ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಇಳಿಕೆ

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರಗಳಲ್ಲಿ ಶೇ. 0.1ರಷ್ಟು ಇಳಿಕೆ ಮಾಡಿದ ಕೇಂದ್ರ ಹಣಕಾಸು ಸಚಿವಾಲಯ. ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಿಗೆ ಅನ್ವಯ.

|
Google Oneindia Kannada News

ನವದೆಹಲಿ, ಜುಲೈ 1: ಸಣ್ಣ ಉಳಿತಾಯದಡಿ ಚಾಲ್ತಿಯಲ್ಲಿರುವ ವಿವಿಧ ಹಣಕಾಸು ಯೋಜನೆಗಳ ಶೇಕಡಾವಾರು ಬಡ್ಡಿಯನ್ನು 0.1ರಷ್ಟು ಇಳಿಸಲಾಗಿದೆ. ಅದರಂತೆ, ಪಿಪಿಎಫ್, ಮಕ್ಕಳ ಕಲ್ಯಾಣ ನಿಧಿಯಡಿ ಬರುವ ಎಲ್ಲಾ ಸೇವಿಂಗ್ಸ್ ಗಳು, ಕಿಸಾನಿ ವಿಕಾಸ್ ಪತ್ರ ಮುಂತಾದ ಎಲ್ಲಾ ಉಳಿತಾಯಗಳ ಮೇಲಿನ ಬಡ್ಡಿ ದರ ಇಳಿಕೆ ಅನ್ವಯವಾಗಲಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಕೇಂದ್ರ ಹಣಕಾಸು ಇಲಾಖೆಯು ಈ ಹೊಸ ದರಗಳು ಜುಲೈನಿಂದ ಸೆಪ್ಟಂಬರ್ ವರೆಗೆ ಚಾಲ್ತಿಯಲ್ಲಿದ್ದು, ಸೆಪ್ಟಂಬರ್ ನಂತರ ಮತ್ತೆ ಪರಿಷ್ಕರಿಸಲಾಗುವುದು ಎಂದು ತಿಳಿಸಿದೆ.

ಕಳೆದ ವರ್ಷವೇ ಕೇಂದ್ರ ಸರ್ಕಾರ, ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರಗಳನ್ನು ಪ್ರತಿ ಮೂರು ತಿಂಗಳುಗಳಿಗೊಮ್ಮೆ ಪರಿಷ್ಕರಿಸುವುದಾಗಿ ತಿಳಿಸಿತ್ತು. ಆ ಹಿನ್ನೆಲೆಯಲ್ಲಿ, ಇದೇ ವರ್ಷ ಜನವರಿಯಿಂದ ಏಪ್ರಿಲ್ ವರೆಗೆ, ಏಪ್ರಿಲ್ ನಿಂದ ಜೂನ್ ವರೆಗಿನ ಮೂರು ತಿಂಗಳುಗಳವರೆಗೆ ಪರಿಷ್ಕೃತ ದರಗಳನ್ನು ಪ್ರಕಟಿಸಲಾಗಿತ್ತು. ಇದೀಗ, ಮುಂದಿನ ಮೂರು ತಿಂಗಳುಗಳಿಗೆ ಮತ್ತೊಂದು ಸುತ್ತಿನ ಪರಿಷ್ಕರಣೆಯನ್ನು ನೀಡಲಾಗಿದೆ.

ಕೆವಿಪಿ ದರವೂ ಇಳಿಕೆ

ಕೆವಿಪಿ ದರವೂ ಇಳಿಕೆ

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮೇಲಿನ ಬಡ್ಡಿ ದರವು ಶೇ. 7.9ರಿಂದ 7.8ಕ್ಕೆ ಇಳಿಕೆಯಾಗಲಿದೆ. ಇನ್ನು, ಕಿಸಾನ್ ವಿಕಾಸ ಪತ್ರದ ಬಡ್ಡಿ ದರ 7.6ರಿಂದ 7.5ಕ್ಕೆ ಇಳಿಯಲಿದೆ. ಇದರ ಮೆಚ್ಯುರಿಟಿ ಅವಧಿಯು 115 ತಿಂಗಳಿಗೆ ಹೆಚ್ಚಾಗಲಿದೆ.

ಒಂದು ಅಂಶದಷ್ಟು ಇಳಿಮುಖ

ಒಂದು ಅಂಶದಷ್ಟು ಇಳಿಮುಖ

ಅಂಚೆ ಕಚೇರಿಗಳಲ್ಲಿ ಲಭ್ಯವಿರುವ, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹೊರ ತರಲಾಗಿರುವ ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿದರ ಶೇ. 8.4ರಿಂದ ಶೇ. 8.3ಕ್ಕೆ ಇಳಿಯಲಿದೆ.

ತ್ರೈ ಮಾಸಿಕ ಅವಧಿಗೆ ಪರಿಷ್ಕರಣೆ

ತ್ರೈ ಮಾಸಿಕ ಅವಧಿಗೆ ಪರಿಷ್ಕರಣೆ

ಹಿರಿಯ ನಾಗರಿಕರ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವು ಶೇ. 8.4ರಿಂದ ಶೇ. 8.3ಕ್ಕೆ ಇಳಿಕೆಯಾಗಲಿದೆ. ಈ ಹಿಂದೆಯೂ ಹಿರಿಯ ನಾಗರಿಕರ ಭವಿಷ್ಯ ನಿಧಿಯ ತ್ರೈಮಾಸಿಕ ಅವಧಿಯ ಲೆಕ್ಕಾಚಾರದಲ್ಲಿ ಪರಿಷ್ಕೃತಗೊಳ್ಳಲಿದೆ.

ರೆಕರಿಂಗ್ ಡೆಪಾಸಿಟ್ ಗಳ ಮೇಲಿನ ಬಡ್ಡಿ ಹೀಗಿದೆ

ರೆಕರಿಂಗ್ ಡೆಪಾಸಿಟ್ ಗಳ ಮೇಲಿನ ಬಡ್ಡಿ ಹೀಗಿದೆ

ಟರ್ಮ್ ಡೆಪಾಸಿಟ್ ಗಳಿಗಲ್ಲಿ ಹೂಡಿಕೆ ಮಾಡಲಾಗಿರುವ ಹಣದ ಮೇಲಿನ ಬಡ್ಡಿದರವು ಶೇ. 6.8ರಿಂದ ಶೇ. 7.6ರ ನಡುವೆ ಇರಲಿದೆ. ಇನ್ನು, ಐದು ವರ್ಷಗಳ ಮಟ್ಟಿಗೆ ಇಡಲಾಗುತ್ತಿದ್ದ ರೆಕರಿಂಗ್ ಡೆಪಾಸಿಟ್ ಗಳ ಮೇಲಿನ ಬಡ್ಡಿ ದರಗಳು ಶೇ. 7.1ರಷ್ಟು ಇರಲಿದೆ.

ಕೇಂದ್ರ ಸರ್ಕಾರ ಪ್ರಕಟಣೆ

ಕೇಂದ್ರ ಸರ್ಕಾರ ಪ್ರಕಟಣೆ

ಬಡ್ಡಿ ದರಗಳಲ್ಲಿನ ಈ ಬದಲಾವಣೆಯು, ಸಣ್ಣ ಉಳಿತಾಯದ ಯೋಜನೆಗಳಡಿ ಸರ್ಕಾರಿ ಬಾಂಡ್ ಗಳನ್ನು ಕೊಂಡವರಿಗೂ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

English summary
The government has lowered interest rate on small saving schemes by 10 basis points for the July-September quarter. The rates have been lowered by 0.1 per cent across the board compared to the April-June quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X