ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪ್ಯಾನಿಶ್ ಶೈಲಿಯ ಅತ್ಯಾಕರ್ಷಕ ಗ್ರ್ಯಾಂಡ್ ಲಾ ಕಾಸಾ ವಿಲ್ಲಾಗಳು

Google Oneindia Kannada News

ಚಂದಾಪುರದ ಆನೇಕಲ್ ಮುಖ್ಯರಸ್ತೆಯಲ್ಲಿ ಗ್ರ್ಯಾಂಡ್ ಲಾ ಕಾಸಾ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಕೇವಲ 15 ನಿಮಿಷಗಳಷ್ಟು ದೂರದಲ್ಲಿರುವ ಈ ಪ್ರೀಮಿಯಂ ವಿಲ್ಲಾಗಳ ಬೆಲೆ 88 ಲಕ್ಷ ರೂ. ದಿಂದ ಆರಂಭವಾಗುತ್ತದೆ.

ಬಿಎಂಆರ್‌ಡಿಎ ಅನುಮೋದನೆ ಪಡೆದಿರುವ ಗ್ರ್ಯಾಂಡ್ ಲಾ ಕಾಸಾ, ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ನಿರ್ಮಾಣವಾಗಲಿದ್ದು, ಇವುಗಳು ಸ್ಪ್ಯಾನಿಶ್ ಶೈಲಿಯನ್ನು ಹೊಂದಿರಲಿವೆ. ಈ ಪ್ರಾಜೆಕ್ಟ್ ಸಮೀಪದಲ್ಲಿಯೇ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ಶಾಪಿಂಗ್ ಮಾಲ್‌ಗಳು ಇರುವುದರಿಂದ ಸಾಕಷ್ಟು ಅನುಕೂಲತೆಗಳು ಲಭ್ಯವಾಗಲಿವೆ. ಜತೆಗೆ 35,000 ಚದರ ಅಡಿಯಷ್ಟು ವಿಶಾಲವಾದ ಬೃಹತ್ ಕ್ಲಬ್ ಹೌಸ್ ಇಲ್ಲಿನ ಪ್ರಮುಖ ಅಂಶಗಳಲ್ಲಿ ಒಂದು. ಹತ್ತು ತಿಂಗಳ ಒಳಗೆ ವಿಲ್ಲಾ ನಿಮ್ಮದಾಗಿಸಿಕೊಳ್ಳಬಹುದು.

ಗ್ರ್ಯಾಂಡ್ ಲಾ ಕಾಸಾ ಸ್ಪ್ಯಾನಿಶ್ ಶೈಲಿಯ ಪ್ರೀಮಿಯಂ ವಿಲ್ಲಾಗಳನ್ನು ನಿರ್ಮಿಸುತ್ತದೆ. ಇದು ಚಂದಾಪುರ-ಆನೇಕಲ್ ಮುಖ್ಯರಸ್ತೆಯಲ್ಲಿ 11 ಎಕರೆಗಳಷ್ಟು ವಿಶಾಲ ಜಾಗದಲ್ಲಿದೆ. 196 ಅತ್ಯುತ್ತಮ ಗುಣಮಟ್ಟದ ಮತ್ತು ಅತ್ಯಾಕರ್ಷಕ ವಿಲ್ಲಾಗಳು ಲಭ್ಯ. ಸಾಮಾನ್ಯವಾಗಿ ಹೆಚ್ಚಿನ ಪ್ಲಾಟ್‌ಗಳು 30*40 ಮತ್ತು 30*50 ಅಳತೆಯದ್ದಾಗಿದ್ದರೆ, ಇನ್ನು ಕೆಲವು ವಿಭಿನ್ನ ಅಳತೆಯಲ್ಲಿವೆ.

ಪ್ರತಿ 30*40 ಮತ್ತು 30*50 ಅಳತೆಯ ಪ್ಲಾಟ್‌ಗಳಿಗೆ ಗ್ರಾಹಕರು 3 ಬಿಎಚ್‌ಕೆ ಮತ್ತು 4 ಬಿಎಚ್‌ಕೆಯ ವಿಲ್ಲಾ ಲೇಔಟ್ ಆಯ್ಕೆಗಳನ್ನು ಪಡೆಯಲಿದ್ದಾರೆ. ಅಂದಹಾಗೆ, ಈ ಪ್ರಾಜೆಕ್ಟ್ ಸಾಕಷ್ಟು ಸವಲತ್ತುಗಳನ್ನು ಒಳಗೊಂಡಿರಲಿದೆ. ಮಕ್ಕಳಿಗೆ ಆಟದ ಉದ್ಯಾನ, 35,000 ಚದರ ಅಡಿಯಷ್ಟು ವಿಶಾಲವಾದ ಜಾಗದಲ್ಲಿ ಈಜುಕೊಳವನ್ನು ಹೊಂದಿರುವ ಬೃಹತ್ ಕ್ಲಬ್ ಹೌಸ್, ಒಳಾಂಗಣ ಆಟದ ಪ್ರದೇಶ, ಸಮುದಾಯ ಪಾರ್ಟಿ ಹಾಲ್, ಉದ್ಯಾನ, ಜಾಗಿಂಗ್ ಟ್ರ್ಯಾಕ್, ನೀರಿನ ಮೂಲಗಳು, ಕಿರು ಅರಣ್ಯ ಥೀಮ್ ಇರುವ ಉದ್ಯಾನ, ಬಾಸ್ಕೆಟ್‌ಬಾಲ್ ಕೋರ್ಟ್, ಟೆನ್ನಿಸ್ ಕೋರ್ಟ್, 24*7 ಅವಧಿಯ ಭದ್ರತಾ ವ್ಯವಸ್ಥೆ ಇರುತ್ತದೆ.

ಈ ಯೋಜನೆಯು ಕೋರಮಂಗಲದಿಂದ 35 ನಿಮಿಷ, ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ 30 ನಿಮಿಷ ಮತ್ತು ಮುಂಚೂಣಿ ಐಟಿ ಸಂಸ್ಥೆಗಳ ಕೇಂದ್ರವಾಗಿರುವ ಎಲೆಕ್ಟ್ರಾನಿಕ್ ಸಿಟಿಯಿಂದ ಕೇವಲ 15 ನಿಮಿಷದಷ್ಟು ದೂರದಲ್ಲಿದೆ.

ಪ್ರತಿ ವಿಲ್ಲಾಗಳೂ ನಿರ್ದಿಷ್ಟ ನಿಯಮಗಳಿಗೆ ಅನುಸಾರವಾಗಿ ಇರಲಿದ್ದು, ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕಿನ ಮುಖಗಳನ್ನು ಹೊಂದಿರಲಿವೆ. ವಿಲ್ಲಾಗಳ ಒಳಗೆ ವಾಹನ ನಿಲ್ಲಿಸಲು ಸೂಕ್ತ ಸ್ಥಳಾವಕಾಶ ಇರಲಿದೆ. ಜತೆಗೆ ಈ ಭಾಗದಲ್ಲಿ ಸುಸಜ್ಜಿತ ರಸ್ತೆ ಸೌಲಭ್ಯ ಇರಲಿದೆ.

ನೀರಿನ ಟ್ಯಾಂಕ್: ಓವರ್ ಹೆಡ್ ನೀರಿನ ಟ್ಯಾಂಕ್ 1,50,000 ಲೀಟರ್ ನೀರಿನ ಸಾಮರ್ಥ್ಯ ಹೊಂದಿದ್ದರೆ, ಅಂಡರ್‌ಗ್ರೌಂಡ್ ಸಂಪ್ ಕೂಡ 1,50,000 ಲೀಟರ್ ಸಾಮರ್ಥ್ಯವನ್ನು ಹೊಂದಿರಲಿದೆ.

ಕಿಚನ್ ಪ್ಲಾಟ್‌ಫಾರ್ಮ್: ಅಡುಗೆ ಮನೆಗೆ 40 ಮಿ.ಮೀ. ದಪ್ಪನೆಯ ಗ್ರಾನೈಟ್ ಸ್ಲ್ಯಾಬ್, ಫ್ಯುಚುರಾದ ಸ್ಟೈನ್‌ಲೆಸ್ ಸಿಂಕ್ ಮತ್ತು ಗ್ರಾನೈಟ್ ಸ್ಲ್ಯಾಬ್ ಮೇಲ್ಭಾಗದಲ್ಲಿ 2.5 ಅಡಿ ಎತ್ತರದವರೆಗೆ ಹೊಳಪಿನ ಟೈಲ್ಸ್‌ಗಳನ್ನು ಹೊಂದಿರಲಿದೆ.

ಫಿನಿಶಿಂಗ್: ವಿಲ್ಲಾದ ಹೊರಭಾಗದಲ್ಲಿ ಬಿರ್ಲಾ/ಏಷ್ಯನ್ ವೈಟ್ ಟೆಕ್ಚರ್ ಮೂಲಕ ಹಾಗೂ ಒಳಭಾಗದಲ್ಲಿ ಮೃದು ಫಿನಿಶಿಂಗ್ ನೀಡಲಾಗುತ್ತದೆ.

ದ್ವಾರಗಳು: ಮುಖ್ಯದ್ವಾರವನ್ನು ತೇಗದ ಮರದಿಂದ ಮಾಡಲಾಗುತ್ತದೆ. ಒಳಗಿನ ಬಾಗಿಲುಗಳ ಚೌಕಟ್ಟನ್ನು ತೇಗದ ಮರದಿಂದ ಮಾಡಲಾಗುತ್ತದೆ.

ಅಡಿಪಾಯ/ರಚನೆ: ಆರ್‌ಸಿಸಿ ಕ್ರಮದ ರಚನೆಯನ್ನು ಒಳಗೊಂಡಿರುತ್ತದೆ.

ಗೋಡೆಗಳು: 6 ಇಂಚಿನ ಕಾಂಕ್ರೀಟ್ ಸಾಲಿಡ್ ಬ್ಲಾಕ್‌ಗಳನ್ನು ಒಳಭಾಗದ ಗೋಡೆಗಳಿಗೆ ಬಳಸಲಾಗುತ್ತದೆ.

ವಿದ್ಯುತ್ ಸೌಲಭ್ಯ: ಪ್ರತಿ ವಿಲ್ಲಾಕ್ಕೂ 5 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತದೆ.

ಕಿಟಕಿಗಳು: 11 ಮಿಮೀ ಚದರದ ಯುಪಿವಿಸಿ ಕಿಟಕಿಗಳು.

ಸೀಲಿಂಗ್: 10 ಅಡಿ ಎತ್ತರ

ವಿದ್ಯುತ್ ಕೆಲಸಗಳು: ಗ್ರೇಟ್ ವೈಟ್/ ಹ್ಯಾವೆಲ್ಸ್‌ನಿಂದ ಅನುಮೋದನೆಗೊಂಡ ಅಗ್ನಿನಿರೋಧಕ ವೈರಿಂಗ್ ಒಳಗೊಂಡಿರುತ್ತದೆ. ಗ್ರೇಟ್ ವೈಟ್/ಹ್ಯಾವೆಲ್ಸ್ ಕಂಪೆನಿಯ ಸ್ವಿಚ್‌ಗಳನ್ನು ಬಳಸಲಾಗುತ್ತದೆ. ಪ್ಲಗ್/ ಎಸಿ ಪ್ಲಗ್ ಸವಲತ್ತಿನ ಜತೆಗೆ ಫ್ಯಾನ್ ಮತ್ತು ಲೈಟ್‌ಗಳಿಗೆ ಸಾಕಷ್ಟು ಪಾಯಿಂಟ್‌ಗಳಿರುತ್ತವೆ.

ಪೇಂಟಿಂಗ್: ಒಳಭಾಗದಲ್ಲಿ ಏಷ್ಯನ್ ಎಮುಲ್ಷನ್ ಪೇಂಟ್. ಹೊರಗೆ ಏಷ್ಯನ್ ವೆದರ್ ಪ್ರೂಫ್ ಪೇಂಟ್.

ನೆಲ: ಲಿವಿಂಗ್ ಮತ್ತು ಡೈನಿಂಗ್ ಕೊಠಡಿಗಳಿಗೆ ಇಟಾಲಿಯನ್ ಮಾರ್ಬಲ್ ಫ್ಲೋರಿಂಗ್ ಮಾಡಲಾಗುತ್ತದೆ. ಬೆಡ್‌ರೂಂ ಮತ್ತು ಕಿಚನ್‌ಗೆ ವಿಟ್ರಿಫೈಡ್ ಟೈಲ್ಸ್ ಉಪಯೋಗಿಸಲಾಗುತ್ತದೆ. ಬಾಲ್ಕನಿ ಮತ್ತು ಕಾರ್ ಪಾರ್ಕಿಂಗ್‌ಗೆ ಸಿಮೆಂಟ್, ಟೆರಾ ಕೋಟೆಡ್ ಟೈಲ್ಸ್. ಲಾಬಿ ಮತ್ತು ಕಾರಿಡಾರ್‌ಗೆ ಸಿಮೆಂಟ್ ಟೆರಾ ಕೋಟೆಡ್ ಟೈಲ್ಸ್. ಮೆಟ್ಟಿಲುಗಳ ಪ್ರದೇಶಕ್ಕೆ ಗ್ರಾನೈಟ್ ಫ್ಲೋರಿಂಗ್ ಇರುತ್ತದೆ.

ಬಚ್ಚಲುಮನೆ: ಇಟಾಲಿಕಾದಿಂದ ಲಿಂಟೆನ್‌ವರೆಗಿನ ಬ್ರ್ಯಾಂಡೆಡ್ ಸೆರಾಮಿಕ್ ಹೊಳಪಿನ ಟೈಲ್ಸ್‌ಗಳು. ನೆಲಕ್ಕೆ ಜಾರುವುದನ್ನು ತಡೆಯುವ ಲ್ಯಾಕ್ವೆರ್ ಫಿನಿಶ್/ಗ್ರಾನೈಟ್ ಕಲ್ಲಿನ್ನು ಹಾಕಲಾಗುತ್ತದೆ. ಗ್ರೋಹ್ ಸಿಪಿ ಬ್ರಾಸ್ ಫಿಟ್ಟಿಂಗ್/ವಿಟ್ರಾ ಫಿಟ್ಟಿಂಗ್‌ಗಳು, ವಿಟ್ರಾದ ಪಾಶ್ಚಿಮಾತ್ಯ ಶೈಲಿ ಕಮೋಡ್ ಇರುತ್ತದೆ.

ವಿಲ್ಲಾಗಳ ಸಮೀಪದಲ್ಲಿ ನಾರಾಯಣ ಹೃದಯಾಲಯ, ಸ್ಪರ್ಶ್ ಆಸ್ಪತ್ರೆ, ಮಜುಂದಾರ್ ಶಾ ಮೆಡಿಕಲ್ ಸೆಂಟರ್, ಕ್ರಾನಿಯೊ ಫೇಸಿಯಲ್ ಆಂಡ್ ಡೆಂಟಲ್ ಸ್ಪೆಷಲಿಸ್ಟ್ ಸೆಂಟರ್, ವಿಮಾಲಯ ಆಸ್ಪತ್ರೆಗಳಿವೆ. ಇನ್ನು ನಾರಾಯಣ ಪಿಯು ಕಾಲೇಜು, ಅಲೈಯನ್ಸ್ ವಿ.ವಿ, ಲಾರ್ವೆನ್ ಕಾಲೇಜ್ ಆಫ್ ಸೈನ್ಸ್ ಆಂಡ್ ಮ್ಯಾನೇಜ್‌ಮೆಂಟ್, ಸೈಂಟ್ ಜೋಸೆಫ್ ಪಿಯು ಕಾಲೇಜ್, ಪಿಇಎಸ್ ಯುನಿವರ್ಸಿಟಿಗಳಿವೆ.

ಅಟೊಮ್ ಕಿಡ್ಸ್ ಪ್ಲೇ ಶಾಲೆ, ನ್ಯೂ ಬಾಲ್ಡ್‌ವಿನ್ ಇಂಟರ್‌ನ್ಯಾಷನಲ್ ಶಾಲೆ, ಕೇಂಬ್ರಿಡ್ಜ್ ಮಾಂಟೆಸರಿ ಪ್ರಿ ಸ್ಕೂಲ್. ವೆಮನಾ ಇಂಟರ್‌ನ್ಯಾಷನಲ್ ಶಾಲೆ, ಸ್ಫೂರ್ತಿ ಗ್ಲೋಬಲ್ ಶಾಲೆ ಮತ್ತು ಎಡಿಫೈ ಸ್ಕೂಲ್ ಸಮೀಪದಲ್ಲಿರುವ ಶಾಲೆಗಳು. ಇಲ್ಲಿಂದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಎಲೆಕ್ಟ್ರಾನಿಕ್ ಸಿಟಿ, ವೆಲಂಕಣಿ ಟೆಕ್ ಪಾರ್ಕ್, ಇನ್‌ಫೋಸಿಸ್ ಮತ್ತು ಜಿಗಣಿ ಕೈಗಾರಿಕಾ ಪ್ರದೇಶಗಳಿಗೂ ಹೆಚ್ಚು ದೂರವಿಲ್ಲ.

ಈ ವಿಲ್ಲಾಗಳನ್ನು ಟಿಬಿಸಿ ಹೋಮ್ಸ್ ಇನ್‌ಫ್ರಾ ಕಾರ್ಪ್ ನಿರ್ಮಿಸುತ್ತಿದೆ. ಟಿಬಿಸಿ ಹೋಮ್ಸ್ ಬೆಂಗಳೂರಿನ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಯಾಗಿದೆ.

ಸಂಪರ್ಕ ವಿವರ:

ಮೊಬೈಲ್ ಸಂಖ್ಯೆ: 87924 90033, ವೆಬ್‌ಸೈಟ್.

ಪ್ರಾಜೆಕ್ಟ್ ವಿಳಾಸ:

ಸೈಟ್ ನಂಬರ್ 43, ಎಸ್‌ವೈ ನಂಬರ್ 87/2

ಆರ್‌ಕೆ ಫಾರ್ಮ್ ಗೇಟ್, ಬ್ಯಾಗಡದೇನಹಳ್ಳಿ ಗ್ರಾಮ,

ಚಂದಾಪುರ, ಆನೇಕಲ್ ಮುಖ್ಯರಸ್ತೆ,

ಬೆಂಗಳೂರು, ಕರ್ನಾಟಕ-562106

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X