ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ.. 2 ಮತ್ತು 4 ನೇ ಶನಿವಾರ ಬ್ಯಾಂಕ್ ಬಾಗಿಲು ತೆರೆಯಲ್ಲ

|
Google Oneindia Kannada News

ನವದೆಹಲಿ, ಆಗಸ್ಟ್.21: ಕೇಂದ್ರ ಸರ್ಕಾರ ಬ್ಯಾಂಕ್ ಸಿಬ್ಬಂದಿ ಬೇಡಿಕೆಗೆ ಸ್ಪಂದಿಸಿದೆ. ತಿಂಗಳ 2 ಮತ್ತು 4 ನೇ ಶನಿವಾರವನ್ನು ಸಂಪೂರ್ಣ ರಜಾ ದಿನವನ್ನಾಗಿ ಘೋಷಿಸಲು ಒಪ್ಪಿಗೆ ನೀಡಿದೆ.

ಸಪ್ಟೆಂಬರ್ ತಿಂಗಳಿನಿಂದ ಹೊಸ ಕ್ರಮ ಜಾರಿಯಾಗಲಿದೆ. ತಿಂಗಳ 2 ಮತ್ತು 4ನೇ ಶನಿವಾರ ರಜೆ ನೀಡಬೇಕು ಎಂದು ಬ್ಯಾಂಕ್ ನೌಕರರ ಒಕ್ಕೂಟ ಹಲವಾರು ಬಾರಿ ಪ್ರತಿಭಟನೆ ನಡೆಸಿತ್ತು.

Govt gives in to bankers' demands; declare 2nd and 4th Saturdays as holiday

ಇದೊಂದು ಸ್ವಾಗರತಾರ್ಹ ಬೆಳವಣಿಗೆ. ನಾವು ಅಸೋಸಿಯೇಷನ್ ಕ್ರಮವನ್ನು ಸ್ವಾಗತ ಮಾಡುತ್ತೇವೆ ಎಂದು ಎಐಬಿಇಎ ಕಾರ್ಯದರ್ಶಿ ವೆಂಕಟಾಚಲಮ್ ಹೇಳಿದ್ದಾರೆ.

ಇಲ್ಲಿಯವರೆಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಶನಿವಾರ ಅರ್ಧ ದಿನ ಕೆಲಸ ಮಾಡುತ್ತಿದ್ದವು. ಒಂದು ವೇಳೆ ತಿಂಗಳಲ್ಲಿ ಐದು ಶನಿವಾರ ಬಂದರೆ ಎರಡು ಮತ್ತು ನಾಲ್ಕನೇ ಶನಿವಾರ ಮಾತ್ರ ರಜಾ ದಿನಗಳಾಗಿರುತ್ತವೆ.

ಫೆಬ್ರವರಿಯಲ್ಲಿ ನೌಕರರು ನಡೆಸಿದ ಪ್ರತಿಭಟನೆಯ ಕೆಲ ಅಂಶಗಳನ್ನು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಒಪ್ಪಿಕೊಂಡಿತ್ತು. ಆದರೆ ಉಳಿದ ಶನಿವಾರಗಳಂದು ಇಡಿ ದಿನ ಕೆಲಸ ಮಾಡಬೇಕಾಗುತ್ತದೆ. 1 ಮತ್ತು 3 ನೇ ಶನಿವಾರ ಬ್ಯಾಂಕ್ ಅರ್ಧ ದಿನದ ಬದಲಾಗಿ ಪೂರ್ತಿ ಕೆಲಸ ಮಾಡಲಿದೆ.

English summary
This government declaration has brought smiles on thousands of bank employees. Giving in to their long-standing demands, the government has finally declared 2nd and 4th Saturdays as holiday, with effect from September 1. . AIBEA general secretary C H Venkatachalam said,"This s a welcome move. This will be a big relief to employees and I hope that this will improve the productivity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X