ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ ಕಳಪೆ LED ಬಲ್ಬ್ ಆಮದು: ಬಲ್ಬ್‌ಗೂ ಬ್ರೇಕ್ ಹಾಕುತ್ತಾ ಸರ್ಕಾರ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಚೀನಾದಿಂದ ಭಾರತಕ್ಕೆ ಆಮದಾಗುವ ಎಲ್‌ಇಡಿ ಬಲ್ಬ್‌ಗಳ ಗುಣಮಟ್ಟ ಪರೀಕ್ಷೆಯನ್ನು ಭಾರತ ಸರ್ಕಾರ ಬಿಗಿಗೊಳಿಸಿದೆ. ಇನ್ಮುಂದೆ ಚೀನಾದಿಂದ ಆಮದಾಗುವ ಎಲ್ಲಾ ಎಲ್‌ಇಡಿ ಉತ್ಪನ್ನಗಳಿಗೆ ಟೆಸ್ಟ್‌ಗಳನ್ನು ಕಡ್ಡಾಯಗೊಳಿಸಿದೆ.

ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯ ಹೊರಡಿಸಿರುವ ಹೊಸ ಅಧಿಸೂಚನೆಯ ಪ್ರಕಾರ, ಆಮದಾಗುವ ಎಲ್ಲಾ ಎಲ್‌ ಇಡಿ ಉತ್ಪನ್ನಗಳ ಆಯ್ದ ಸ್ಯಾಂಪಲ್‌ಗಳನ್ನು ಗುಣಮಟ್ಟದ ಕಠಿಣ ಪರೀಕ್ಷೆಗೆ ಒಳಪಡಿಸಲಾಗುವುದು. ಚೀನಾ ಮೂಲದ ಆಮದನ್ನು ನಿರುತ್ತೇಜನಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಚೀನಾದ ವಿರುದ್ಧ ಚೀನಾದ ವಿರುದ್ಧ "ವಾಣಿಜ್ಯ ಸಮರ" ಸಾರಿತಾ ಕೇಂದ್ರ ಸರ್ಕಾರ?

ಕಾಂಡ್ಲಾ, ಪಾರಾದಿಪ್‌, ಕೊಚ್ಚಿ, ಮುಂಬಯಿ ಬಂದರುಗಳಲ್ಲಿ ಈ ಗುಣಮಟ್ಟ ಪರೀಕ್ಷೆಗಳು ನಡೆಯಲಿವೆ. ಆಮದಾಗುವ ಉತ್ಪನ್ನಗಳನ್ನು ಆಯ್ದ ಸ್ಯಾಂಪಲ್‌ಗಳನ್ನು ಬ್ಯೂರೊ ಆಫ್‌ ಇಂಡಿಯಾ ಸ್ಟ್ಯಾಂಡರ್ಡ್‌ (ಬಿಐಎಸ್‌) ಪರೀಕ್ಷಿಸಲು ರವಾನಿಸಲಾಗುವುದು.

Govt Eye On Chinas LED Products: Mandated Random Sampling Of Imported LED

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸರಕುಗಳ ಅಡಿಯಲ್ಲಿ (ಕಡ್ಡಾಯ ನೋಂದಣಿಯ ಅವಶ್ಯಕತೆ ) ಆದೇಶ, 2012, ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ಈ ಕುರಿತು ತಿಳಿಸಿದೆ.

7 ದಿನಗಳೊಳಗೆ ಪರೀಕ್ಷೆ ಮುಗಿಯಲಿದೆ. ಗುಣಮಟ್ಟ ಪರೀಕ್ಷೆ ಸಫಲವಾದರೆ ಕಸ್ಟಮ್ಸ್‌ ಕ್ಲಿಯರೆನ್ಸ್‌ ಸಿಗಲಿದೆ. ಇಲ್ಲದಿದ್ದರೆ ಉತ್ಪನ್ನವನ್ನು ಹಿಂತಿರುಗಿಸಲಾಗುವುದು ಅಥವಾ ನಾಶಪಡಿಸಲಾಗುವುದು.

ಚೀನಾದಿಂದ ಕಳಪೆ ದರ್ಜೆಯ ಎಲ್‌ ಇಡಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ಆಮದಾಗುತ್ತಿವೆ. ಒಂದು ವೇಳೆ ಭಾರತವು ಅದನ್ನು ತಿರಸ್ಕರಿಸಿದರೆ ಚೀನಾಕ್ಕೆ ಗಣನೀಯ ನಷ್ಟವಾಗಲಿದೆ.

2020-21ರ ಹಣಕಾಸು ವರ್ಷದಲ್ಲಿ ಭಾರತವು ಚೀನಾದಿಂದ 19 ಶತಕೋಟಿಗಿಂತ ಹೆಚ್ಚಿನ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತು, ದೀಪಗಳು ಮತ್ತು ಬೆಳಕಿನ ಫಿಟ್ಟಿಂಗ್‌ಗಳು 436 ಮಿಲಿಯನ್ ಡಾಲರ್‌ನಷ್ಟು ಮೌಲ್ಯದ್ದಾಗಿದೆ.

English summary
India on Thursday mandated random sampling of imported light-emitting diodes (LED) and control gears for LED products to discourage imports of electronic items from China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X