ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳಿಗೆ ಸಿಹಿ ಸುದ್ದಿ, ಗ್ರಾಚ್ಯುಟಿ ಅವಧಿ ಇಳಿಕೆ ಸಾಧ್ಯತೆ!

|
Google Oneindia Kannada News

ನವದೆಹಲಿ, ನವೆಂಬರ್ 13: ಗ್ರಾಚ್ಯುಟಿ ಹಣ ಪಡೆಯುವ ನೌಕರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯೊಂದು ಸಿಗುವ ಸಾಧ್ಯತೆಯಿದೆ. ಗ್ರಾಚ್ಯುಟಿ ಮೊತ್ತ ಪಡೆಯಲು ಇದ್ದ ಅವಧಿಯನ್ನು 5 ರಿಂದ 3 ವರ್ಷಕ್ಕೆ ಇಳಿಕೆ ಮಾಡುವ ಸಾಧ್ಯತೆ ಕಂಡು ಬಂದಿದೆ.

ಗ್ರಾಚ್ಯುಟಿ ತಿದ್ದುಪಡಿ ಮಸೂದೆ 2017ಯನ್ನು ಅಂಗೀಕಾರ ಮಾಡಿದ್ದರಿಂದ ಉದ್ಯೋಗಿಗಳಿಗೆ 20 ಲಕ್ಷ ರೂ.ವರೆಗೂ ತೆರಿಗೆ ಮುಕ್ತ ಗ್ರಾಚ್ಯುಟಿ ಪಡೆಯುವ ಅವಕಾಶವನ್ನು ಮಾರ್ಚ್ ತಿಂಗಳಿನಿಂದ ಕೇಂದ್ರ ಸರ್ಕಾರ ಒದಗಿಸಿತ್ತು. ಈಗ ಗ್ರಾಚ್ಯುಟಿ ಅವಧಿಯನ್ನು ತಗ್ಗಿಸುವ ಬಗ್ಗೆ ಚಿಂತನೆ ನಡೆದಿದೆ.

ಗ್ರಾಚ್ಯುಟಿ ಎಂದರೇನು? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?
ಹಣ ಪಡೆಯಲು ಈವರೆಗೆ ಇದ್ದ ಕನಿಷ್ಠ ಐದು ವರ್ಷಗಳ ಸೇವಾವಧಿಯನ್ನು ಮೂರು ವರ್ಷಗಳಿಗೆ ಇಳಿಸಲು ಚಿಂತನೆ ನಡೆಸಿದ್ದು, ಇದರಿಂದ ಲಕ್ಷಾಂತರ ನೌಕರರಿಗೆ ಪ್ರಯೋಜನವಾಗಲಿದೆ.

ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ!ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ!

1972 ರ ಪೇಮೆಂಟ್ ಅಫ್ ಗ್ರಾಚ್ಯುಯಿಟಿ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದ್ದು, ಈ ಕುರಿತು ಪರಿಣತರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ.

ಗುತ್ತಿಗೆ ನೌಕರರಿಗೆ ಸೌಲಭ್ಯ ಸಿಗುವುದೇ?

ಗುತ್ತಿಗೆ ನೌಕರರಿಗೆ ಸೌಲಭ್ಯ ಸಿಗುವುದೇ?

ನಿಶ್ಚಿತ ಅವಧಿಯ ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯ ಸಿಗಲಿದೆ. ಆದರೆ, ಇತರೆ ಅಲ್ಪಾವಧಿ ಗುತ್ತಿಗೆ ನೌಕರರಿಗೆ ಈ ಸೌಲಭ್ಯ ಸಿಗುವುದಿಲ್ಲ. ಆದರೆ, ಐದು ವರ್ಷ ಅವಧಿಯ ಉದ್ಯೋಗವನ್ನು ಪೂರ್ಣಗೊಳಿಸಿದ ನೌಕರರಿಗೆ ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ಅನ್ವಯ ಗ್ರಾಚ್ಯುಟಿ ಸಿಗಬೇಕಾಗುತ್ತದೆ.

ಎಲ್ಲಾ ಸ್ತರದ ಉದ್ಯೋಗಿಗೂ ಇದೆ ಸೌಲಭ್ಯ

ಎಲ್ಲಾ ಸ್ತರದ ಉದ್ಯೋಗಿಗೂ ಇದೆ ಸೌಲಭ್ಯ

ಗಣಿ, ತೈಲಕ್ಷೇತ್ರ, ಫ್ಯಾಕ್ಟರಿ, ಬಂದರು, ರೈಲ್ವೇ ಕಂಪನಿಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಒದಗಿಸಲು ಗ್ರಾಚುಟಿ ಪಾವತಿ ಕಾಯ್ದೆ 1972 ನ್ನು ಜಾರಿಗೆ ತರಲಾಗಿದೆ. ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ನಿಮ್ಮ ಔದ್ಯೋಗಿಕ ಅನುಭವದ ಜತೆ ಲೆಕ್ಕ ಹಾಕಿ ಗ್ರಾಚ್ಯುಟಿ ನೀಡಲಾಗುತ್ತದೆ.

UAN -ಹಳೆ ಭವಿಷ್ಯನಿಧಿ ಖಾತೆಗಳ ವಿಲೀನ ಈಗ ಸಾಧ್ಯ, ಹೇಗೆ? UAN -ಹಳೆ ಭವಿಷ್ಯನಿಧಿ ಖಾತೆಗಳ ವಿಲೀನ ಈಗ ಸಾಧ್ಯ, ಹೇಗೆ?

ಗ್ರಾಚುಟಿ ಪಡೆದು ಉದ್ಯೋಗ ತೊರೆಯಬಹುದಾಗಿದೆ

ಗ್ರಾಚುಟಿ ಪಡೆದು ಉದ್ಯೋಗ ತೊರೆಯಬಹುದಾಗಿದೆ

ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಸಿಗುವ ಕೊಡುಗೆಗಳಲ್ಲಿ ಗ್ರಾಚುಟಿ ಕೂಡಾ ಒಂದಾಗಿದೆ. ಗ್ರಾಚುಟಿ ಅಧಿನಿಯಮದ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ 1 ತಿಂಗಳ ಒಳಗಾಗಿ ಕಡ್ಡಾಯವಾಗಿ ಗ್ರಾಚ್ಯುಟಿ ಹಣವನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ಉದ್ಯೋಗ ಬದಲಾಯಿಸಬೇಕಾಗುತ್ತದೆ. ಗ್ರಾಚುಟಿ ಪಡೆದು ಉದ್ಯೋಗ ತೊರೆಯಬಹುದಾಗಿದೆ.

ಕನಿಷ್ಟ 5 ವರ್ಷ ಕೆಲಸ ಮಾಡಿದಲ್ಲಿ ಗ್ರಾಚುಟಿ

ಕನಿಷ್ಟ 5 ವರ್ಷ ಕೆಲಸ ಮಾಡಿದಲ್ಲಿ ಗ್ರಾಚುಟಿ

ಕಾಯ್ದೆ ನಿಯಮದಂತೆ, 10 ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುವ ಸಂಸ್ಥೆಗಳಲ್ಲಿನ ಕಾರ್ಮಿಕರು ಕನಿಷ್ಟ 5 ವರ್ಷ ಕೆಲಸ ಮಾಡಿದಲ್ಲಿ ಗ್ರಾಚುಟಿ ಪಡೆಯಲು ಅರ್ಹರಾಗಿರುತ್ತಾರೆ. ಸೇವೆಯನ್ನು ಮಾಡುವ ಪ್ರತಿ ವರ್ಷಕ್ಕೆ 15 ದಿನಗಳ ವೇತನವನ್ನು ಗ್ರಾಚುಟಿ ಎಂದು ಲೆಕ್ಕಹಾಕಲಾಗುವುದು. 2010 ರಲ್ಲಿ ಗ್ರಾಚುಟಿ ಗರಿಷ್ಟ ಮೊತ್ತವನ್ನು 10 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಈಗ ಈ ಮೊತ್ತ 20ಲಕ್ಷ ರು ಗೇರಿದೆ

ಇಪಿಎಸ್ ಉದ್ಯೋಗಿಗಳ ಕನಿಷ್ಠ ಪಿಂಚಣಿ ಮೊತ್ತ ದುಪ್ಪಟ್ಟು ಸಾಧ್ಯತೆಇಪಿಎಸ್ ಉದ್ಯೋಗಿಗಳ ಕನಿಷ್ಠ ಪಿಂಚಣಿ ಮೊತ್ತ ದುಪ್ಪಟ್ಟು ಸಾಧ್ಯತೆ

English summary
The Labour ministry has sought comments and views from the industry on the impact of reduction in Gratuity tenure. Sources said that after holding consultations with industry and experts, a proposal regarding this will be placed before the central board of trustees.Government likely to reduce employee's Gratuity tenure from five to three years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X