• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಪೂರ್ಣ ಖಾಸಗೀಕರಣದತ್ತ ಬೆಂಗಳೂರು ವಿಮಾನ ನಿಲ್ದಾಣ: ಷೇರು ಮಾರಾಟಕ್ಕೆ ಮುಂದಾದ ಕೇಂದ್ರ

|
Google Oneindia Kannada News

ನವದೆಹಲಿ, ಮಾರ್ಚ್ 15: ಈಗಾಗಲೇ ವಿವಿಧ ವಿಮಾನ ನಿಲ್ದಾಣಗಳಲ್ಲಿನ ತನ್ನ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸಂಪೂರ್ಣ ಖಾಸಗೀಕರಣಗೊಳಿಸಿರುವ ಕೇಂದ್ರ ಸರ್ಕಾರ, ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿನ ತನ್ನ ಷೇರುಗಳನ್ನು ಕೂಡ ಮಾರಾಟ ಮಾಡಿ, ಅವುಗಳನ್ನು ಸಹ ಸಂಪೂರ್ಣವಾಗಿ ಖಾಸಗಿ ತೆಕ್ಕೆಗೆ ಹಾಕಲು ನಿರ್ಧರಿಸಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಡಿಯಲ್ಲಿನ ಬಾಕಿ ಷೇರುಗಳನ್ನು ಮಾರುವ ಮೂಲಕ ಹೆಚ್ಚುವರಿ ಸಂಪನ್ಮೂಲದ ಕ್ರೋಡೀಕರಣಕ್ಕಾಗಿ 2.5 ಲಕ್ಷ ಕೋಟಿ ಸಂಗ್ರಹದ ಗುರಿ ಈಡೇರಿಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಮುಂಬೈ ವಿಮಾನ ನಿಲ್ದಾಣದ ಶೇ 74ರಷ್ಟು ಶೇರು ಅದಾನಿ ಸಮೂಹದ ಪಾಲಿಗೆಮುಂಬೈ ವಿಮಾನ ನಿಲ್ದಾಣದ ಶೇ 74ರಷ್ಟು ಶೇರು ಅದಾನಿ ಸಮೂಹದ ಪಾಲಿಗೆ

ನಾಲ್ಕು ವಿಮಾನ ನಿಲ್ದಾಣಗಳ ಷೇರು ಮಾರಾಟದ ಜತೆಗೆ, 2021-22ನೇ ಹಣಕಾಸು ಸಾಲಿನಲ್ಲಿ 13 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಕ್ಕಾಗಿ ಗುರುತಿಸಲಾಗಿದೆ. ಖಾಸಗೀಕರಣದ ಮೊದಲ ಸುತ್ತಿನಲ್ಲಿ ಲಕ್ನೋ, ಅಹ್ಮದಾಬಾದ್, ಮಂಗಳೂರು, ಜೈಪುರ, ತಿರುವನಂತಪುರಂ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳನ್ನು ಕಳೆದ ವರ್ಷ ಖಾಸಗಿ ಕಂಪೆನಿ ತೆಕ್ಕೆಗೆ ಒಪ್ಪಿಸಲಾಗಿತ್ತು. ಈ ಆರೂ ವಿಮಾನ ನಿಲ್ದಾಣಗಳ ನಿರ್ವಹಣೆ ಗುತ್ತಿಗೆಯನ್ನು ಅದಾನಿ ಸಮೂಹ ಪಡೆದುಕೊಂಡಿತ್ತು.

ಸಚಿವ ಸಂಪುಟ ಅನುಮೋದನೆ

ಸಚಿವ ಸಂಪುಟ ಅನುಮೋದನೆ

ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಜಂಟಿ ನಿರ್ವಹಣೆಯಲ್ಲಿನ ತನ್ನ ಷೇರು ಪಾಲನ್ನು ಹಿಂದಕ್ಕೆ ತೆಗೆದುಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ಪಡೆದುಕೊಳ್ಳಲಿದೆ. ಮುಂದಿನ ಕೆಲವು ದಿನಗಳಲ್ಲಿ ಇದಕ್ಕೆ ಸಚಿವ ಸಂಪುಟ ಅನುಮೋದನೆ ದೊರಕುವ ಸಾಧ್ಯತೆ ಇದೆ.

13 ವಿಮಾನ ನಿಲ್ದಾಣಗಳು

13 ವಿಮಾನ ನಿಲ್ದಾಣಗಳು

ಖಾಸಗೀಕರಣಕ್ಕೆ ಗುರುತಿಸಲಾಗಿರುವ 13 ವಿಮಾನ ನಿಲ್ದಾಣಗಳಲ್ಲಿ ಲಾಭದಾಯಕ ಮತ್ತು ಲಾಭದಾಯಕವಲ್ಲದ ವಿಮಾನ ನಿಲ್ದಾಣಗಳನ್ನು ವಿಲೀನಗೊಳಿಸುವ ಸಾಧ್ಯತೆ ಇದ್ದು, ಈ ಮೂಲಕ ಹೆಚ್ಚಿನ ಆಕರ್ಷಕ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ.

ವಿಮಾನ ನಿಲ್ದಾಣಗಳ ಬಿಡ್‌ನಲ್ಲಿ ಅಕ್ರಮ: ಅದಾನಿ ವಿರುದ್ಧ ಸಂಸದನ ಆರೋಪವಿಮಾನ ನಿಲ್ದಾಣಗಳ ಬಿಡ್‌ನಲ್ಲಿ ಅಕ್ರಮ: ಅದಾನಿ ವಿರುದ್ಧ ಸಂಸದನ ಆರೋಪ

ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು

ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು

ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿರುವ ಎಎಐ, ದೇಶಾದ್ಯಂತ 100ಕ್ಕೂ ಅಧಿಕ ವಿಮಾನ ನಿಲ್ದಾಣಗಳ ಮಾಲೀಕತ್ವ ಮತ್ತು ನಿರ್ವಹಣೆ ಕಾರ್ಯ ನಡೆಸುತ್ತಿದೆ. ಈಗ ಅವುಗಳಲ್ಲಿ ಅನೇಕ ಪ್ರಮುಖ ವಿಮಾನ ನಿಲ್ದಾಣಗಳು ಸಂಪೂರ್ಣವಾಗಿ ಖಾಸಗೀಕರಣಗೊಳ್ಳುತ್ತಿವೆ.

ಸರ್ಕಾರ-ಅದಾನಿ ಪಾಲು

ಸರ್ಕಾರ-ಅದಾನಿ ಪಾಲು

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಸಮೂಹ ಶೇ 74ರಷ್ಟು ಷೇರುಗಳನ್ನು ಹೊಂದಿದ್ದರೆ, ಎಎಐ ಶೇ 26ರಷ್ಟು ಷೇರುಗಳನ್ನು ಹೊಂದಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಜಿಎಂಆರ್ ಸಮೂಹ ಶೇ 54ರಷ್ಟು, ಎಎಐ ಶೇ 26 ಹಾಗೂ ಫ್ರಾಪೋರ್ಟ್ ಎಜಿ ಮತ್ತು ಎರಾಮನ್ ಮಲೇಷ್ಯಾ ತಲಾ ಶೇ 10ರಷ್ಟು ಷೇರುಗಳನ್ನು ಹೊಂದಿದೆ.

  ಕೇವಲ 24 ಗಂಟೆಗೆ ಎಷ್ಟ್ ಕೇಸ್ ದಾಖಲಾಗಿದೆ ಗೊತ್ತಾ ? | Oneindia Kannada
  ಬೆಂಗಳೂರು ವಿಮಾನ ನಿಲ್ದಾಣ

  ಬೆಂಗಳೂರು ವಿಮಾನ ನಿಲ್ದಾಣ

  ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಎಐ ಮತ್ತು ರಾಜ್ಯ ಸರ್ಕಾರಗಳು ಶೇ 26ರಷ್ಟು ಷೇರುಗಳನ್ನು ಹೊಂದಿವೆ. ಹೈದರಾಬಾದ್‌ನಲ್ಲಿ ಸಹ ಎಎಐ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಸಹ ಶೇ 26ರಷ್ಟು ಷೇರುಗಳನ್ನು ಹೊಂದಿವೆ.

  ಮುಂದಿನ ಹಣಕಾಸು ವರ್ಷ ಆರಂಭವಾಗುವ ಏಪ್ರಿಲ್ 1ರಿಂದ 1.75 ಲಕ್ಷ ಕೋಟಿ ರೂ ಹೂಡಿಕೆ ಹಿಂತೆಗೆತ ಮಾಡಲು ಸರ್ಕಾರ ಗುರಿ ಹೊಂದಿದೆ.

  English summary
  Centre has decided to sell its remaining stake in Bengaluru, Mumbai, Hyderabad and Delhi airports as part of its amitious Rs 2.5 lakh crore asset monetisation pipeline.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X