ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಉದ್ಯೋಗಿಗಳಿಗೆ ಕ್ಲೌಡ್ ಸರ್ವಿಸ್, ವಿಪಿಎನ್ ಬಳಸದಂತೆ ನಿರ್ಬಂಧ

|
Google Oneindia Kannada News

ನವದೆಹಲಿ, ಜೂನ್ 18: ಥರ್ಡ್ ಪಾರ್ಟಿ ವಿಪಿಎನ್‌ಗಳು ತಮ್ಮ ಬಳಕೆದಾರರ ಮಾಹಿತಿಯನ್ನು ತಾನು ಕೇಳಿದಾಗ ಕೊಡಬೇಕು ಎಂದು ಸೂಚಿಸಿದ್ದ ಸರಕಾರ ಇದೀಗ ತನ್ನ ಉದ್ಯೋಗಿಗಳಿಗೆ ವಿಪಿಎನ್ ಬಳಸದಂತೆ ನಿರ್ಬಂಧಿಸಿದೆ.

ನಾರ್ಡ್, ಟೋರ್ ಇತ್ಯಾದಿ ಥರ್ಡ್ ಪಾರ್ಟಿ ವಿಪಿಎನ್ ಕಂಪನಿಗಳ ಸೇವೆಯನ್ನು ಬಳಸಬಾರದು ಎಂದು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಸರಕಾರದ ಸೈಬರ್ ಭದ್ರತಾ ವ್ಯವಸ್ಥೆ ಬಲಪಡಿಸಲು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

"ಗುತ್ತಿಗೆ ಆಧಾರಿತವಾಗಿರುವ ಅಥವಾ ತಾತ್ಕಾಲಿಕ ಸೇವೆಯಲ್ಲಿರುವವರೂ ಸೇರಿದಂತೆ ಎಲ್ಲಾ ಸರಕಾರಿ ನೌಕರರೂ ಈ ದಾಖಲೆಯಲ್ಲಿ ತಿಳಿಸಲಾಗಿರುವ ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕು. ಇದನ್ನು ಮೀರಿದರೆ ಅವರ ಇಲಾಖೆ ಮುಖ್ಯಸ್ಥರು ಮುಂದಿನ ಕ್ರಮಕ್ಕೆ ಹೊಣೆಗಾರರಾಗುತ್ತಾರೆ" ಎಂದು ತಿಳಿಸಲಾಗಿದೆ.

ನಿಮ್ಮ ರಹಸ್ಯ ದಾರಿ ಮೇಲೆ ಸರಕಾರದ ಚಿತ್ತ; ವಿಪಿಎನ್ ಸುದ್ದಿ ಸುತ್ತಮುತ್ತನಿಮ್ಮ ರಹಸ್ಯ ದಾರಿ ಮೇಲೆ ಸರಕಾರದ ಚಿತ್ತ; ವಿಪಿಎನ್ ಸುದ್ದಿ ಸುತ್ತಮುತ್ತ

"ದೇಶಾದ್ಯಂತ ಸರಕಾರಿ ಕಚೇರಿಗಳಲ್ಲಿ ಸಮಾನವಾಗಿ ಸೈಬರ್ ಸೆಕ್ಯೂರಿಟಿ ಮಾರ್ಗಸೂಚಿಗಳನ್ನು ಪಾಲಿಸದರೆ ಸರಕಾರದ ಭದ್ರತಾ ಧೋರಣೆ ಉತ್ತಮಗೊಳ್ಳಬಹುದು" ಎಂದು ಎನ್‌ಐಸಿ ಹೊರಡಿಸಿದ ನಿರ್ದೇಶನದಲ್ಲಿ ಹೇಳಲಾಗಿದೆ. ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್(NIC) ಹೊರಡಿಸಿರುವ ಮಾರ್ಗಸೂಚಿಯ ಕೆಲ ಪ್ರಮುಖ ಅಂಶಗಳು ಇಲ್ಲಿವೆ:

ಗೂಗಲ್ ಡ್ರೈವ್ ಬಳಸಬೇಡಿ

ಗೂಗಲ್ ಡ್ರೈವ್ ಬಳಸಬೇಡಿ

ನಾವು ಬಹುತೇಕರು ಗೂಗಲ್ ಡ್ರೈವ್, ಡ್ರಾಪ್ ಬಾಕ್ಸ್ ಇತ್ಯಾದಿ ಕ್ಲೌಡ್ ಸರ್ವಿಸ್ ಬಳಸಿಕೊಂಡು ಫೈಲ್‌ಗಳನ್ನು ಕಳುಹಿಸುತ್ತೇವೆ. ಅದರೆ, ಸರಕಾರಿ ಉದ್ಯೋಗಿಗಳು ಇನ್ಮುಂದೆ ಇಂಥ ಕ್ಲೌಡ್ ಸೇವೆ ಬಳಸುವಂತಿಲ್ಲ. ಈ ಮಾರ್ಗಸೂಚಿ ಪ್ರಕಾರ, ಸರಕಾರಿ ಉದ್ಯೋಗಿಗಳು ಸರಕಾರ ಸಂಬಂಧಿತ ಸೂಕ್ಷ್ಮ ದತ್ತಾಂಶ ಅಥವಾ ದಾಖಲೆಗಳನ್ನು ಸಂಗ್ರಹಿಸಲು, ವಿಲೇವಾರಿ ಮಾಡಲು ಗೂಗಲ್ ಡ್ರೈವ್, ಡ್ರಾಪ್ ಬಾಕ್ಸ್ ಇತ್ಯಾದಿ ಸರಕಾರೇತರ ಕ್ಲೌಡ್ ಸೇವೆಗಳನ್ನು ಬಳಸಬಾರದು ಎಂದು ತಿಳಿಸಲಾಗಿದೆ. ಸರಕಾರಿ ಉದ್ಯೋಗಿಗಳು ಇತರ ಕೆಲಸಗಳಿಗೆ ಈ ಖಾಸಗಿ ಕ್ಲೌಡ್ ಸರ್ವಿಸ್ ಬಳಸಿಕೊಳ್ಳಲು ಅಡ್ಡಿ ಇಲ್ಲ.

ಮೊಬೈಲ್ ರೂಟ್ ಬೇಡ

ಮೊಬೈಲ್ ರೂಟ್ ಬೇಡ

ಕೆಲ ಅನಧಿಕೃತ ಆ್ಯಪ್‌ಗಳನ್ನು ಹಾಕಲು ಅಥವಾ ಮೊಬೈಲ್‌ನ ಅಧಿಕೃತ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ತರಲು ಮೊಬೈಲ್‌ನ ರೂಟ್ ಮಾಡುತ್ತೇವೆ. ಅಂದರೆ ಮೊಬೈಲ್ ತಂತ್ರಾಂಶದಲ್ಲೇ ತುಸು ತಿದ್ದುಪಡಿ ಮಾಡುತ್ತೇವೆ. ಕೇಂದ್ರ ಐಟಿ ಸಚಿವಾಲಯದ ವ್ಯಾಪ್ತಿಗೆ ಬರುವ ಎನ್‌ಐಸಿ ತನ್ನ ಮಾರ್ಗಸೂಚಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದೆ. ಸರಕಾರಿ ಉದ್ಯೋಗಿಗಳು ತಮ್ಮ ಮೊಬೈಲ್ ಫೋನ್ ಅನ್ನು ರೂಟ್ ಮಾಡಬಾರದು ಎಂದು ತಿಳಿಸಿದೆ.

ಗೂಗಲ್‌ನ ಮೊಟ್ಟ ಮೊದಲ ತ್ವರಿತ ಮೆಸೇಜಿಂಗ್ ವೇದಿಕೆಗೆ ಗುಡ್ ಬೈಗೂಗಲ್‌ನ ಮೊಟ್ಟ ಮೊದಲ ತ್ವರಿತ ಮೆಸೇಜಿಂಗ್ ವೇದಿಕೆಗೆ ಗುಡ್ ಬೈ

ಕ್ಯಾಮ್ ಸ್ಕ್ಯಾನರ್ ಬೇಡ

ಕ್ಯಾಮ್ ಸ್ಕ್ಯಾನರ್ ಬೇಡ

ಫೈಲ್‌ಗಳನ್ನು ಸ್ಕ್ಯಾನ್ ಮಾಡಲು ಕ್ಯಾಮ್ ಸ್ಕ್ಯಾನರ್ ಆ್ಯಪ್ ಹೆಚ್ಚಾಗಿ ಬಳಕೆಯಾಗುತ್ತಿತ್ತು. 2020ರಲ್ಲಿ ಕೇಂದ್ರ ಸರಕಾರ ಭದ್ರತಾ ಅಪಾಯದ ಕಾರಣದಿಂದ ಕ್ಯಾಮ್ ಸ್ಕ್ಯಾನರ್ ಸೇರಿದಂತೆ ಹಲವು ಚೀನೀ ಆ್ಯಪ್‌ಗಳನ್ನು ನಿಷೇಧಿಸಿತ್ತು. ಈಗ ಎನ್‌ಐಸಿ ಮಾರ್ಗಸೂಚಿ ಪ್ರಕಾರ, ಸರಕಾರಿ ಉದ್ಯೋಗಿಗಳು ಸರಕಾರದ ಆಂತರಿಕ ದಾಖಲೆಗಳನ್ನು ಸ್ಕ್ಯಾನ್ ಮಾಡಲು ಕ್ಯಾಮ್ ಸ್ಕ್ಯಾನರ್‌ನಂಥ ಬಾಹ್ಯ ಆ್ಯಪ್‌ಗಳನ್ನು ಬಳಸಬಾರದು ಎಂದು ಸೂಚಿಸಿದೆ.

ವಿಪಿಎನ್‌ಗಳಿಗೆ ಸೂಚನೆ

ವಿಪಿಎನ್‌ಗಳಿಗೆ ಸೂಚನೆ

ಭಾರತದ ಸೈಬರ್ ಸೆಕ್ಯೂರಿಟಿ ಸಂಸ್ಥೆಯಾದ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸೆರ್ಟ್-ಇನ್) ಏಪ್ರಿಲ್ 28ರಂದು ಭಾರತದಲ್ಲಿ ಕಾರ್ಯನಿರ್ವಹಿಸುವ ವಿಪಿಎನ್ ಕಂಪನಿಗಳಿಗೆ ಒಂದು ನಿರ್ದೇಶನ ಹೊರಡಿಸಿತ್ತು. ವಿಪಿಎನ್ ಸೇವೆ ನೀಡುವ ಕಂಪನಿಗಳು ತಮ್ಮ ಬಳಕೆದಾರರ ಹೆಸರು, ವಿಳಾಸ, ಅವರು ವಿಪಿಎನ್ ಬಳಸುವ ಉದ್ದೇಶ ಇತ್ಯಾದಿ ವಿವರವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸೆರ್ಟ್ ಇನ್ ತನ್ನ ನಿರ್ದೇಶನದಲ್ಲಿ ತಿಳಿಸಿತ್ತು.

ವಿಪಿಎನ್ ಯಾಕೆ ಬಳಸುತ್ತಾರೆ?

ವಿಪಿಎನ್ ಯಾಕೆ ಬಳಸುತ್ತಾರೆ?

ಭಾರತದಲ್ಲಿ ನಿಷೇಧವಾಗಿರುವ ಜಾಲತಾಣಗಳನ್ನು ವೀಕ್ಷಿಸಲು ಜನರು ಸಾಮಾನ್ಯವಾಗಿ ವಿಪಿಎನ್ ಸೇವೆಗಳನ್ನು ಬಳಸುತ್ತಾರೆ. ವಿಪಿಎನ್ ಬಳಸಿದರೆ ಜನರು ಎಲ್ಲಿಂದ ಲಾಗಿನ್ ಆಗಿದ್ದು ಎಂಬುದು ಗೌಪ್ಯವಾಗಿ ಉಳಿಯುತ್ತದೆ. ವಿದೇಶಗಳಲ್ಲಿರುವ ಸರ್ವರ್‌ಗಳ ಮೂಲಕ ಲಾಗಿನ್ ಆಗುವುದರಿಂದ ಭಾರತದಲ್ಲಿ ನಿಷೇಧಿತವಾಗಿರುವ ಆ್ಯಪ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
NIC has given guidelines consisting of directives for government employees on how to use internet. It has barrd them from using VPNs, Cloud services like Google Drive, Drop box etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X