ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?

By Mahesh
|
Google Oneindia Kannada News

ಬೆಂಗಳೂರು, ಜೂನ್ 20: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸದ್ಯಕ್ಕೆ ಇಳಿಸಲಾಗುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೇಳಿದಾಗಲೇ ಜನರಿಗೆ ಅಂದಾಜಾಗಬೇಕಿತ್ತು.

ಆದರೂ, ಜಿಎಸ್ಟಿ ವ್ಯಾಪ್ತಿಗೆ ಬಂದರೆ ಬೆಲೆ ತಗ್ಗಲಿದೆ ಎಂಬ ಆಶಾಭಾವ ಇನ್ನೂ ಸಾರ್ವಜನಿಕರಲ್ಲಿ ಸತ್ತಿರಲಿಲ್ಲ. ಆದರೆ, ಈಗ ಸರ್ಕಾರಿ ಮೂಲಗಳ ಪ್ರಕಾರ,ಪೆಟ್ರೋಲ್-ಡಿಸೇಲ್ ಮೇಲೆ ಜಿಎಸ್ಟಿ ಜಾರಿಗೆ ಬಂದ್ರೂ ಬೆಲೆ ಕಡಿಮೆಯಾಗುವುದಿಲ್ಲ ಎಂಬ ಆಘಾತಕಾರಿ ಸುದ್ದಿ ಸಿಕ್ಕಿದೆ.

ಜಿಎಸ್ಟಿ ಜಾರಿಯಾದರೆ ಪೆಟ್ರೋಲ್ ಬೆಲೆ ಎಷ್ಟಾಗಲಿದೆ?ಜಿಎಸ್ಟಿ ಜಾರಿಯಾದರೆ ಪೆಟ್ರೋಲ್ ಬೆಲೆ ಎಷ್ಟಾಗಲಿದೆ?

ಒಂದು ವೇಳೆ ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿಯಲ್ಲಿ ಬಂದ್ರೆ ಈಗ ಸರಾಸರಿ 78 ರು ನಷ್ಟಿರುವ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 38 ರೂಪಾಯಿಯಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿದೆ.

ಸಂಪೂರ್ಣ ಜಿಎಸ್ಟಿ ಜಾರಿ ಸಾಧ್ಯವಿಲ್ಲವೆ?
ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ.

ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

ಆದರೆ, ಈ ಎಲ್ಲಾ ಲೆಕ್ಕಾಚಾರ ಗರಿಷ್ಠ ಶೇ 18ರಷ್ಟು ತೆರಿಗೆ ವಿಧಿಸಿದರೆ ಬರುವ ಮೊತ್ತವಾಗಿದೆ. ಆದರೆ, ಜಿಎಸ್ಟಿ ವ್ಯಾಪಿಗೆ ಬಂದರೆ ಶೇ 5 ರಿಂದ ಶೇ 28ರಷ್ಟು ವಿಧಿಸಬಹುದಾಗಿದೆ. ಹೀಗಾಗಿ, ಶೇ 28ರಷ್ಟು ಜಿಎಸ್ಟಿ ಹೇರಿಕೆಯಾದರೆ ಜತೆಗೆ ಆಯಾ ರಾಜ್ಯಗಳ ಮಾರಾಟ ತೆರಿಗೆ, ಸೆಸ್ ಸೇರಿಸಿದರೆ ತೈಲ ಬೆಲೆ ಈಗಿನಷ್ಟೇ ಆಗಲಿದೆ.

ಉದಾಹರಣೆಗೆ ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಮೇಲೆ ವ್ಯಾಟ್ ಶೇ 27ರಷ್ಟಿದ್ದರೆ, ಡೀಸೆಲ್ ಮೇಲೆ 17.2ರು ಪ್ರತಿ ಲೀಟರ್ ಗೆ ಪಡೆಯಲಾಗುತ್ತಿದೆ. ಮುಂಬೈ, ಥಾಣೆ ಹಾಗೂ ನವೀ ಮುಂಬೈನಲ್ಲಿ ಈ ಪ್ರಮಾಣ ಶೇ 39.12ರಷ್ಟಿದೆ, ತೆಲಂಗಾಣದಲ್ಲಿ ಶೇ26ರಷ್ಟಿದೆ.

ಇನ್ನು ಅಬಕಾರಿ ಸುಂಕದ ಲೆಕ್ಕಾಚಾರ

ಇನ್ನು ಅಬಕಾರಿ ಸುಂಕದ ಲೆಕ್ಕಾಚಾರ

ಇನ್ನು ಅಬಕಾರಿ ಸುಂಕದ ಲೆಕ್ಕಾಚಾರ: ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.48ರು ನಷ್ಟಿದ್ದರೆ, ಡೀಸೆಲ್ ಮೇಲೆ 15.33ರು ಪ್ರತಿ ಲೀಟರ್ ಸುಂಕ ತೆರಬೇಕಾಗಿದೆ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಶೇ6ರಷ್ಟು ಮಾರಾಟ ತೆರಿಗೆ ಹಾಕಲಾಗುತ್ತಿದೆ. ಅಲ್ಲದೆ, ಇಂಧನ ಮೇಲಿನ ಅಬಕಾರಿ ಸುಂಕ ಇಳಿಸುವ ಗೋಜಿಗೆ ಕೇಂದ್ರ ಸರ್ಕಾರ ಹೋಗುತ್ತಿಲ್ಲ.

ಅಬಕಾರಿ, ಇಂಧನ ಮುಂತಾದ ಉತ್ಪನ್ನಗಳ ಮೇಲೆ ಸದ್ಯ ಜಿಎಸ್ಟಿ ಜಾರಿಯಾಗಿಲ್ಲ. ಜಿಎಸ್ಟಿ ಜಾರಿಗೆ ಬಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮಾನವಾಗಿ ತೆರಿಗೆ ವಿಧಿಸಲಿದೆ.

ಸದ್ಯ ವಾಹನ ಸವಾರರು ಪೆಟ್ರೋಲ್ ಗೆ ಶೇಕಡಾ 55.5 ಹಾಗೂ ಡಿಸೇಲ್ ಗೆ 47.3ರಷ್ಟು ತೆರಿಗೆ ನೀಡುತ್ತಾರೆ. ಇದ್ರಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರದ ತೆರಿಗೆ ಸುಂಕ ಹಾಗೂ ರಾಜ್ಯ ಸರ್ಕಾರಗಳ ವ್ಯಾಟ್, ಸೆಸ್ ಕೂಡಾ ಸೇರಿವೆ.

ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ

ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ

ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ. ಅದರಲ್ಲಿ ಶೇ 67.54ರಷ್ಟು ಕೇಂದ್ರ ಅಬಕಾರಿ ಸುಂಕ ಮತ್ತು ಶೇ 30ರಷ್ಟು ರಾಜ್ಯ ಮಾರಾಟ ತೆರಿಗೆ (ಕರ್ನಾಟಕದಲ್ಲಿ ಇಷ್ಟು) ಬೀಳುತ್ತಿದೆ. ಒಂದು ವೇಳೆ ಪೆಟ್ರೋಲ್- ಡೀಸೆಲ್ ಅನ್ನು ಜಿಎಸ್ ಟಿ ಕೆಳಗೆ ತಂದುಬಿಟ್ಟರೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಇದರಿಂದ ಬರುತ್ತಿರುವ ಆದಾಯ ಶೇ 50ರಷ್ಟು ಕುಸಿದು ಹೋಗುತ್ತದೆ. ಜಿಎಸ್ ಟಿ ಅಡಿಯಲ್ಲಿ ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಪ್ರವೇಶ ತೆರಿಗೆ ತೆಗೆದಿರುವುದರಿಂದ ಕರ್ನಾಟಕ ಸರಕಾರಕ್ಕೆ ಬರಬೇಕಾದ 200 ಕೋಟಿ ಆದಾಯ ತಪ್ಪಿದೆ.

ಶೇ 5, 12, 28 ಹೀಗೆ ನಾಲ್ಕು ವರ್ಗೀಕರಣವಿದೆ

ಶೇ 5, 12, 28 ಹೀಗೆ ನಾಲ್ಕು ವರ್ಗೀಕರಣವಿದೆ

ಶೇ 5, 12, 28 ಹೀಗೆ ನಾಲ್ಕು ವರ್ಗೀಕರಣವಿದೆ. ಶೇ 12ಕ್ಕಿಂತ ಕಡಿಮೆ ತೆರಿಗೆ ಅಡಿಯಲ್ಲಿ ಪೆಟ್ರೋಲ್-ಡೀಸೆಲ್ ತರಲು ಸಾಧ್ಯವಿಲ್ಲ. ಹಾಗೆ ಶೇ 12ರ ಲೆಕ್ಕ ಹಾಕಿದರೆ ದೆಹಲಿಯಲ್ಲಿನ ಪೆಟ್ರೋಲ್ ಬೆಲೆ ರು.38.1 ಆಗುತ್ತದೆ.

ಅಂದರೆ ಈಗಿನ ದರಕ್ಕಿಂತ ರು.32 ಕಡಿಮೆ. ಶೇ 18ರಷ್ಟಾದರೆ ರು.40.05, ಶೇ 28ರಷ್ಟು ವಿಧಿಸಿದರೆ ರು.43.44 ಆಗುತ್ತದೆ. ಇನ್ನು ಎಸ್ ಯುವಿ ವಾಹನಗಳಿಗೆ ವಿಧಿಸುವ ಸೆಸ್ ಸೇರಿಕೊಂದು ಶೇ 28ರಷ್ಟು ಜಿಎಸ್ ಟಿ ಹಾಕಿದರೂ ರು.50.91 ಆಗುತ್ತದೆ. ಆಗಲೂ ಈಗಿರುವ ಪೆಟ್ರೋಲ್ ದರಕ್ಕಿಂತ 20 ರುಪಾಯಿ ಕಡಿಮೆ ಆಗುತ್ತದೆ.

ಇನ್ನು ಡೀಸೆಲ್ ವಿಚಾರಕ್ಕೆ ಬಂದರೆ, ಶೇ 12ರಷ್ಟು ಜಿಎಸ್ ಟಿ ಹಾಕಿದರೆ 36.65 ರು ಆಗುತ್ತದೆ. ಶೇ 18ರ ಜಿಎಸ್ ಟಿಗೆ 38.61 ರು , ಶೇ 28ಕ್ಕೆ 48.88 ರು ಆಗುತ್ತದೆ. ಒಂದು ವೇಳೆ ಎಸ್ ಯುವಿ ಸೆಸ್ ಹಾಕಿದರೂ ದರ 49.08 ರು ಆಗುತ್ತದೆ. ಅಲ್ಲಿಗೂ ಸದ್ಯದ ದರಕ್ಕಿಂತ 9.64 ರು ಕಡಿಮೆಯಾಗುತ್ತದೆ.

English summary
A peak tax rate of 28 per cent plus states levying some amount of local sales tax or VAT on petrol and diesel is likely to be the tax structure when the two auto fuels are covered under the GST regime, a top government official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X