ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್ ಕಾರ್ಟ್, ಅಮೆಜಾನ್ ಗ್ರಾಹಕರಿಗೆ ಕಹಿಸುದ್ದಿ, ಹಬ್ಬಕ್ಕೆ ಆಫರ್ ಇಲ್ಲ?!

|
Google Oneindia Kannada News

ಮುಂಬೈ, ಸೆಪ್ಟೆಂಬರ್ 14: ಆನ್ ಲೈನ್ ಶಾಪಿಂಗ್ ಪ್ರಿಯರಿಗೆ ಇಲ್ಲೊಂದು ಕಹಿಸುದ್ದಿಯಿದೆ. ಖರೀದಿಗಾಗಿ ಹಬ್ಬ ಬರುವುದನ್ನೇ ಕಾಯುತ್ತಿರುವವರಿಗೆ ಈ ಬಾರಿ ಹಬ್ಬದ ಡಿಸ್ಕೌಂಟ್ ಸಿಗುವುದು ಡೌಟು!

ಭಾರತದ ಮುಂಚೂಣಿ ವರ್ತಕರ ಒಕ್ಕೂಟ CAIT (Confederation of All India Traders
Read more ) ಸರ್ಕಾರಕ್ಕೆ ಮನವಿಯೊಂದನ್ನು ಕಳಿಸಿದ್ದು, ಇದರಲ್ಲಿ, "ಇ ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಹಾಕುವ ಹಬ್ಬದ ಆಫರ್ ಗಳನ್ನು ನಿಷೇಧಿಸಬೇಕು" ಎಂದಿದೆ.

ಅಮೆಜಾನ್‌ನಲ್ಲೂ ಕೂಡ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್ಅಮೆಜಾನ್‌ನಲ್ಲೂ ಕೂಡ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್

ಈ ಸಂಸ್ಥೆಗಳು ದೇಶದ ವಿದೇಶಿ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿ, ಹೆಚ್ಚಿನ ಡಿಸ್ಕೌಂಟ್ ನೀಡುತ್ತಿವೆ ಎಂದು ಅದು ದೂರಿದೆ.

Government May Ban Discount On Festive Sale On Flipkart And Amazon

ವಾಲ್ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್ ನ ಆರು ದಿನಗಳ ಫೆಸ್ಟಿವ್ ಸೇಲ್ ಸೆಪ್ಟೆಂಬರ್ 29 ರಂದು ಆರಂಭವಾಗಲಿದೆ. ಅಮೆಜಾನ್ ತನ್ನ ಡಿಸ್ಕ್ಪೌಂಟ್ ಸೇಲ್ ಅನ್ನು ಇನ್ನೂ ಪ್ರಕಟಿಸಬೇಕಿದೆ. ಆದರೆ ಅದಕ್ಕೂ ಮುನ್ನವೇ ಸರ್ಕಾರವೇನಾದರೂ ಈ ಕೊಡುಗೆಗಳ ಮೇಲೆ ನಿಷೇಧ ಹೇರಿದರೆ ಗ್ರಾಹಕರಿಗೆ ನಿರಾಸೆಯಾಗುವುದು ಖಂಡಿತ.

ಬಿಎಸ್ಎನ್ಎಲ್ ಗ್ರಾಹಕರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಉಚಿತಬಿಎಸ್ಎನ್ಎಲ್ ಗ್ರಾಹಕರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಉಚಿತ

5 ಲಕ್ಷಕ್ಕೂ ಹೆಚ್ಚು ವರ್ತಕರನ್ನು ಹೊಂದಿರುವ CAITಯು ಸರ್ಕಾರಕ್ಕೆ ಪತ್ರ ಬರೆದಿದ್ದು, ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಗಳು ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅವುಗಳ ಬಗ್ಗೆ ತನಿಖೆ ನಡೆಯಬೇಕು, ಅದುವರೆಗೂ ಈ ಡಿಸ್ಕೌಂಟ್ ಸೇಲ್ ಗಳಿಗೆ ನಿಷೇಧ ಹೇರಬೇಕು ಎಂದು ಮನವಿ ಮಾಡಿದೆ.

English summary
Government May Ban Discount On Festive Sale On Flipkart And Amazon,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X