ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ- ಆರ್ ಬಿಐ ಮಧ್ಯೆ ತಿಕ್ಕಾಟಕ್ಕೆ 3.6 ಲಕ್ಷ ಕೋಟಿಯೇ ಕಾರಣ!

|
Google Oneindia Kannada News

ನವದೆಹಲಿ, ನವೆಂಬರ್ 6: ಕೇಂದ್ರ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧ್ಯದ ತಿಕ್ಕಾಟಕ್ಕೆ ಮುಖ್ಯ ಕಾರಣವೊಂದು ಇಲ್ಲಿದೆ. ಆರ್ ಬಿಐ ಬಳಿ ಇರುವ ಒಟ್ಟು ಮೀಸಲು ನಿಧಿ 9.59 ಲಕ್ಷ ಕೋಟಿ ರುಪಾಯಿ ಪೈಕಿ 1/3 ಭಾಗಕ್ಕಿಂತ ಹೆಚ್ಚಿನ ಮೊತ್ತವಾದ 3.6 ಲಕ್ಷ ಕೋಟಿಯನ್ನು ವರ್ಗಾವಣೆ ಮಾಡುವಂತೆ ಆರ್ಥಿಕ ಸಚಿವಾಲಯ ಕೇಳಿದೆ.

ಈ ಹೆಚ್ಚುವರಿ ನಿಧಿಯನ್ನು ಆರ್ ಬಿಐ ಹಾಗೂ ಕೇಂದ್ರ ಸರಕಾರ ಎರಡೂ ಸೇರಿ ನಿರ್ವಹಿಸಬಹುದು ಎಂದು ಸಚಿವಾಲಯ ಹೇಳಿದೆ. ಬಂಡವಾಳ ಅಗತ್ಯ ಹಾಗೂ ಮೀಸಲು ನಿಧಿ ಬಗ್ಗೆ ಸದ್ಯಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಸರಿಸುತ್ತಾ ಬಂದಿರುವ ಲೆಕ್ಕಾಚಾರ 'ಸಾಂಪ್ರದಾಯಿಕ'ವಾದದ್ದು ಎಂದು ಸರಕಾರ ಹೇಳಿದೆ.

ಹಿಂದೆಂದೂ ಬಳಸದ ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಈಗಿನ ಸರಕಾರಕ್ಕೆ ಏಕೆ?ಹಿಂದೆಂದೂ ಬಳಸದ ಆರ್ ಬಿಐ ಕಾಯ್ದೆಯ ಸೆಕ್ಷನ್ 7 ಈಗಿನ ಸರಕಾರಕ್ಕೆ ಏಕೆ?

ಮೂಲಗಳ ಪ್ರಕಾರ, ಸರಕಾರದ ಪ್ರಯತ್ನದಿಂದ ಆರ್ ಬಿಐ ಮೀಸಲು ನಿಧಿ ಸಂಗ್ರಹದಲ್ಲಿ ಇಳಿಕೆಯಾದರೆ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗುತ್ತದೆ. ಆ ಕಾರಣದಿಂದಲೇ ಆರ್ ಬಿಐನಿಂದ ಪ್ರಸ್ತಾವವನ್ನು ತಿರಸ್ಕರಿಸಲಾಗಿತ್ತು. ಆದರೆ ಆರ್ಥಿಕ ಸಚಿವಾಲಯ ಹೇಳುವುದೇ ಬೇರೆ.

ದೀಪಾವಳಿ ವಿಶೇಷ ಪುರವಣಿ

ಸದ್ಯಕ್ಕೆ ಚಾಲ್ತಿಯಲ್ಲಿರುವ ಕ್ರಮವನ್ನು 2017ರ ಜುಲೈನಲ್ಲಿ ಆರ್ ಬಿಐ ಏಕಪಕ್ಷೀಯವಾಗಿ ಅಳವಡಿಸಿಕೊಂಡಿತ್ತು. ಏಕೆಂದರೆ ಬ್ಯಾಂಕ್ ಮಂಡಳಿಯಲ್ಲಿರುವ ಸರಕಾರದ ಇಬ್ಬರೂ ನಾಮ ನಿರ್ದೇಶಿತರು ಅಂದು ಸಭೆಯಲ್ಲಿ ಹಾಜರಿರಲಿಲ್ಲ. ಈ ಹೊಸ ನಿಯಮಕ್ಕೆ ಸರಕಾರ ಒಪ್ಪಿರಲಿಲ್ಲ. ಆಗಿನಿಂದಲೂ ಈ ಬಗ್ಗೆ ಚರ್ಚೆ ನಡೆಸಲು ಆರ್ ಬಿಐ ಅನ್ನು ಕೇಳಲಾಗುತ್ತಿತ್ತು.

3.6 ಲಕ್ಷ ಕೋಟಿ ರುಪಾಯಿ ಹೆಚ್ಚುವರಿಯಾಗಿ ಅಂದಾಜು

3.6 ಲಕ್ಷ ಕೋಟಿ ರುಪಾಯಿ ಹೆಚ್ಚುವರಿಯಾಗಿ ಅಂದಾಜು

ಸರಕಾರದ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬಂಡವಾಳ ಮೀಸಲು ನಿಧಿ ಅಂದಾಜನ್ನು 3.6 ಲಕ್ಷ ಕೋಟಿ ರುಪಾಯಿ ಹೆಚ್ಚುವರಿಯಾಗಿ ಅಂದಾಜು ಮಾಡಿದೆ. ಆದ್ದರಿಂದಲೇ ಈ ಹಣವನ್ನು ಹೇಗೆ ವಿನಿಯೋಗ ಮಾಡಬೇಕು ಎಂಬ ಬಗ್ಗೆ ಸರಕಾರದ ಜತೆ ಆರ್ ಬಿಐ ಚರ್ಚಿಸಬೇಕು ಎನ್ನುತ್ತಿದೆ. ಉದಾಹರಣೆಗೆ ಈ ಮೀಸಲು ನಿಧಿಯಿಂದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ ಮರುಬಂಡವಾಳ ಪೂರೈಕೆ ಮಾಡಬಹುದಾಗಿದೆ.

ಇದೇ ವಿಚಾರವಾಗಿ ಭಿನ್ನಾಭಿಪ್ರಾಯ ತಲೆದೋರಿತ್ತು

ಇದೇ ವಿಚಾರವಾಗಿ ಭಿನ್ನಾಭಿಪ್ರಾಯ ತಲೆದೋರಿತ್ತು

ವರ್ಷದ ಹಿಂದೆ ಸರಕಾರ ಮತ್ತೊಂದು ಪ್ರಸ್ತಾವ ಇಟ್ಟಿತ್ತು. ಆರ್ ಬಿಐಗೆ ಎಷ್ಟು ಬಂಡವಾಳ ಬೇಕಿದೆ ಎಂಬ ಅಂದಾಜು ಮಾಡಿ, ಉಳಿದದ್ದು ಸರಕಾರಕ್ಕೆ ವರ್ಗಾವಣೆ ಮಾಡಬೇಕು ಎಂದಿತ್ತು. ಆದರೆ ಹೀಗೆ ಮಾಡುವುದರಿಂದ ದೇಶದ ಆರ್ಥಿಕ ಸ್ಥಿತಿಗೆ ಮಾರಕ ಎಂಬ ಅಭಿಮತ ಕೇಂದ್ರ ಬ್ಯಾಂಕ್ ದು. ಇದೇ ವಿಚಾರವಾಗಿ ಭಿನ್ನಾಭಿಪ್ರಾಯ ತಲೆದೋರಿತ್ತು.

ಆರ್ ಬಿಐ ಮೇಲೆ ಬೆಂಕಿಯುಗುಳಿದ ಆರೆಸ್ಸೆಸ್ ಸಹವರ್ತಿ ಸಂಸ್ಥೆ ಆರ್ ಬಿಐ ಮೇಲೆ ಬೆಂಕಿಯುಗುಳಿದ ಆರೆಸ್ಸೆಸ್ ಸಹವರ್ತಿ ಸಂಸ್ಥೆ

ಒಟ್ಟಾರೆ ಆಸ್ತಿಗಿಂತ ಹೆಚ್ಚಿನ ಪ್ರಮಾಣದ ಬಂಡವಾಳ ಹೊಂದಿದೆ

ಒಟ್ಟಾರೆ ಆಸ್ತಿಗಿಂತ ಹೆಚ್ಚಿನ ಪ್ರಮಾಣದ ಬಂಡವಾಳ ಹೊಂದಿದೆ

ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪ್ರಕಾರ, ಜಾಗತಿಕ ಮಟ್ಟದ ವಿವಿಧ ದೇಶಗಳ ಕೇಂದ್ರ ಬ್ಯಾಂಕ್ ಗಳಿಗೆ ಹೋಲಿಸಿದರೆ, ಆರ್ ಬಿಐ ತನ್ನ ಒಟ್ಟಾರೆ ಆಸ್ತಿಗಿಂತ ಹೆಚ್ಚಿನ ಪ್ರಮಾಣದ ಬಂಡವಾಳ ಹೊಂದಿದೆ. ಅಮೆರಿಕ, ಯುನೈಟೆಡ್ ಕಿಂಗ್ ಡಮ್, ಅರ್ಜೆಂಟಿನಾ, ಫ್ರಾನ್ಸ್, ಸಿಂಗಾಪೂರ್ ನ ಕೇಂದ್ರೀಯ ಬ್ಯಾಂಕ್ ಗಳು ಅವುಗಳ ಒಟ್ಟಾರೆ ಆಸ್ತಿಗಿಂತ ಕಡಿಮೆ ಪ್ರಮಾಣದ ಬಂಡವಾಳ ಹೊಂದಿವೆ. ಮಲೇಷ್ಯಾ, ನಾರ್ವೆ ಹಾಗೂ ರಷ್ಯಾ ದೇಶ ಭಾರತಕ್ಕಿಂತ ಹೆಚ್ಚು ಹೊಂದಿವೆ.

ಯಾವ ಉದ್ದೇಶಗಳಿಗೆ ಬಂಡವಾಳ ಮೀಸಲು ನಿಧಿ?

ಯಾವ ಉದ್ದೇಶಗಳಿಗೆ ಬಂಡವಾಳ ಮೀಸಲು ನಿಧಿ?

ಮಾರುಕಟ್ಟೆ ಅಪಾಯ, ಕಾರ್ಯಚಟುವಟಿಕೆ ಅಪಾಯ, ಸಾಲದ ಅಪಾಯ ಹಾಗೂ ಅನಿರೀಕ್ಷಿತ ಅಪಾಯದಂಥದ್ದನ್ನು ಎದುರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಮೀಸಲು ನಿಧಿಗಳನ್ನು ಹೊಂದಿದೆ. 2018ರ ಜೂನ್ ಕೊನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ 9.59 ಲಕ್ಷ ಕೋಟಿ ಮೀಸಲು ನಿಧಿ ಇದೆ. ಅದರಲ್ಲಿ ನೋಟುಗಳು ಹಾಗೂ ಚಿನ್ನದ ಮರುಮೌಲ್ಯಮಾಪನ (6.91 ಲಕ್ಷ ಕೋಟಿ) ಹಾಗೂ ಅನಿರೀಕ್ಷಿತ ಖರ್ಚುಗಳಿಗಾಗಿ ಮೀಸಲಾದ ನಿಧಿ (2.32 ಲಕ್ಷ ಕೋಟಿ) ಒಳಗೊಂಡಿದೆ.

ಊರ್ಜಿತ್ ಪಟೇಲ್ ರಾಜೀನಾಮೆ ಆಗ್ರಹಿಸುವುದಿಲ್ಲ ಎಂದ ಕೇಂದ್ರ ಊರ್ಜಿತ್ ಪಟೇಲ್ ರಾಜೀನಾಮೆ ಆಗ್ರಹಿಸುವುದಿಲ್ಲ ಎಂದ ಕೇಂದ್ರ

English summary
At the heart of the RBI-government standoff is a proposal by the Finance Ministry seeking to transfer a surplus of Rs 3.6 lakh crore, more than a third of the total Rs 9.59 lakh crore reserves of the central bank, to the government. The ministry has suggested that this surplus can be managed jointly by the RBI and the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X