ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಪೇಮೆಂಟ್ ಮೇಲೆ ಶೇ. 2ರಷ್ಟು ಜಿಎಸ್ ಟಿ ರಿಯಾಯಿತಿ ?

ರುಪಾಯಿ 2000 ವರೆಗಿನ ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ಜಿಎಸ್ ಟಿ ಕಡಿತಗೊಳಿಸಲು ಕೇಂದ್ರ ಸರ್ಕಾರದ ಚಿಂತನೆ. ಕ್ಯಾಶ್ ಲೆಸ್ ಸೊಸೈಟಿಯ ಪರಿಕಲ್ಪನೆಗೆ ಮತ್ತಷ್ಟು ಇಂಬು ಕೊಡಲು ಆಲೋಚನೆ.

|
Google Oneindia Kannada News

ನವದೆಹಲಿ, ಆಗಸ್ಟ್ 31: ನಗದು ರಹಿತ ಸಮಾಜವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ, ರು. 2000ವರೆಗಿನ ಎಲ್ಲಾ ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ರಿಯಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಹೀಗೆ ಶೇ. 2ರವರೆಗೆ ಜಿಎಸ್ ಟಿ ರಿಯಾಯಿತಿ ಸಿಕ್ಕರೆ, ಅಲ್ಪ ಮೊತ್ತದ ವ್ಯವಹಾರ ಮಾಡುವ ಎಲ್ಲಾ ಗ್ರಾಹಕರಿಗೂ ಹೆಚ್ಚೆಚ್ಚು ಅನುಕೂಲಗಳಾಗಲಿವೆ ಎಂದು ಕೇಂದ್ರ ಸರ್ಕಾರ ಆಲೋಚಿಸಿದೆ.

GST:ಮೊದಲ ತಿಂಗಳಲ್ಲಿ ಸರಕಾರಕ್ಕೆ ಬಂದ ಆದಾಯ, ಇಲ್ಲಿದೆ ಬ್ರೇಕ್ ಅಪ್ GST:ಮೊದಲ ತಿಂಗಳಲ್ಲಿ ಸರಕಾರಕ್ಕೆ ಬಂದ ಆದಾಯ, ಇಲ್ಲಿದೆ ಬ್ರೇಕ್ ಅಪ್

ಇತ್ತೀಚೆಗೆ ನಡೆದ ಕೇಂದ್ರ ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಸಂಪುಟ ಕಾರ್ಯದರ್ಶಿಗಳ ಕಚೇರಿ ಹಾಗೂ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಇಂಥದ್ದೊಂದು ಪ್ರಸ್ತಾಪನೆ ಚರ್ಚೆಯಾಗಿದೆ.

ಈ ಬಗ್ಗೆ ಎಲ್ಲಾ ಇಲಾಖಾ ಅಧಿಕಾರಿಗಳು ಮೌಖಿಕವಾಗಿ ತಮ್ಮ ಸಮ್ಮತಿ ಸೂಚಿಸಿದ್ದರೂ, ಇದರ ಸಾಧಕ ಬಾಧಕಗಳನ್ನು ಮತ್ತಷ್ಟು ಕೂಲಂಕಷವಾಗಿ ಚರ್ಚಿಸಿ ಆ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ.

ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ? ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?

ಹೀಗೆ, ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ಜಿಎಸ್ ಟಿ ಕಡಿತಗೊಳಿಸುವುದರಿಂದ ಆಗುವ ಲಾಭಗಳೇನು, ಭಾರತ ಸರ್ಕಾರದ ವ್ಯವಹಾರಗಳ ಮೇಲೆ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಕ್ಯಾಶ್ ಲೆಸ್ ಸೊಸೈಟಿ ಪರಿಕಲ್ಪನೆಗೆ ಇಂಬು

ಕ್ಯಾಶ್ ಲೆಸ್ ಸೊಸೈಟಿ ಪರಿಕಲ್ಪನೆಗೆ ಇಂಬು

ಅಲ್ಪ ಮೊತ್ತದವರೆಗಿನ ಡಿಜಿಟಲ್ ಪೇಮೆಂಟ್ ಗಳ ಮೇಲೆ ಶೇ. 2ರಷ್ಟು ಜಿಎಸ್ ಟಿ ಕಡಿತ ಅವಕಾಶ ಮಾಡಿಕೊಟ್ಟರೆ ಅದರಿಂದ ಕ್ಯಾಶ್ ಲೆನ್ ಪರಿಕಲ್ಪನೆಗೆ ಮತ್ತಷ್ಟು ಇಂಬು ಸಿಗಲಿದೆ ಎಂಬುದು ಅಧಿಕಾರಿಗಳ ಸಲಹೆಯಾಗಿದೆ.

ಪಾವತಿದಾರರಲ್ಲಿ ಹೆಚ್ಚು ಉತ್ಸಾಹ

ಪಾವತಿದಾರರಲ್ಲಿ ಹೆಚ್ಚು ಉತ್ಸಾಹ

ಶೇ. 2ರವರೆಗಿನ ಕಡಿತದಿಂದಾಗಿ, ಸಣ್ಣ ಪುಟ್ಟ ಹಣ ಪಾವತಿದಾರರು ಹೆಚ್ಚಿನ ಮಟ್ಟದಲ್ಲಿ ಡಿಜಿಟಲ್ ಪೇಮೆಂಟ್ ಮೂಲಕವೇ ವ್ಯವಹರಿಸಲು ಉತ್ಸಾಹ ಬರಲಿದೆ.

ವರ್ತಕರ ನಕಲಿ ವ್ಯವಹಾರಕ್ಕೆ ಬ್ರೇಕ್

ವರ್ತಕರ ನಕಲಿ ವ್ಯವಹಾರಕ್ಕೆ ಬ್ರೇಕ್

ಒಂದು ಟ್ರಾನ್ಸಾಕ್ಷನ್ ನಲ್ಲಿ 2000 ರು.ಗಳ ಒಳಗಿನವರೆಗೆ ವ್ಯಾಪಾರ ಮಾಡುವವ ಸಂಖ್ಯೆ ಅಧಿಕ ಇರುವುದರಿಂದ ಅಂಥವರು ನೈಜ ರೂಪದ ಆರ್ಥಿಕ ವ್ಯವಸ್ಥೆಗೆ ಬರಲು ವಿಪುಲ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಆಗ, ಬಿಲ್ ಇಲ್ಲದ ವ್ಯಾಪಾರದಲ್ಲಿ ಸಿಗುವ ಅನುಕೂಲ ಡಿಜಿಟಲ್ ಪೇಮೆಂಟ್ ನಲ್ಲೂ ಸಿಗುವುದರಿಂದ ಲಕ್ಷಾಂತರ ವರ್ತಕರ ಬಿಲ್ ಇಲ್ಲದ ವ್ಯವಹಾರಕ್ಕೆ ಕಡಿವಾಣ ಬೀಳಲೂ ಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.

ಜನೋಪಯೋಗಿ ಆಲೋಚನೆ ಬಗ್ಗೆ ನಿರ್ಧಾರ

ಜನೋಪಯೋಗಿ ಆಲೋಚನೆ ಬಗ್ಗೆ ನಿರ್ಧಾರ

ಶೇ. 2ರಷ್ಟು ಜಿಎಸ್ ಟಿ ರಿಯಾಯಿತಿ ನೀಡುವುದು ಕೇವಲ ಒಂದು ಪ್ರಸ್ತಾವನೆಯಷ್ಟೆ. ಇಂಥ ಹಲವಾರು ಜನಪಯೋಗಿ ಆಲೋಚನೆಗಳು ಪ್ರಸ್ತಾಪನೆ ಸ್ವರೂಪದಲ್ಲಿದ್ದು ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.

English summary
Making digital payments pays. If the government is serious about its plans to give a 2 percent incentive over the applicable GST tax rate in case of digital payments where the bill is up to Rs 2,000, the move would also help discourage cash payments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X