ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FDI, FEMA ಉಲ್ಲಂಘನೆ ಆರೋಪ: ಅಮೆಜಾನ್, ಫ್ಲಿಪ್‌ಕಾರ್ಟ್‌ ವಿರುದ್ಧ ಕ್ರಮಕ್ಕೆ ಇಡಿ, ಆರ್‌ಬಿಗೆ ಕೇಂದ್ರದ ನಿರ್ದೇಶನ

|
Google Oneindia Kannada News

ನವದೆಹಲಿ, ಡಿಸೆಂಬರ್ 31: ಭಾರತದಲ್ಲಿ ರಿಟೇಲ್‌ ಕಿರೀಟಕ್ಕಾಗಿ ಬೃಹತ್ ಉದ್ಯಮಗಳ ನಡುವಿನ ಸ್ಪರ್ಧೆಯ ನಡುವೆ, ಅಮೆಜಾನ್ ಮತ್ತು ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನಿರ್ದೇಶನ ನೀಡಿದೆ.

ಅಮೆಜಾನ್ ನಿಂದ ಫಾರಿನ್ ಎಕ್ಸ್ ಚೇಂಜ್ ಮ್ಯಾನೇಜ್ ಮೆಂಟ್ ಆಕ್ಟ್ (ಫೆಮಾ) ಉಲ್ಲಂಘನೆ ಆಗಿದೆ ಮತ್ತು ಸರ್ಕಾರದ ಎಫ್ ಡಿಐ ನಿಯಮಾವಳಿಗಳಿಗೆ ಅನುಸಾರವಾಗಿ ನಡೆದುಕೊಂಡಿಲ್ಲ ಎಂದು ದೆಹಲಿ ಹೈ ಕೋರ್ಟ್ ಆದೇಶದಲ್ಲಿ ತಿಳಿಸಿರುವುದನ್ನು ಸೋಮವಾರ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಸ್ವಾಗತಿಸಿತ್ತು.

ಫ್ಯೂಚರ್- ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ಹೈ ಕೋರ್ಟ್ಫ್ಯೂಚರ್- ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ಹೈ ಕೋರ್ಟ್

ಇದರ ಜೊತೆಗೆ ವಿಸ್ತೃತವಾದ ದೂರೊಂದನ್ನು ಸಾಕ್ಷ್ಯ ಸಮೇತವಾಗಿ ವಾಣಿಜ್ಯ ಸಚಿವರು, ಹಣಕಾಸು ಸಚಿವರು, ಜಾರಿ ನಿರ್ದೇಶನಾಲಯ, ಸೆಬಿ ಹಾಗೂ ಆರ್ ಬಿಐಗೆ ನೀಡಲಾಗಿತ್ತು. ನಿಯಮ ಉಲ್ಲಂಘಿಸಿ ಫ್ಯೂಚರ್ ಜೊತೆಗೆ ವ್ಯವಹಾರ ಮಾಡಿದ್ದಕ್ಕೆ ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಲಾಗಿತ್ತು. ಈ ಕಂಪನಿಗಳು ಎಫ್‌ಡಿಐ ನೀತಿ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 (ಫೆಮಾ) ಯನ್ನು ಉಲ್ಲಂಘಿಸಿದ್ದಕ್ಕಾಗಿ ಸಿಎಐಟಿ ವಿವಿಧ ದೂರುಗಳ ದೂರುಗಳ ಬಗ್ಗೆ ಕೇಂದ್ರವು ಆಧರಿಸಿ ಇಡಿ ಮತ್ತು ಆರ್‌ಬಿಐಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.

Govt directs ED, RBI to act against Amazon, Flipkart for violation of FDI Policy, FEMA

ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್ ಮಾತನಾಡಿ, "ಸರ್ಕಾರದ ಎಫ್ ಡಿಐ ನಿಯಮಗಳನ್ನು ಅಮೆಜಾನ್ ಬಹಳ ಹಿಂದಿನಿಂದಲೂ ಉಲ್ಲಂಘನೆ ಮಾಡುತ್ತಾ ಬಂದಿದೆ ಹಾಗೂ ಅಮೆಜಾನ್ ಕ್ರೂರ ನಡವಳಿಕೆ ಬಗ್ಗೆ ಹೇಳುತ್ತಿದ್ದುದರ ಬಗ್ಗೆ ಸಿಎಐಟಿ ನಿಲುವನ್ನು ಹೈಕೋರ್ಟ್ ಆದೇಶವು ಎತ್ತಿಹಿಡಿದಿದೆ. ಈ ನೆಲದ ಕಾನೂನು ತನ್ನ ಅನುಕೂಲಕ್ಕೆ ಬಳಸಿಕೊಂಡ ಅಮೆಜಾನ್ ವಿರುದ್ಧ ಜಾರಿ ನಿರ್ದೇಶನಾಲಯ ಸೇರಿ ಇತರ ಸಂಸ್ಥೆಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು," ಎಂದಿದ್ದರು.

ಭಾರತದ ರೀಟೇಲ್ ವ್ಯವಹಾರವನ್ನು ಇ ಕಾಮರ್ಸ್ ಮೂಲಕ ತನ್ನ ಹತೋಟಿಯಲ್ಲಿ ಇರಿಸಿಕೊಳ್ಳುವುದಕ್ಕೆ ಮತ್ತು ದಬ್ಬಾಳಿಕೆ ನಡೆಸುವುದಕ್ಕೆ ತಿರುಚುವ, ಬೆದರಿಸುವ, ಅನಿಯಂತ್ರಿತ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಅಮೆಜಾನ್ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದರು.

English summary
The Union Government has directed the Enforcement Directorate and Reserve Bank of India to take necessary action against Amazon and Walmart-owned-Flipkart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X