• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಇಳಿಕೆ

|

ನವದೆಹಲಿ, ಮಾರ್ಚ್ 31: ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಇಳಿಕೆ ಮಾಡಿ ಕೇಂದ್ರ ಸರ್ಕಾರವು ಬುಧವಾರ(ಮಾರ್ಚ್ 31) ದಂದು ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಬ್ಯಾಂಕುಗಳು ತನ್ನ ಠೇವಣಿ ದರಗಳನ್ನು ಇಳಿಸಲು ಸಹಕಾರಿಯಾಗಲಿದೆ. ಕಳೆದ ಮೂರು ತ್ರೈಮಾಸಿಕದಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಈಗ ಪರಿಷ್ಕೃತ ಬಡ್ಡಿದರ ಏಪ್ರಿಲ್ 1, 2021ರಿಂದ ಜಾರಿಗೆ ಬರಲಿದೆ.

ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC), ಹಿರಿಯ ನಾಗರಿಕ ಉಳಿತಾಯ ಯೋಜನೆಗಳು(SCSS), ಸುಕನ್ಯಾ ಸಮೃದ್ಧಿ ಯೋಜನೆ(SSY) ಸೇರಿದಂತೆ ಇತರೆ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಇಳಿಕೆ ಮಾಡುವ ಸಾಧ್ಯತೆಯಿದೆ ಎಂಬ ಸುದ್ದಿ ಕಳೆದ ವರ್ಷದಿಂದ ಆಗಾಗ ಟ್ರೆಂಡ್ ಆಗುತ್ತಿತ್ತು. ಆದರೆ, ಬಡ್ಡಿದರವನ್ನು ಯಥಾಸ್ಥಿತಿಯಲ್ಲಿರಿಸಿದ್ದ ಮೋದಿ ಸರ್ಕಾರ ಈಗ ಮಾರ್ಚ್ 31ರಂದು ಬಡ್ಡಿದರ ಇಳಿಕೆ ಕುರಿತಂತೆ ಆದೇಶ ಹೊರಡಿಸಿದೆ. ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರಗಳನ್ನು ಹಣಕಾಸು ಸಚಿವಾಲಯವು ತ್ರೈಮಾಸಿಕ ಆಧಾರದ ಮೇಲೆ ಪ್ರಕಟಿಸುತ್ತದೆ.

ಎಷ್ಟು ಪ್ರಮಾಣದಲ್ಲಿ ಇಳಿಕೆ?:
ಬಡ್ಡಿದರ ಪ್ರಮಾಣ ಶೇ 4 ರಿಂದ ಶೇ 3.5ರಷ್ಟು ಇಳಿಕೆಯಾಗಿದೆ. 2021ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಏಪ್ರಿಲ್ 1ರಿಂದ ಜಾರಿಯಾಗಲಿದೆ. ಹೀಗಾಗಿ 1 ರಿಂದ 5 ವರ್ಷದ ಸೀಮಿತ ಅವಧಿ ಹೂಡಿಕೆ ಮೇಲೆ ಶೇ 4.4 ರಿಂದ ಶೇ 5.8ರಷ್ಟು ಬಡ್ಡಿದರ ನಿರೀಕ್ಷಿಸಬಹುದು.

ಏಪ್ರಿಲ್ 1ರಿಂದ ಯಾವೆಲ್ಲ ವಸ್ತು ದರ ಏರಿಕೆ? ಯಾವುದು ಇಳಿಕೆ?ಏಪ್ರಿಲ್ 1ರಿಂದ ಯಾವೆಲ್ಲ ವಸ್ತು ದರ ಏರಿಕೆ? ಯಾವುದು ಇಳಿಕೆ?

ಸರಿ ಸುಮಾರು 46 ವರ್ಷಗಳ ಬಳಿಕ ಪಿಪಿಎಫ್ ದರ ಶೇ 7ಕ್ಕಿಂತ ಕಡಿಮೆ ದರಕ್ಕಿಳಿದಿದೆ. 40 -110 ಮೂಲಾಂಶ ತಗ್ಗಿಸಲಾಗಿದೆ(100 ಮೂಲಾಂಶ/ಬಿಪಿಎಸ್=1%).

ಪ್ರಮುಖ ಬದಲಾವಣೆ:

  • ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ದರ ಶೇ 7.1ರಿಂದ ಶೇ 6.4ಕ್ಕಿಳಿದಿದೆ.
  • ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ(ಎನ್‌ಎಸ್‌ಸಿ) ಶೇ 6.8ರಿಂದ ಶೇ 5.9ಕ್ಕಿಳಿಸಲಾಗಿದೆ.
  • ಸುಕನ್ಯಾ ಸಮೃದ್ಧಿ ಯೋಜನಾ (ಎಸ್ಎಸ್‌ವೈ) ಶೇ 7.6 ರಿಂದ ಶೇ 6.9ಕ್ಕಿಳಿಸಲಾಗಿದೆ.
  • ಅಂಚೆ ಕಚೇರಿ ಹೂಡಿಕೆ ವಿವಿಧ ಅವಧಿಗೆ ಶೇ 1.1%ರಿಂದ0.40 ಕ್ಕೆ ಇಳಿಸಲಾಗಿದ್ದು, ಶೇ 4.4-5.3% ಬಡ್ಡಿ ನಿರೀಕ್ಷಿಸಬಹುದು.

English summary
Ministry of Finance on Wednesday announced a cut in small savings rate from 4 percent to 3.5 percent for the first quarter of the financial year starting April 1, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X