ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಸಾರ್ವಜನಿಕ ವಲಯದ ಮೂರು ಪ್ರಮುಖ ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ವ್ಯವಸ್ಥೆಯನ್ನು ನಿರ್ಮಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ಅದು ತೀರ್ಮಾನಿಸಿದೆ.

ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಶುದ್ಧೀಕರಿಸುವ ಪ್ರಯತ್ನದ ಭಾಗವಾಗಿ ಈ ಯೋಜನೆಗೆ ಕೇಂದ್ರ ಮುಂದಾಗಿದೆ.

 ಅತಿ ಆಶಾವಾದಿ ಬ್ಯಾಂಕ್‌ಗಳೇ ಕೆಟ್ಟ ಸಾಲಕ್ಕೆ ಹೊಣೆಗಾರರು: ರಘುರಾಂ ರಾಜನ್ ಅತಿ ಆಶಾವಾದಿ ಬ್ಯಾಂಕ್‌ಗಳೇ ಕೆಟ್ಟ ಸಾಲಕ್ಕೆ ಹೊಣೆಗಾರರು: ರಘುರಾಂ ರಾಜನ್

2017ರಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್ ಮತ್ತು ಅದರ ಸಹವರ್ತಿ ಬ್ಯಾಂಕುಗಳನ್ನು ವಿಲೀನ ಮಾಡಲಾಗಿತ್ತು.

ಬ್ಯಾಂಕುಗಳಿಗೆ ಬಲ

ಬ್ಯಾಂಕುಗಳಿಗೆ ಬಲ

ವಿಲೀನ ಪ್ರಕ್ರಿಯೆಯು ಬ್ಯಾಂಕುಗಳನ್ನು ಬಲಪಡಿಸಲು ಮತ್ತು ಸುಸ್ಥಿರಗೊಳಿಸಲು ಹಾಗೂ ಅವುಗಳ ಸಾಲ ನೀಡಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಈ ಪ್ರಸ್ತಾವವನ್ನು ಮೂರೂ ಬ್ಯಾಂಕುಗಳ ಮಂಡಳಿಗಳು ಪ್ರತ್ಯೇಕವಾಗಿ ಒಪ್ಪಿಕೊಂಡ ಬಳಿಕವೇ ಇದು ಜಾರಿಗೆ ಬರಲಿದೆ.

 ಹರಿದ ನೋಟು ಬದಲಾವಣೆಗೆ ಹೊಸ ನಿಯಮ ಬಿಡುಗಡೆ ಮಾಡಿದ ಆರ್‌ಬಿಐ ಹರಿದ ನೋಟು ಬದಲಾವಣೆಗೆ ಹೊಸ ನಿಯಮ ಬಿಡುಗಡೆ ಮಾಡಿದ ಆರ್‌ಬಿಐ

ಬಿಕ್ಕಟ್ಟಿನಲ್ಲಿ ಬ್ಯಾಂಕುಗಳು

ಬಿಕ್ಕಟ್ಟಿನಲ್ಲಿ ಬ್ಯಾಂಕುಗಳು

ವಿಲೀನ ಯೋಜನೆಗೆ ಸ್ಪಷ್ಟನೆ ನೀಡಿದ ಜೇಟ್ಲಿ, ಬ್ಯಾಂಕ್ ಸಾಲ ನೀಡಿಕೆ ಸಾಮರ್ಥ್ಯ ದುರ್ಬಲವಾಗಿದ್ದು, ಕಾರ್ಪೊರೇಟ್ ವಲಯದ ಹೂಡಿಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮಿತಿ ಮೀರಿದ ಸಾಲದಿಂದಾಗಿ ಮತ್ತು ಎನ್‌ಪಿಎಗಳ ಹೆಚ್ಚಳದಿಂದ ಅನೇಕ ಬ್ಯಾಂಕುಗಳು ಬಿಕ್ಕಟ್ಟಿನ ಸ್ಥಿತಿಗೆ ತಲುಪಿವೆ ಎಂದು ಹೇಳಿದ್ದಾರೆ.

ಈ ವಿಲೀನ ಯೋಜನೆಯು ಬ್ಯಾಕಿಂಗ್ ಕಾರ್ಯಾಚರಣೆಗಳನ್ನು ಹೆಚ್ಚಿಸಲಿದೆ. ಯಾವ ಉದ್ಯೋಗಿಯೂ ಯಾವುದೇ ಸೇವಾ ಸಮಸ್ಯೆಗಳಿಗೆ ಒಳಗಾಗುವುದಿಲ್ಲ. ಎಲ್ಲರಿಗೂ ಅತ್ಯುತ್ತಮ ಸೇವಾ ಸೌಲಭ್ಯಗಳು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

 ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್

ಬ್ಯಾಂಕುಗಳ ಮಂಡಳಿ ಸಭೆ

ಬ್ಯಾಂಕುಗಳ ಮಂಡಳಿ ಸಭೆ

ಬ್ಯಾಂಕುಗಳ ಮಂಡಳಿಯು ವಿಲೀನ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶಿಯನ್ನು ರೂಪಿಸಲು ಸಭೆ ಸೇರಲಿವೆ.

ಮೂರು ಬ್ಯಾಂಕುಗಳ ಮಂಡಳಿಗಳು ವಿಲೀನ ಪ್ರಸ್ತಾವವನ್ನು ಪರಿಶೀಲಿಸಲಿವೆ. ವಿಲೀನವು ಕಾರ್ಯಾಚರಣೆಯ ದಕ್ಷತೆಯನ್ನು ಮತ್ತು ಗ್ರಾಹಕರ ಸೇವೆಯನ್ನು ಸುಧಾರಿಸಲು ನೆರವಾಗಲಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ.

ಇದರಿಂದ ದೇಶದಲ್ಲಿ ಮೂರನೇ ಅತಿದೊಡ್ಡ ಬ್ಯಾಂಕ್ ಸೃಷ್ಟಿಯಾಗಲಿದೆ. ವಿಲೀನಗೊಂಡ ಬ್ಯಾಂಕುಗಳಿಗೆ ನೆರವು ನೀಡುವುದನ್ನು ಕೇಂದ್ರ ಸರ್ಕಾರ ಮುಂದುವರಿಸಲಿದೆ.

ಬ್ಯಾಂಕುಗಳ 'ಲೆಕ್ಕಾಚಾರ'

ಬ್ಯಾಂಕುಗಳ 'ಲೆಕ್ಕಾಚಾರ'

ಬ್ಯಾಂಕ್ ಆಫ್ ಬರೋಡಾ 10.29 ಲಕ್ಷ ಕೋಟಿ ರೂ ವಹಿವಾಟು ನಡೆಸುತ್ತಿದ್ದರೆ, ವಿಜಯಾ ಬ್ಯಾಂಕ್ 2.79 ಲಕ್ಷ ಕೋಟಿ ಮತ್ತು ದೇನಾ ಬ್ಯಾಂಕ್ 1.72 ಲಕ್ಷ ಕೋಟಿ ರೂ ವಹಿವಾಟು ನಡೆಸುತ್ತಿವೆ. ಇವುಗಳ ವಿಲೀನದಿಂದ 14.82 ಲಕ್ಷ ಕೋಟಿ ರೂ ವಹಿವಾಟು ಒಂದೇ ಬ್ಯಾಂಕ್‌ನಲ್ಲಿ ನಡೆಯಲಿದೆ.

ಬ್ಯಾಂಕ್ ಆಫ್ ಬರೋಡಾದಲ್ಲಿ 56,361, ವಿಜಯಾ ಬ್ಯಾಂಕ್‌ನಲ್ಲಿ 15,874 ಮತ್ತು ದೇನಾ ಬ್ಯಾಂಕ್‌ನಲ್ಲಿ 13,440 ಉದ್ಯೋಗಿಗಳಿದ್ದು, ಮೂರೂ ಬ್ಯಾಂಕುಗಳಿಂದ ಒಟ್ಟು 85,675 ಉದ್ಯೋಗಿಗಳು ಒಂದು ಬ್ಯಾಂಕ್‌ಅಡಿ ಬರಲಿದ್ದಾರೆ.

ಮೂರೂ ಬ್ಯಾಂಕುಗಳ ವಿಲೀನದಿಂದ ಒಟ್ಟು 9,489 ಶಾಖೆಗಳು ಒಂದುಗೂಡಲಿವೆ.

ಬ್ಯಾಂಕ್ ಆಫ್ ಬರೋಡಾ ದೇಶದಾದ್ಯಂತ ವಿಸ್ತ್ರೃತ ಜಾಲ ಹೊಂದಿದ್ದರೆ, ದೇನಾ ಮತ್ತು ವಿಜಯಾ ಬ್ಯಾಂಕ್‌ಗಳು ಪ್ರಾದೇಶಿಕ ಮಟ್ಟದಲ್ಲಿ ಹೆಚ್ಚು ಕೇಂದ್ರೀಕರಿಸಿವೆ.

ವಿಲೀನಗೊಂಡ ಬ್ಯಾಂಕುಗಳು 6.4 ಲಕ್ಷ ಕೋಟಿ ರೂ. ಅಡ್ವಾನ್ಸ್ ಬೇಸ್ ಹೊಂದಿರಲಿವೆ. 8.41 ಲಕ್ಷ ಕೋಟಿ ರೂ ಠೇವಣಿ ಮೂಲ ಹೊಂದಲಿವೆ.

ಮೂರು ಬ್ಯಾಂಕುಗಳ ಸ್ಥಿತಿಗತಿ

ಮೂರು ಬ್ಯಾಂಕುಗಳ ಸ್ಥಿತಿಗತಿ

1938ರಲ್ಲಿ ಮುಂಬೈನಲ್ಲಿ ಆರಂಭವಾದ ದೇನಾ ಬ್ಯಾಂಕ್, ಪ್ರಸ್ತುತ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಅಡಿಯಲ್ಲಿದ್ದು, ಇನ್ನು ಸಾಲ ಕೊಡುವುದರ ಮೇಲೆ ಅದಕ್ಕೆ ನಿರ್ಬಂಧ ಹೇರಲಾಗಿದೆ. ಅದರ ಒಟ್ಟಾರೆ ಎನ್‌ಪಿಎ ಅನುಪಾತ ಶೇ 22ರಷ್ಟಿದ್ದು, ಬ್ಯಾಂಕಿಂಗ್ ಉದ್ಯಮದಲ್ಲಿಯೇ ಅತ್ಯಧಿಕವಾಗಿದೆ.

1931ರಲ್ಲಿ ಮಂಗಳೂರಿನಲ್ಲಿ ಆರಂಭವಾದ ವಿಜಯಾ ಬ್ಯಾಂಕ್ ಶೇ 6.9 ಎನ್‌ಪಿಎ ಅನುಪಾತದೊಂದಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಉತ್ತಮ ಸಾಧನೆ ಮಾಡಿದೆ.

ಈ ಮೂರು ಬ್ಯಾಂಕುಗಳಲ್ಲಿಯೇ ಅತ್ಯಂತ ದೊಡ್ಡದಾದ ಬ್ಯಾಂಕ್ ಆಫ್ ಬರೋಡಾ, ಶೇ 12.4 ಕೆಟ್ಟ ಸಾಲದ ಅನುಪಾತ ಹೊಂದಿದೆ.

English summary
Indian government announces merging Bank of Baroda, Dena bank and Vijaya Bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X