ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಿಸಿದ ಸರಕಾರ

|
Google Oneindia Kannada News

ಪಬ್ಲಿಕ್ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು 0.4ರಷ್ಟು ಹೆಚ್ಚಳ ಮಾಡಿ, ಗುರುವಾರ ಸರಕಾರ ಘೋಷಣೆ ಮಾಡಿದೆ. ಅಕ್ಟೋಬರ್-ಡಿಸೆಂಬರ್ ತ್ರೈ ಮಾಸಿಕಕ್ಕೆ ಇದು ಅನ್ವಯ ಆಗಲಿದೆ ಎಂದು ವಿತ್ತ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪರಿಷ್ಕೃತ ದರವು ಅಕ್ಟೋಬರ್ 1, 2018 ರಿಂದ ಡಿಸೆಂಬರ್ 31, 2018ಕ್ಕೆ ಅನ್ವಯ ಆಗುತ್ತದೆ ಎಂದು ಸರಕಾರ ತಿಳಿಸಿದೆ. ಸದ್ಯಕ್ಕೆ ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವು ತ್ರೈ ಮಾಸಿಕಕ್ಕೆ ಒಮ್ಮೆ ಪರಿಷ್ಕೃತವಾಗುತ್ತಿದೆ.

ನಿವೃತ್ತ ಜೀವನದ ಬಗ್ಗೆ ಯೋಚನೆಯೇ ಮಾಡದ ಭಾರತೀಯರು, ಇಲ್ಲಿದೆ ಲೆಕ್ಕಾಚಾರನಿವೃತ್ತ ಜೀವನದ ಬಗ್ಗೆ ಯೋಚನೆಯೇ ಮಾಡದ ಭಾರತೀಯರು, ಇಲ್ಲಿದೆ ಲೆಕ್ಕಾಚಾರ

* ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಹಾಗೂ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನ ಬಡ್ಡಿದರ ಸದ್ಯಕ್ಕೆ 7.6 ಇದ್ದು, ಶೇ 8ಕ್ಕೆ ಏರಿಕೆ ಆಗಲಿದೆ.

Government hiked small savings scheme interest rate

* ನಿಶ್ಚಿತ ಠೇವಣಿ ಹಾಗೂ ಆರ್ ಡಿ (ರೆಕರಿಂಗ್ ಡೆಪಾಸಿಟ್) ಖಾತೆಗೆ ಶೇ 6.9ರಿಂದ ಶೇ 7.8ರವರೆಗೆ ಬಡ್ಡಿ ದರ ದೊರೆಯಲಿದೆ.

* ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಡ್ಡಿ ದರವನ್ನು ಶೇ 8.7ಕ್ಕೆ ಏರಿಕೆ ಮಾಡಲಾಗುವುದು.

* 112 ತಿಂಗಳ ಕಿಸಾನ್ ವಿಕಾಸ್ ಪತ್ರಕ್ಕೆ 7.7% ಬಡ್ಡಿ ದೊರಯಲಿದೆ. ಸದ್ಯಕ್ಕೆ 118 ತಿಂಗಳಿಗೆ ಮೆಚ್ಯೂರ್ ಆಗುವುದಕ್ಕೆ 7.3% ಬಡ್ಡಿ ದೊರೆಯುತ್ತಿದೆ.

* ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡುವ ಹೂಡಿಕೆಗೆ ಇನ್ನು ಮುಂದೆ 8.5% ಬಡ್ಡಿ ದರ ಸಿಗಲಿದೆ.

* ಉಳಿತಾಯ ಖಾತೆ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದಕ್ಕೆ ವಾರ್ಷಿಕ 4% ಸಿಗಲಿದೆ.

English summary
The government on Thursday announced new interest rates on small savings schemes, including National Savings Certificate and Public Provident Fund. The interest rates for small savings schemes were hiked by up to 0.4 per cent for the October-December quarter, the Ministry of Finance said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X