ಎಲ್ ಪಿಜಿ ಪ್ರತಿ ತಿಂಗಳ ಬೆಲೆ ಏರಿಕೆ ನಿರ್ಧಾರ ಹಿಂಪಡೆದ ಸರಕಾರ

Posted By:
Subscribe to Oneindia Kannada

ಪ್ರತಿ ತಿಂಗಳು ಅಡುಗೆ ಅನಿಲ ಸಿಲಿಂಡರ್ ನ ಬೆಲೆ 4 ರುಪಾಯಿ ಏರಿಸುವ ನಿರ್ಧಾರವನ್ನು ಸರಕಾರ ಹಿಂಪಡೆದಿದೆ. ಉಜ್ವಲ ಯೋಜನೆ ಅಡಿ ಬಡವರಿಗೆ ಉಚಿತ ಅಡುಗೆ ಅನಿಲ ವಿತರಿಸುವ ಯೋಜನೆಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ.

ಅಡುಗೆ ಅನಿಲ ಸಬ್ಸಿಡಿಯನ್ನು ಕ್ರಮೇಣ ತೆಗೆದುಹಾಕುವ ಉದ್ದೇಶದಿಂದ 2016ರ ಜೂನ್ ನ ಆರಂಭದಲ್ಲಿ ಸಾರ್ವಜನಿಕ ತೈಲ ಮಾರುಕಟ್ಟೆ ಕಂಪೆನಿಗಳಿಗೆ ಸೂಚನೆ ನೀಡಿತ್ತು: ಪ್ರತಿ ತಿಂಗಳು 4 ರುಪಾಯಿ ಏರಿಸುವಂತೆ ತಿಳಿಸಿತ್ತು. ಕಳೆದ ಅಕ್ಟೋಬರ್ ನಲ್ಲಿ ಈ ಆದೇಶ ಹಿಂಪಡೆಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಚುನಾವಣೆ ಹಿನ್ನಲೆ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆಗೆ ಬ್ರೇಕ್!

ಆದ್ದರಿಂದ ಅಕ್ಟೋಬರ್ ನಿಂದ ಐಒಸಿ, ಬಿಪಿಸಿಎಲ್, ಎಚ್ ಪಿಸಿಎಲ್ ಕಂಪೆನಿಗಳು ಅಡುಗೆ ಅನಿಲ ಬೆಲೆಯಲ್ಲಿ ಏರಿಕೆ ಮಾಡಿಲ್ಲ. ಅದಕ್ಕೂ ಮುನ್ನ ತೈ ಕಂಪೆನಿಗಳು 14.2 ಕೇಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 2 ರುಪಾಯಿ (ವ್ಯಾಟ್ ಹೊರತುಪಡಿಸಿ) ಏರಿಸಲು ಜುಲೈ 1, 2016ರಿಂದ ಅನ್ವಯ ಆಗುವಂತೆ ಅನುಮತಿ ನೀಡಲಾಗಿತ್ತು.

LPG

ಆ ನಂತರ ತೈಲ ಕಂಪೆನಿಗಳು ಅಡುಗೆ ಅನಿಲ ದರವನ್ನು ಹತ್ತು ಸಂದರ್ಭದಲ್ಲಿ ಏರಿಕೆ ಮಾಡಲಾಗಿದೆ. ಒಂದು ಮನೆಗೆ ವರ್ಷಕ್ಕೆ 14.2 ಕೇಜಿ ತೂಕದ ಹನ್ನೆರಡು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಪಡೆಯಬಹುದು. ಅದರಾಚೆಗೆ ಬೇಕೆಂದರೆ ಮಾರುಕಟ್ಟೆಯಲ್ಲಿನ ದರ ಕೊಟ್ಟು ಖರೀದಿಸಬೇಕು.

ಮೇ 30, 2017ರಂದು ಮನೆಗೆ ಬಳಸುವ ಸಿಲಿಂಡರ್ ನ ಬೆಲೆ ಏರಿಕೆ ಪ್ರಮಾಣ ದ್ವಿಗುಣ (4 ರುಪಾಯಿ) ಮಾಡಲು ಸೂಚಿಸಲಾಯಿತು. ಜೂನ್ ಒಂದಕ್ಕೆ ಅನ್ವಯ ಆಗುವಂತೆ ಪ್ರತಿ ತಿಂಗಳು ಅಷ್ಟು ಏರಿಕೆ (ವ್ಯಾಟ್ ಹೊರತುಪಡಿಸಿ) ಮಾಡಲಾಯಿತು. ಅದು ಮುಂದಿನ ಮಾರ್ಚ್ ಅಥವಾ 'ಶೂನ್ಯ'ಕ್ಕೆ ಯಾವುದೋ ಮೊದಲೋ ಅಲ್ಲಿಯವರೆಗೆ ಬೆಲೆ ಏರಿಕೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಇದೀಗ ಅದರಲ್ಲಿ ಬದಲಾವಣೆ ತಂದು, ಸೂಚನೆ ಹಿಂಪಡೆಯಲಾಗಿದೆ.

ಕಳೆದ ಅಕ್ಟೋಬರ್ ನಂತರ ಸಬ್ಸಿಡಿಸಹಿತ ಎಲ್ ಪಿಜಿ ದರದಲ್ಲಿ ಏರಿಕೆ ಆಗಿದ್ದರೆ ಅದಕ್ಕೆ ತೆರಿಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಹದಿನೇಳು ತಿಂಗಳಲ್ಲಿ ಹತ್ತೊಂಬತ್ತು ಕಂತುಗಳಲ್ಲಿ 76.5 ರುಪಾಯಿ ಸಬ್ಸಿಡಿಸಹಿತ ಎಲ್ ಪಿಜಿಯಲ್ಲಿ ಏರಿಕೆ ಆಗಿದೆ. ತೈಲ ಸಚಿವಾಲಯದ ಮಾಹಿತಿ ಪ್ರಕಾರ 14.2 ಕೇಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಗೆ 251.31 ರುಪಾಯಿ ನೀಡಲಾಗುತ್ತಿದೆ.

ಸದ್ಯಕ್ಕೆ 2.66 ಕೋಟಿ ಸಬ್ಸಿಡಿರಹಿತ ಸಿಲಿಂಡರ್ ಖರೀದಿ ಮಾಡುತ್ತಿದ್ದಾರೆ. ಅದರಲ್ಲಿ ಪ್ರಧಾನಿ ಮೋದಿ ಮನವಿ ಮೇರೆಗೆ ಸಬ್ಸಿಡಿ ಬಿಟ್ಟುಕೊಟ್ಟವರೂ ಸೇರಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The government has withdrawn its decision to raise LPG prices by Rs 4 per cylinder every month as the move was seen contrary to its Ujjwala scheme of providing free cooking gas connections to the poor.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ