ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಶೇ. 100ರಷ್ಟು ಎಫ್‌ಡಿಐಗೆ ಅನುಮತಿ ನೀಡಲು ಚಿಂತನೆ

|
Google Oneindia Kannada News

ನವದೆಹಲಿ, ಜುಲೈ 20: ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಶೇಕಡಾ 100ರಷ್ಟು ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಪೂರ್ಣಗೊಂಡ ಗೃಹ ನಿರ್ಮಾಣ ಯೋಜನೆಗಳಲ್ಲಿ ಮಾತ್ರ ಹೂಡಿಕೆಗೆ ಅನುಮತಿ ನೀಡಲು ಯೋಚಿಸಲಾಗಿದೆ.

ಪೂರ್ಣಗೊಂಡ ಯೋಜನೆಗಳಲ್ಲಿ ಶೇ. 100 ರಷ್ಟು ಎಫ್‌ಡಿಐಗೆ ಅವಕಾಶ ನೀಡಬಹುದೇ ಎಂದು ನೋಡಲುಭಾರತ ತನ್ನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯನ್ನು ಪರಿಶೀಲಿಸುತ್ತಿದೆ. ಇದನ್ನು ಕಾರ್ಯಗತಗೊಳಿಸಿದರೆ, ಕೋವಿಡ್ -19 ಸಾಂಕ್ರಾಮಿಕದಿಂದ ಉಲ್ಬಣಗೊಳ್ಳುತ್ತಿರುವ ದ್ರವ್ಯತೆ ಬಿಕ್ಕಟ್ಟಿನ ಮಧ್ಯೆ ಪೂರ್ಣಗೊಂಡ ಯೋಜನೆಗಳನ್ನು ಹಣಗಳಿಸಲು ರಿಯಲ್ ಎಸ್ಟೇಟ್ ಕಂಪನಿಗಳಿಗೆ ಇದು ಅವಕಾಶ ನೀಡುತ್ತದೆ. ಇದರಿಂದಾಗಿ ಆರ್ಥಿಕವಾಗಿ ನಿರ್ಣಾಯಕ ವಲಯವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ.

ವಿದೇಶಿ ಬಂಡವಾಳ ಆಕರ್ಷಿಸುವ ರಾಷ್ಟ್ರಗಳಲ್ಲಿ ಭಾರತಕ್ಕೆ 9ನೇ ಸ್ಥಾನವಿದೇಶಿ ಬಂಡವಾಳ ಆಕರ್ಷಿಸುವ ರಾಷ್ಟ್ರಗಳಲ್ಲಿ ಭಾರತಕ್ಕೆ 9ನೇ ಸ್ಥಾನ

ಕೈಗಾರಿಗೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಈ ಮೂಲಕ ನಿರ್ಮಾಣ ಕ್ಷೇತ್ರದತ್ತ ಹೆಚ್ಚಿನ ವಿದೇಶಿ ಹೂಡಿಕೆಯನ್ನು ಸೆಳೆಯುವುದು ಸರಕಾರ ಉದ್ದೇಶವಾಗಿದೆ. ಕೆಲವೇ ವಲಯಗಳಲ್ಲಿ ಮಾತ್ರ ಎಫ್‌ಡಿಐ ನಿಯಮಗಳನ್ನು ಸಡಿಲಗೊಳಿಸಬಹುದಾಗಿದೆ. ಗೃಹ ನಿರ್ಮಾಣ ಕೂಡ ಅವುಗಳಲ್ಲಿ ಒಂದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Govt May Allow 100% FDI In Completed Housing Projects

ಇದರ ಜೊತೆಗೆ ಗಣಿಗಾರಿಕೆ ಮತ್ತು ಇತರ ವಲಯಗಳಲ್ಲಿಯೂ ನೇರ ಹೂಡಿಕೆಗೆ ಅವಕಾಶ ಸಿಗುವಂತೆ ಮಾಡುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.

English summary
India Is reviewing its FDI policy for the real estate sector to see if 100% overseas investment can be allowed in completed projects .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X