ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಹೂಡಿಕೆ ಮೇಲಿನ ನಿರ್ಬಂಧ ತೆರವುಗೊಳಿಸಲು ಸಮಿತಿ ಶಿಫಾರಸು

|
Google Oneindia Kannada News

ನವದೆಹಲಿ, ನವೆಂಬರ್ 13: ಆರ್ಥಿಕತೆಯ ಪುನಶ್ಚೇತನಕ್ಕೆ ಚೀನಾ ಹೂಡಿಕೆಯ ಮೇಲಿನ ನಿರ್ಬಂಧಗಳನ್ನು ಶೇ 15ರವರೆಗೂ ತೆರವುಗೊಳಿಸುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ಎಂಟು ಸದಸ್ಯರ ಸಚಿವರ ಸಮಿತಿ ಶಿಫಾರಸು ಮಾಡಿದೆ. ಭೂರಾಜಕೀಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಮತೋಲನ ಕಾಪಾಡುವುದರ ಜತೆಗೆ ಹೂಡಿಕೆಯ ಅವಕಾಶವನ್ನು ನೀಡಬೇಕು ಎಂದು ಅದು ಹೇಳಿದೆ.

ಹಾಗೆಯೇ, ಚೀನಾ ಮೂಲದ ಮಾಲೀಕತ್ವದಲ್ಲಿ ಶೇ 50ಕ್ಕಿಂತ ಕಡಿಮೆ ಇರುವ ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಕೂಡ ಪೂರ್ವಾನುಮತಿ ನಿರ್ಬಂಧಗಳಲ್ಲಿ ವಿನಾಯಿತಿ ನೀಡಬಹುದಾಗಿದೆ ಎಂದು ಕೂಡ ಸಮಿತಿ ಹೇಳಿದೆ.

ಸಾಮಾಜಿಕ ನ್ಯಾಯ ಸಚಿವ ಥಾವರ್ ಚಾಂದ್ ಗೆಹ್ಲೋಟ್ ನೇತೃತ್ವದ ಸಚಿವರ ಸಮೂಹದ ಸಮಿತಿಯು ಭಾರತೀಯ ಕಂಪೆನಿಗಳ ಅವಕಾಶವಾದಿ ಸ್ವಾಧೀನ ಅಥವಾ ಅತಿಕ್ರಮಣದ ಸಂಗತಿಗಳನ್ನು ಗಮನಿಸಲು ಪ್ರೆಸ್ ನೋಟ್ 3ರಲ್ಲಿ ಸ್ಪಷ್ಟನೆ ಮತ್ತು ಬದಲಾವಣೆಗಳನ್ನು ಕೇಳಿದೆ. ಏಪ್ರಿಲ್ ತಿಂಗಳಲ್ಲಿ ಲಡಾಖ್‌ನಲ್ಲಿ ಭಾರತ-ಚೀನಾ ಸೇನಾ ಬಿಕ್ಕಟ್ಟು ಶುರುವಾದ ಬಳಿಕ ಕೋವಿಡ್ 19 ಸೋಂಕನ್ನು ಪರಿಗಣಿಸಿ ಪ್ರೆಸ್ ನೋಟ್ 3 ಹೊರಡಿಸಲಾಗಿತ್ತು.

Govt Panel Recommends To Remove Curbs On Chinese Funding Up To 15 Percent

ಭಾರತೀಯ ಕಂಪೆನಿಗಳಲ್ಲಿ ಶೇ 15ಕ್ಕಿಂತ ಕಡಿಮೆ ಇರುವ ಚೀನಾ ಹೂಡಿಕೆ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವುದು, ಶೇ 50ಕ್ಕಿಂತ ಕಡಿಮೆ ಚೀನಾ ಮಾಲೀಕತ್ವದ ಪ್ರಯೋಜನವಿರುವ ಅಂತಾರಾಷ್ಟ್ರೀಯ ಹೂಡಿಕೆದಾರರ ಪೂರ್ವಾನುಮತಿ ಅಗತ್ಯವನ್ನು ತೆಗೆದುಹಾಕುವುದು ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ನಿಯಂತ್ರಣ ಅಥವಾ ಪ್ರಮುಖ ಮಾಲೀಕತ್ವವಲ್ಲದೆ ಇರುವ ತೈವಾನ್ ಹಾಗೂ ಹಾಂಕಾಂಗ್ ಕಂಪೆನಿಗಳ ಹೂಡಿಕೆಗೆ ವಿನಾಯಿತಿ ನೀಡುವುದನ್ನು ಈ ಸಮಿತಿ ಶಿಫಾರಸು ಮಾಡಿದೆ.

English summary
GoM on employment generation has recommended that government could consider curbing restrictions on Chinese investment up to 15%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X