕರ್ನಾಟಕ ನಂ.2ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಪಟ್ಟಿಯಲ್ಲಿ ಕರ್ನಾಟಕ ನಂ.2

"ಮುಂದಿನ ತಿಂಗಳು ಬೆಂಗಳೂರಿನಲ್ಲಿ ಗ್ರೀನ್ ಬಿಲ್ಡ್ ಇಂಡಿಯಾ ನಡೆಯಲಿದೆ. ಈ ಸಮಾವೇಶದಲ್ಲಿ ಭಾರತದ ಗ್ರೀನ್ ಬಿಲ್ಡಿಂಗ್ ಪರಿಣತರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಅವರು ಎಲ್ಲಾ ನಾಗರಿಕರಿಗಾಗಿ ಸುಸ್ಥಿರ ಭವಿಷ್ಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪರಸ್ಪರ ಯೋಜನೆಗಳು, ರೂಪುರೇಶೆಗಳ ಬಗ್ಗೆ ಚರ್ಚಿಸಲಿದ್ದಾರೆ'' ಎಂದು ಅವರು ತಿಳಿಸಿದರು.

Green Business Certification Inc Top 10 list out, Karnataka in 2nd place

ಲೀಡರ್‍ಶಿಪ್ ಇನ್ ಎನರ್ಜಿ ಅಂಡ್ ಎನ್‍ವಾಯರ್‍ನ್ಮೆಂಟಲ್ ಡಿಸೈನ್(ಲೀಡ್) ಸುಸ್ಥಿರತೆಯ ಸಂಕೇತವಾಗಿದೆ. ಇದರ ಮೂಲಕ ಕಡಿಮೆ ಇಂಗಾಲ ಹೊರಸೂಸುವ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಈ ಮೂಲಕ ಸುಸ್ಥಿರವಾದ ಪದ್ಧತಿಗಳಿಗೆ ಆದ್ಯತೆ ನೀಡುವುದು ಮತ್ತು ಆರೋಗ್ಯಕರವಾದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಈ ಲೀಡ್ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹರ್ಯಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳು ನಂತರದ ಸ್ಥಾನದಲ್ಲಿವೆ. ಕಳೆದ ವರ್ಷ ಹಿಂದೆ ಬಿದ್ದಿದ್ದ ಹರ್ಯಾಣ ಈ ಬಾರಿ ಶ್ರೇಯಾಂಕದಲ್ಲಿ ಮೇಲಕ್ಕೆ ಹೋಗಿ ತಮಿಳುನಾಡನ್ನು ಹಿಂದಕ್ಕೆ ಹಾಕಿದೆ.

ಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿ

ಭಾರತದಲ್ಲಿ 1400 ಕ್ಕೂ ಹೆಚ್ಚು ಲೀಡ್ ಪ್ರಮಾಣೀಕೃತ ಕಟ್ಟಡಗಳಿದ್ದು, ಈ ಪೈಕಿ ಶಾಲೆಗಳು, ಆಸ್ಪತ್ರೆಗಳು, ಕಚೇರಿಗಳು ಮತ್ತು ವಸತಿ ಸಮುಚ್ಛಯಗಳಿವೆ. ಈ ಕಟ್ಟಡಗಳು ಜನರಿಗೆ ಆರೋಗ್ಯಕರವಾದ ವಾತಾವರಣವನ್ನು ನೀಡುತ್ತವೆ. ಇದರ ಜತೆಗೆ ಇಂಧನ ಮತ್ತು ನೀರು ಉಳಿತಾಯವನ್ನು ಉಂಟುಮಾಡುತ್ತವೆ. ಇಷ್ಟೇ ಅಲ್ಲದೇ, ವಾಯು ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತವೆ. 2020 ರ ಫೆಬ್ರವರಿ 6-7 ರಂದು ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ಲೀಡ್ ಸಮಾವೇಶ ನಡೆಯಲಿದ್ದು, ದೇಶದ ಗ್ರೀನ್ ಬಿಲ್ಡಿಂಗ್ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಪಾಲ್ಗೊಳ್ಳಲು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

English summary
Green Business Certification Inc Top 10 list out, Karnataka in 2nd place
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X