ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಪಿಎಫ್ ಮೇಲಿನ ಬಡ್ಡಿ ಕಡಿತಕ್ಕೆ ಸರ್ಕಾರ ಅನುಮೋದನೆ

|
Google Oneindia Kannada News

ನವದೆಹಲಿ, ಜೂನ್ 3: 2021-22ನೇ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಶುಕ್ರವಾರ ಅನುಮೋದನೆ ನೀಡಿದೆ.

ಸರ್ಕಾರದ ಅನುಮೋದನೆಯಿಂದ ಇಪಿಎಫ್ ಮೇಲಿನ ಬಡ್ಡಿದರವನ್ನು 40 ವರ್ಷಗಳ ಕನಿಷ್ಟ 8.1 % ಪ್ರತಿಶತಕ್ಕೆ ಕಡಿಮೆಯಾಗಲಿದೆ.

ಆದಾಯ ತೆರಿಗೆ ಅಲರ್ಟ್: ಏ.1ರಿಂದ ಈ ನಿಯಮಗಳು ಬದಲಾವಣೆಆದಾಯ ತೆರಿಗೆ ಅಲರ್ಟ್: ಏ.1ರಿಂದ ಈ ನಿಯಮಗಳು ಬದಲಾವಣೆ

40 ವರ್ಷಗಳಲ್ಲಿ ಅತ್ಯಂತ ಕಡಿಮೆ: FY22 ಗಾಗಿ ಇಪಿಎಫ್ ಬಡ್ಡಿ ದರವನ್ನು 8.1% ಕ್ಕೆ ಇಳಿಸಲು ಸರ್ಕಾರ ಅನುಮೋದನೆ ನೀಡಿದೆ. 1977-78ರಲ್ಲಿ ಇಪಿಎಫ್ ಮೇಲಿನ ಬಡ್ಡಿದರ 8% ಇದ್ದಿದ್ದು ಕನಿಷ್ಟವಾಗಿತ್ತು.

Government Approves Reduce Interest Rate On EPF For FY 2021-22

2022ರ ಮಾರ್ಚ್‌ನಲ್ಲಿ, ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ 6.4 ಕೋಟಿ ಚಂದಾದಾರರಿಗೆ ನಿವೃತ್ತಿ ಉಳಿತಾಯದ ಮೇಲಿನ ಬಡ್ಡಿ ದರವನ್ನು ಶೇಕಡಾ 8.5 ರಿಂದ 8.1 ಕ್ಕೆ ಇಳಿಸಲು ಪ್ರಸ್ತಾಪಿಸಿತ್ತು.

ರೆಪೋ ಏರಿಕೆ: ಭಾರತದಲ್ಲಿ ಗೃಹ, ಕಾರು, ವೈಯಕ್ತಿಕ ಸಾಲದ ಇಎಂಐ ಹೆಚ್ಚಳ ರೆಪೋ ಏರಿಕೆ: ಭಾರತದಲ್ಲಿ ಗೃಹ, ಕಾರು, ವೈಯಕ್ತಿಕ ಸಾಲದ ಇಎಂಐ ಹೆಚ್ಚಳ

ಉಕ್ರೇನ್ ಯುದ್ಧ ಮತ್ತು ಯುಎಸ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಿತ್ತೀಯ ನೀತಿ ಬಿಗಿಗೊಳಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಇತ್ತೀಚಿನ ವಾರಗಳಲ್ಲಿ ಹೊಡೆತವನ್ನು ಪಡೆದಿರುವ ಷೇರು ಮಾರುಕಟ್ಟೆಗಳ ಕಾರಣದಿಂದಾಗಿ ಬಡ್ಡಿ ಪಾವತಿಗಳು ಹೆಚ್ಚಿವೆ ಎಂದು ಸರ್ಕಾರ ಹೇಳಿತ್ತು.

ಮಾರ್ಚ್ 2020 ರಲ್ಲಿ, ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2018-19 ರಲ್ಲಿ ಶೇಕಡಾ 8.65 ರಿಂದ 2019-20 ಕ್ಕೆ ಏಳು ವರ್ಷಗಳ ಕನಿಷ್ಠ ಶೇಕಡಾ 8.5 ಕ್ಕೆ ಇಳಿಸಿತ್ತು.

Government Approves Reduce Interest Rate On EPF For FY 2021-22

2016-17ರಲ್ಲಿ ತನ್ನ 5 ಕೋಟಿ ಚಂದಾದಾರರಿಗೆ 8.65% ಮತ್ತು 2017-18ರಲ್ಲಿ 8.55% ಬಡ್ಡಿಯನ್ನು ನೀಡಿದೆ. 2015-16ರಲ್ಲಿ ಬಡ್ಡಿ ದರವು ಶೇಕಡ 8.8 ರಷ್ಟಿತ್ತು.

ಮಾರ್ಚ್‌ನಲ್ಲಿ ಗುವಾಹಟಿಯಲ್ಲಿ ನಡೆದ ಇಪಿಎಫ್‌ಒ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು, ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ 6.4 ಕೋಟಿ ಚಂದಾದಾರರಿಗೆ ನಿವೃತ್ತಿ ಉಳಿತಾಯದ ಮೇಲಿನ ಬಡ್ಡಿ ದರವನ್ನು ಶೇಕಡಾ 8.5 ರಿಂದ 8.1 ಕ್ಕೆ ಇಳಿಸಲು ಪ್ರಸ್ತಾಪಿಸಿತ್ತು.

ಹಣಕಾಸು ಸಚಿವಾಲಯವು ಮಂಡಳಿಯ ನಿರ್ಧಾರವನ್ನು ಅನುಮೋದಿಸಿದ್ದು. ಇಪಿಎಫ್‌ಒ ತನ್ನ ಕ್ಷೇತ್ರ ಕಚೇರಿಗಳಿಗೆ 2021-22 ರ ಹೊಸ ದರದಲ್ಲಿ 8.1 ಶೇಕಡಾ ಬಡ್ಡಿ ಆದಾಯವನ್ನು ಚಂದಾದಾರರ ಖಾತೆಗಳಿಗೆ ಹಾಕಲು ನಿರ್ದೇಶನ ನೀಡಲಿದೆ.

English summary
The Ministry of Labor and Employment on Friday approved a reduction in the interest rate on the Employee Provident Fund (EPF) for the financial year 2021-22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X