ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018-19ರ ಆರ್ಥಿಕ ಪ್ರಗತಿ ದರ ಏರಿಕೆ ಶೇ 7.2: ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜನವರಿ 07: 2018-19ನೇ ಸಾಲಿನ ಆರ್ಥಿಕ ಪ್ರಗತಿ ದರ ಶೇ 7.2ರಷ್ಟಾಗಲಿದೆ ಎಂದು ಕೇಂದ್ರ ಸರ್ಕಾರವು ಸೋಮವಾರದಂದು ಪ್ರಕಟಿಸಿದೆ.

ಕೇಂದ್ರ ಸಾಂಖ್ಯಿಕ ಕಚೇರಿ(ಸಿಎಸ್ಒ) ಮಾಹಿತಿಯಂತೆ ಆರ್ಥಿಕ ಪ್ರಗತಿ ದರ ಶೇ 7.2ರಷ್ಟಾಗಲಿದೆ. ಖಾಸಗಿ ಆರ್ಥಿಕ ತಜ್ಞರ ಪ್ರಕಾರ 2018-19ನೇ ಸಾಲಿಗೆ ಶೇ7ರಷ್ಟಿರಲಿದೆ.ಶೇ 7.4ರಷ್ಟು ನಿರೀಕ್ಷೆಯನ್ನು ಹೊಂದಲಾಗಿತ್ತು.

ಜಿಡಿಪಿ ಪ್ರಗತಿ ಇಳಿಕೆ; ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ದರ 7.1%ಜಿಡಿಪಿ ಪ್ರಗತಿ ಇಳಿಕೆ; ಜುಲೈ- ಸೆಪ್ಟೆಂಬರ್ ತ್ರೈಮಾಸಿಕ ದರ 7.1%

ಭಾರತದ ಪ್ರಗತಿ ದರವು ಕಳೆದ ತ್ರೈ ಮಾಸಿಕದಲ್ಲಿ ಇಳಿಕೆಯಾಗಿತ್ತು. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಬದಲಾವಣೆ, ಮೇಲಿಂದ ಮೇಲೆ ಬಡ್ಡಿ ದರದಲ್ಲಿನ ಏರಿಕೆ, ರಫ್ತು ಬೇಡಿಕೆ ದುರ್ಬಲಗೊಂಡಿದ್ದ ಕಾರಣಕ್ಕೆ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ತಡೆ ಬಿದ್ದಂತಾಗಿತ್ತು.

Government Pegs GDP Growth At 7.2% In 2018-19

ಕಳೆದ ತ್ರೈ ಮಾಸಿಕದಲ್ಲಿ 8% ಪ್ರಗತಿ ಸಾಧಿಸಲು ಸಾಧ್ಯವಾಗಿತ್ತು. ಆದರೆ ಈ ಬಾರಿ, ಅಂದರೆ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ 7.1% ತಲುಪಿತ್ತು.

ಈ ಪರಿಸ್ಥಿತಿಯಲ್ಲಿ ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರಕಾರದ ಮಧ್ಯದ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಸಾಲದ ಕೊರತೆಯನ್ನು ನೀಗಿಸಲು ರಿಸರ್ವ್ ಬ್ಯಾಂಕ್ ಆಫ್ ಗವರ್ನರ್ ಹಾಗೂ ಅವರ ತಂಡ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
The government on Monday said it estimated GDP growth at 7.2 per cent in 2018-19, as against 6.7 per cent in 2017-18. The economic growth projection was part of the "First Advance Estimates Of National Income 2018-19" report by the Central Statistics Office (CSO), under the Ministry of Statistics and Programme Implementation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X