• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಫ್ ಡಿಐ ಹೂಡಿಕೆ : ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ

By Madhusoodhan
|

ನವದೆಹಲಿ, ಜೂನ್ , 20: ಕೇಂದ್ರ ಸರ್ಕಾರ ನೇರ ವಿದೇಶಿ ಬಂಡವಾಳ ಹೂಡಿಕೆಯಲ್ಲಿ(ಎಫ್ ಡಿಐ) ಮಹತ್ತರ ಬದಲಾವಣೆಗೆ ಆರಂಭ ಹಾಡಿದೆ. ನಾಗರಿಕ ವಿಮಾನಯಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದೆ.

ನಾಗರಿಕ ವಾಯುಯಾನ, ವಿಮಾನ ನಿಲ್ದಾಣಗಳು, ಔಷಧ ತಯಾರಿ ಮತ್ತು ಪಶು ಸಂಗೋಪನೆ, ಸಿಂಗಲ್‌ ಬ್ರಾಂಡ್‌ ರಿಟೇಲ್‌ ಕ್ಷೇತ್ರದಲ್ಲಿನ ನೇರ ವಿದೇಶಿ ಹೂಡಿಕೆ ಮಿತಿ ಏರಿಕೆ ಮಾಡಲಾಗಿದೆ.[ಎಫ್‌ಡಿಐ ಹೂಡಿಕೆ, ಭಾರತಕ್ಕೆ ಸಿಗಲಿದೆ ಲಾಭದ ಹೊದಿಕೆ]

ರಕ್ಷಣಾ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಶೇ.49 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ.100 ಕ್ಕೆ ಏರಿಕೆ ಮಾಡಲಾಗಿದ್ದು ವಿದೇಶಿ ಕಂಪನಿಗಳು ಭಾರತಕ್ಕೆ ರಕ್ಷಣಾ ತಂತ್ರಜ್ಞಾನ ವರ್ಗಾವಣೆ ಮಾಡಲು ಹಾಗೂ ಭಾರತದಲ್ಲಿ ಉದ್ಯಮವನ್ನು ಪ್ರಾರಂಭಿಸಲು ನೆರವಾಗಲಿದೆ. ಕಳೆದ ನವೆಂಬರ್ ನಂತರ ಎಫ್ ಡಿಐ ಗೆ ಸಂಬಂಧಿಸಿ ಮಾಡಿದ ಮಹತ್ತರ ಬದಲಾವಣೆ ಇದಾಗಿದೆ.[ವಿದೇಶಿ ಬಂಡವಾಳ ಪಡೆಯೋದ್ರಲ್ಲಿ ನಾವೇ ನಂ. 1]

ಪರಿಣಾಮ ಏನು?

ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿ ಹೇಳುವುದಾದರೆ ಇದು ಅತ್ಯಂತ ಮಹತ್ವದ ನಿರ್ಧಾರ. ವಿದೇಶಿ ಕಂಪನಿಗಳು ಅದರಲ್ಲೂ ಆಪಲ್ ನಂತಹ ಬೃಹತ್ ಕಂಪನಿ ಭಾರತದಲ್ಲಿ ಹೂಡಿಕೆಗೆ ಮುಂದಾದರೂ ಆಶ್ಚರ್ಯವಿಲ್ಲ.[ಮೋದಿ ಮೇಲೆ ಅಡ್ವಾಣಿ ವಾರೆನೋಟ!]

ರಕ್ಷಣಾ ಕ್ಷೇತ್ರ ಮತ್ತಷ್ಟು ಶಕ್ತಿಶಾಲಿಯಾಗಲಿದ್ದು ಅನೇಕ ಅಡ್ಡಿ ಆತಂಕಗಳ ನಡುವೆಯೂ ಕೇಂದ್ರ ಸರ್ಕಾರ ಎಫ್ ಡಿಐ ಹೂಡಿಕೆಗೆ ಅವಕಾಶ ನೀಡಿ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

English summary
Government on Monday,June 20 relaxed Foreign Direct Investment (FDI) norms in a host of sectors including civil aviation, single-brand retail, defence and pharma by permitting more investments under automatic route. Other sectors in which FDI norms have been relaxed include e-commerce in food products, broadcasting carriage services, private security agencies and animal husbandry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more