ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರಕ್ಷಿತ ಸಂವಹನ: ತನ್ನದೇ ಸ್ವಂತ 'ವಾಟ್ಸಾಪ್' ಸಿದ್ಧಪಡಿಸುತ್ತಿದೆ ಸರ್ಕಾರ

|
Google Oneindia Kannada News

ನವದೆಹಲಿ, ಜನವರಿ 23: ಕಚೇರಿಗಳ ನಡುವಿನ ಸಂವಹನದಲ್ಲಿ ಗೋಪ್ಯತೆಯನ್ನು ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ ತನ್ನದೇ ಮೊಬೈಲ್ ಫೋನ್‌ಗಳ ತ್ವರಿತ ಸಂದೇಶ ಸೇವೆಯನ್ನು ಆರಂಭಿಸಲಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಹೊಸ ಸಂದೇಶ ವಾಹಕ ಸೌಲಭ್ಯದ ಪ್ರಯೋಗಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿದೆ. ವಾಟ್ಸಾಪ್ ಮಾದರಿಯ ಈ ಸಂದೇಶ ರವಾನೆ ಸೇವೆಗೆ 'ಸರ್ಕಾರಿ ತ್ವರಿತ ಸಂದೇಶ ಸೇವೆ (Government Instant Messaging Service- GIMS) ಎಂದು ಹೆಸರಿಡಲಾಗುತ್ತಿದ್ದು, ಈ ವರ್ಷದ ಕೊನೆಯಲ್ಲಿ ಈ ಹೊಸ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ.

ಶೀಘ್ರದಲ್ಲೇ ವ್ಯಾಟ್ಸಪ್ ನಿಂದ ಹೊಸ ಬಗೆಯ ವೈಶಿಷ್ಟ್ಯಗಳು ನಿಮಗಾಗಿ ಶೀಘ್ರದಲ್ಲೇ ವ್ಯಾಟ್ಸಪ್ ನಿಂದ ಹೊಸ ಬಗೆಯ ವೈಶಿಷ್ಟ್ಯಗಳು ನಿಮಗಾಗಿ

ಈ ಜಿಐಎಂಎಸ್ ಸೌಲಭ್ಯವು ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಇಲಾಖೆಗಳಲ್ಲದೆ, ರಾಜ್ಯ ಸರ್ಕಾರಗಳು ಬಯಸಿದರೂ ತಮ್ಮ ಕಚೇರಿಗಳ ಸಂವಹನಕ್ಕಾಗಿ ಬಳಸಬಹುದು ಎಂದು ಮೂಲಗಳು ತಿಳಿಸಿರುವುದಾಗಿ 'ಫೈನಾನ್ಷಿಯಲ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

Government To Create Its Own Messaging Service GIMS

ಸರ್ಕಾರಿ ಇಲಾಖೆಗಳ ಇ-ಮೇಲ್ ಸೇವಾ ವ್ಯವಸ್ಥೆಯನ್ನು ನಿರ್ಮಿಸಿರುವ ಏಕೀಕೃತ ಸಂದೇಶ ವೇದಿಕೆಯಾದ ಜಿಐಎಂಎಸ್ ಅನ್ನು ನ್ಯಾಷನಲ್ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ ಎನ್‌ಐಸಿ ಸಿದ್ಧಪಡಿಸಿರುವ ಸರ್ಕಾರಿ ಇ-ಮೇಲ್ ಸೇವೆಯಲ್ಲಿ ನಿತ್ಯವೂ ಎರಡು ಕೋಟಿಗೂ ಅಧಿಕ ಮೇಲ್‌ಗಳು ರವಾನೆಯಾಗುತ್ತಿವೆ.

ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುವವರು ಗಮನಿಸಿಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುವವರು ಗಮನಿಸಿ

ಈ ಆಪ್‌ಅನ್ನು ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲಿಯೂ ಬಳಕೆಗೆ ಯೋಗ್ಯವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಅದರ ಬೇಟಾ ಪರೀಕ್ಷೆ ನಡೆಯುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ಸಚಿವಾಲಯ, ಸಿಬಿಐ, ಮಾಹಿತಿ ತಂತ್ರಜ್ಞಾನ ಸಚಿವಾಲಯ, ನೌಕಾಪಡೆ ಮತ್ತು ರೈಲ್ವೆ ಸೇರಿದಂತೆ ಒಟ್ಟು 17 ಸರ್ಕಾರಿ ಸಂಸ್ಥೆಗಳು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿವೆ. ಸದ್ಯ 6,600 ಬಳಕೆದಾರರು ಸುಮಾರು 20 ಲಕ್ಷ ಸಂದೇಶಗಳನ್ನು ಸೃಷ್ಟಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಈ ಆಪ್ ಬಳಕೆಗೆ ಲಭ್ಯವಾಗಲಿದ್ದು, ಬಳಿಕ 11 ಪ್ರಾದೇಶಿಕ ಭಾಷೆಗಳನ್ನು ಸೇರ್ಪಡೆ ಮಾಡಲಾಗುತ್ತದೆ.

English summary
The Central Government is creating its own instant messaging service GIMS for mobile phones to improve confidentiality in official communication.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X