ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ : ಪಿಪಿಎಫ್ ವಿಥ್ ಡ್ರಾ ನಿಯಮ ಮತ್ತೆ ಬದಲಾಯ್ತು!

By Mahesh
|
Google Oneindia Kannada News

ನವದೆಹಲಿ, ಜೂನ್ 20: ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)ನ ಚಂದಾದಾರರು ಅವಧಿಗೂ ಮುನ್ನ ಡಿಪಾಸಿಟ್ ಸ್ಕೀಮ್ ಗಳನ್ನು ವಿಥ್ ಡ್ರಾ ಮಾಡಿಕೊಳ್ಳಬಹುದು ಎಂದು ವಿತ್ತ ಸಚಿವಾಲಯ ಸೋಮವಾರ ಪ್ರಕಟಣೆ ಹೊರಡಿಸಿದೆ.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)ನ ಲಾಕ್ ಇನ್ ಅವಧಿ(ವಾಪಸಾತಿ ನಿರ್ಬಂಧ ಅವಧಿ)ಯನ್ನು ಕನಿಷ್ಠ 5 ವರ್ಷ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. [ಆದಾಯ ತೆರಿಗೆ ದರ, ಮಿತಿ, ಸಂಪೂರ್ಣ ವಿವರ]

ಉನ್ನತ ಶಿಕ್ಷಣ, ಮಾರಣಾಂತಿಕ ಕಾಯಿಲೆಗಾಗಿ, ಮನೆ ನಿರ್ಮಾಣಕ್ಕಾಗಿ, ಮಕ್ಕಳ ಮದುವೆ ಮುಂತಾದ ಬಲವಾದ ಕಾರಣ ನೀಡಿ 5 ವರ್ಷ ಅವಧಿಯ ನಂತರ ಹೂಡಿಕೆ ಯೋಜನೆಯನ್ನು ಬಂದ್ ಮಾಡಬಹುದಾಗಿದೆ.

Government sets terms for premature PPF withdrawal

ಚಂದಾದಾರರು ತಮ್ಮ ಅಥವಾ ತಾವು ನಿರ್ವಹಿಸುತ್ತಿರುವ ಮೈನರ್ (18ರ ವಯೋಮಿತಿ ಕೆಳಗಿರುವವರ ಖಾತೆ) ಅಕೌಂಟ್ ಗಳನ್ನು ಸರಿಯಾದ ಕಾರಣ ನೀಡಿ ಕ್ಲೋಸ್ ಮಾಡಬಹುದು. ಅಕೌಂಟ್ ಕ್ಲೋಸ್ ಮಾಡಬೇಕಾದರೆ ಕನಿಷ್ಠ 5 ಆರ್ಥಿಕ ವರ್ಷ ಅವಧಿಯನ್ನು ಆ ಖಾತೆ ಪೂರೈಸಿರಬೇಕು ಎಂದು ವಿತ್ತ ಸಚಿವಾಲಯ ಹೇಳಿದೆ. [ಬಜೆಟ್ 2016: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕವೇನು?]

ಈ ನಡುವೆ ಠೇವಣಿ ಹಣ ವಾಪಸಾತಿ ಅವಧಿಯನ್ನು 15 ರಿಂದ 20 ವರ್ಷಕ್ಕೆ ಏರಿಸುವ ಪ್ರಸ್ತಾಪವೂ ಸರ್ಕಾರದ ಬಳಿಯಿದೆ. ಠೇವಣಿ ಇಡುವವರಿಗೆ ಆಯ್ಕೆ ಬಿಟ್ಟುಕೊಡಲಾಗುವುದು. ದೀರ್ಘಾವಧಿ ಅಂದರೆ 20 ವರ್ಷಕ್ಕೆ ಹಣ ಇಡುವವರಿಗೆ ಹೆಚ್ಚಿನ ಬಡ್ಡಿ ದರ ನೀಡಲಾಗುವುದು ಎಂದು ವಿತ್ತ ಸಚಿವಾಲಯ ಹೇಳಿದೆ. [ಆನ್ ಲೈನ್ ನಲ್ಲೇ ಪಿಎಫ್ ಹಣ ವಿಥ್ ಡ್ರಾ ಮಾಡಿ]

ತೆರಿಗೆ ಮುಕ್ತ : ಪಿಪಿಎಫ್ ಗೆ ನೀಡುವ ಮೊತ್ತ ತೆರಿಗೆ ಮುಕ್ತವಾಗಲಿದೆ. ವಿಥ್ ಡ್ರಾ (ನಿವೃತ್ತಿಯಾಗುವಾಗ) ಸಮಯದಲ್ಲೂ ಪಿಪಿಎಫ್ ಮೊತ್ತದ ಮೇಲೆ ಯಾವುದೇ ತೆರಿಗೆ ಹಾಕುವುದಿಲ್ಲ. 15,000 ರು ಪ್ರತಿ ತಿಂಗಳು ಆದಾಯ ಹೊಂದಿರುವ ಸಂಬಳದಾರರು ಇಪಿಎಫ್ ನ ತೆರಿಗೆಗೆ ಒಳಪಡುವುದಿಲ್ಲ. [ಚಿಂತೆ ಬಿಡಿ, ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲ]

ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿರುತ್ತದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ ಎನ್ನಲಾಗಿತ್ತು.

ಇಪಿಎಫ್ ಒ ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರು ಗೂ ಅಧಿಕ ಮೊತ್ತವಿದೆ. ಎನ್ ಪಿಎಸ್ ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರು ಮೊತ್ತವಿದೆ.

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. (ಪಿಟಿಐ)

English summary
The Finance Ministry on Monday said subscribers of the Public Provident Fund (PPF) can prematurely close the deposit scheme after completing five years for reasons such as higher education or expenditure towards medical treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X