ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಗದಾ ಪ್ರಹಾರಕ್ಕೆ ತತ್ತರಿಸಿದ ನೆಸ್ಲೆ ಕಂಪನಿ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 12: ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್​ನ ಮಾರಾಟಕ್ಕೆ ಕೇಂದ್ರ ಸರ್ಕಾರ ದೇಶದೆಲ್ಲೆಡೆ ನಿರ್ಬಂಧ ಹೇರಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ನೆಸ್ಲೆ ಕಂಪನಿ ವಿರುದ್ಧ ಸುಳ್ಳು ಜಾಹೀರಾತು, ಗ್ರಾಹಕರಿಗೆ ಮೋಸ ಮಾಡಿದ ಆರೋಪ ಹೊರೆಸಿ 640 ಕೋಟಿ ರೂ.ಗಳ ಪರಿಹಾರ ನೀಡುವಂತೆ ದಾವೆ ಹೂಡಲಾಗಿದೆ.

ದೆಹಲಿಯ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದಲ್ಲಿ ಈ ಸಂಬಂಧ ಮಂಗಳವಾಅರ ದಾವೆ ಹೂಡಲಾಗಿದ್ದು, ಬುಧವಾರ ನೆಸ್ಲೆ ಕಂಪನಿ ಷೇರುಗಳು ಪಾತಾಳಕ್ಕಿಳಿಯುತ್ತಿವೆ.

Govt files case against Maggi seeking Rs 640 crore in damages

2 ನಿಮಿಷದಲ್ಲಿ ತಯಾರಿಸಬಹುದಾದ ಮ್ಯಾಗಿ ನೂಡಲ್ಸ್​ನಲ್ಲಿರುವ ರಾಸಾಯನಿಕಗಳ ಬಗ್ಗೆ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅನೇಕ ಪರೀಕ್ಷೆಗಳು ನಡೆದು ನಿಷೇಧಕ್ಕೊಳಪಟ್ಟಿತ್ತು.

ಇದರ ಜತೆಗೆ ನೂಡಲ್ಸ್​ನ ಕವರ್ ಮೇಲೆ ಕಡ್ಡಾಯವಾಗಿ ಮುದ್ರಿಸಬೇಕಾಗಿದ್ದ ಅಂಶಗಳ ಪೈಕಿ ತನ್ನ ಉತ್ಪನ್ನದಲ್ಲಿ ಎಂಎಸ್​ಜಿ ಅಥವಾ ಸ್ವಾದವನ್ನು ಹೆಚ್ಚಿಸುವ ಸಲುವಾಗಿ ಉತ್ಪನ್ನದಲ್ಲೇ ಮೋನೋ ಸೋಡಿಯಂ ಗ್ಲ್ಯುಟೊಮೇಟ್ (ಎಂಎಸ್​ಜಿ) ಸೇರಿಸಿಲ್ಲವೆಂದು ಅದು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಎದುರಿಸುತ್ತಿದೆ.ಈ ಹಿನ್ನೆಲೆಯಲ್ಲಿ ಸರ್ಕಾರ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿದೆ.

English summary
Acting against Nestle India over the Maggi issue, the government on Tuesday approached consumer forum NCDRC seeking damages worth Rs 640 crore from the company on charges of unfair trade practices, false labelling and misleading advertisements of the popular noodles brand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X