ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 16ರಿಂದ ಚಿನ್ನದ ಬಾಂಡ್ ಯೋಜನೆ ಆರಂಭ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 15: ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಗಳ ಪೈಕಿ ಒಂದೆನಿಸಿರುವ ಚಿನ್ನದ ಬಾಂಡ್ ಯೋಜನೆಯ ಪ್ರಸಕ್ತ ಸಾಲಿನ ಮೊದಲ ಕಂತು ಏಪ್ರಿಲ್ 16 ರಿಂದ ಆರಂಭವಾಗಲಿದೆ.

ಏಪ್ರಿಲ್ 16 ರಿಂದ 20 ರ ವರೆಗೆ ಚಿನ್ನದ ಬಾಂಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೇ 4 ರಂದು ಬಾಂಡ್ ವಿತರಿಸಲಾಗುತ್ತದೆ. ಬ್ಯಾಂಕ್ ಗಳು, ಪೋಸ್ಟ್ ಆಫೀಸ್ ಮೊದಲಾದ ಕಡೆಗಳಲ್ಲಿ ಚಿನ್ನದ ಬಾಂಡ್ ವಿತರಿಸಲಾಗುತ್ತದೆ.

Government to launch this fiscals first tranche of gold bond on April 16

ಕನಿಷ್ಟ 1 ಗ್ರಾಂ ನಿಂದ ಗರಿಷ್ಠ 4 ಕೆ.ಜಿ. ವರೆಗೆ ಚಿನ್ನದ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದು. ಟ್ರಸ್ಟ್ ಗಳಿಗೆ 20 ಕೆ.ಜಿ. ವರೆಗೆ ಹೂಡಿಕೆಗೆ ಅವಕಾಶವಿದೆ. ಶೇ. 2.50 ಬಡ್ಡಿ ದರ ಇದ್ದು, ಬಾಂಡ್ ಅವಧಿ 8 ವರ್ಷವಾಗಿದೆ. 20,000 ರೂ.ವರೆಗೆ ನಗದು ರೂಪದಲ್ಲಿ ಬಾಂಡ್ ಮೌಲ್ಯ ಪಾವತಿಯನ್ನು ಪಡೆಯಬಹುದು.

ಭಾರತೀಯ ಚಿನ್ನ ಮತ್ತು ಆಭರಣ ಒಕ್ಕೂಟ 999 ಶುದ್ಧತೆಯ ಚಿನ್ನಕ್ಕೆ 1 ವಾರಕ್ಕೆ ನಿಗದಿಪಡಿಸುವ ಬೆಲೆ ಆಧರಿಸಿ, ಚಿನ್ನದ ಬಾಂಡ್ ಬೆಲೆಯನ್ನು ನಿಗದಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದಲ್ಲಿ ಶೇಕಡಾ 95ರಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 2016ರಲ್ಲಿ ಸುಮಾರು 120 ಟನ್ ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು. ಈ ನಡುವೆ ಸ್ಮಗ್ಲಲಿಂಗ್ ಮೂಲಕ ಬರುತ್ತಿರುವ ಚಿನ್ನದಿಂದ ಜಿಎಸ್ ಟಿ ಕೂಡಾ ಸಿಗುತ್ತಿಲ್ಲ. ಆರ್ಥಿಕ ಬೆಳವಣಿಗೆ ಹಾಗೂ ಪಾರದರ್ಶಕತೆ ಕಾರಣಕ್ಕೆ ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ, 2020ರ ವೇಳೆಗೆ ಭಾರತೀಯ ಗ್ರಾಹಕರು 850ರಿಂದ 950 ಟನ್ ಚಿನ್ನ ಖರೀದಿಸುವ ಸಾಧ್ಯತೆ ಇದೆ

English summary
The government today announced this fiscal's first tranche of sovereign gold bond (SGB) and its subscription will open on April 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X