ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

69 ತೈಲ ನಿಕ್ಷೇಪಗಳ ಹರಾಜಿಗೆ ಕೇಂದ್ರದ ಒಪ್ಪಿಗೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್. 03: ಆದಾಯ ಸಂಗ್ರಹಣೆ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಹಾಗೂ ಆಯಿಲ್‌ ಇಂಡಿಯಾ ಕಂಪನಿಗಳ ವಶದಲ್ಲಿರುವ 69 ನಿಷ್ಕ್ರಿಯ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಖಾಸಗಿ ಕಂಪನಿಗಳಿಗೆ ಹರಾಜು ಹಾಕಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಮುಂದಿನ ಮೂರು ತಿಂಗಳಲ್ಲಿ ಹರಾಜು ಪ್ರಕ್ರಿಯೆಗೆ ಸ್ಪಷ್ಟ ರೂಪು ರೇಷೆ ನೀಡಲಾಗುವುದು. 89 ದಶಲಕ್ಷ ಟನ್‌ನಷ್ಟು ತೈಲ ಹಾಗೂ ಅನಿಲ ಸಂಪನ್ಮೂಲವನ್ನು ಈ 69 ನಿಕ್ಷೇಪಗಳು ಹೊಂದಿದ್ದು, ಒಟ್ಟು 70 ಸಾವಿರ ಕೋಟಿ ರು. ಮೌಲ್ಯ ಹೊಂದಿದ್ದು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಆದಾಯ ತಂದುಮ ಕೊಡಲಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.[ಸಬ್ಸಿಡಿ ರಹಿತ ಸಿಲಿಂಡರ್ 25 ರುಪಾಯಿ ಇಳಿಕೆ]

Govt to auction 69 oil & gas fields of ONGC, Oil India

ಇಲ್ಲಿಯವೆಗೆ ಉತ್ಪಾದನೆ ಹಂಚಿಕೆ ಗುತ್ತಿಗೆ (ಪಿಎಸ್‌ಸಿ) ಮಾದರಿಯಡಿ ತೈಲ ನಿಕ್ಷೇಪಗಳನ್ನು ಹರಾಜು ಮಾಡಲಾಗುತ್ತಿತ್ತು. ಹರಾಜು ಪಡೆದುಕೊಂಡ ಕಂಪನಿ ಹಣ ಹಿಂದಕ್ಕೆ ಪಡೆಯುವವರೆಗೆ ಸರ್ಕಾರಕ್ಕೆ ಯಾವುದೇ ಲಾಭ ಸಿಗುತ್ತಿರಲಿಲ್ಲ. ಆದರೆ ಹೊಸ ನೊಯಮಕ್ಕೆ ಅಮನುಗುಣವಾಗಿ ನಡೆದುಕೊಂಡರೆ ಸರ್ಕಾರಕ್ಕೆ ನಿರಂತರವಾಗಿ ಆದಾಯ ಬರುತ್ತಲಿರುತ್ತದೆ.

ಸರ್ಕಾರಿ ಸ್ವಾಮ್ಯದ ಒಎನ್ ಜಿಸಿ ತನ್ನ ಬಳಿ ಇದ್ದ ಆರು ಚಿಕ್ಕ ನಿಕ್ಷೇಪಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಇದೇ ರೀತಿ ಒಟ್ಟು 69 ಘಟಕಗಳನ್ನು ಹರಾಜಿಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ತೀರ್ಮಾನ ತೆಗೆದುಕೊಂಡಿದೆ.[ಆನ್ ಲೈನ್ ನಲ್ಲೇ ಹೊಸ ಗ್ಯಾಸ್ ಸಂಪರ್ಕ ಪಡೆಯಿರಿ]

ವಾತಾವರಣ, ಗಾತ್ರ, ಪ್ರದೇಶ, ಕಾರ್ಮಿಕರ ಸಮಸ್ಯೆ ಮುಂತಾದ ಕಾರಣಗಳಿಂದ ಈ ಘಟಕಗಳು ಕೆಲಸ ನಿಲ್ಲಿಸಿದ್ದವು. ಆದರೆ ಕೇಂದ್ರ ಸರ್ಕಾರ ಇವುಗಳ ಪುನಶ್ಚೇತನಕ್ಕೆ ಮುಂದಾಗಿದ್ದು ಸರ್ಕಾರದ ಬೊಕ್ಕಸವನ್ನು ತುಂಬಿಸಲಿದೆ.

English summary
Government will auction 69 small and marginal oil and gas fields taken away from state-run ONGC and Oil India to private firms on a new revenue sharing model, offering operators full marketing and pricing freedom. The fields hold 89 million tonne of oil and gas resources which are worth Rs 70,000 crore at current prices. The 69 fields will be clubbed into clusters and offered for bidding within 3 months, Oil Minister Dharmendra Pradhan said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X