ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ : ವಿಶ್ವ ಶ್ರೇಷ್ಠ ಬಹುರಾಷ್ಟ್ರೀಯ ಕಂಪನಿ

By Mahesh
|
Google Oneindia Kannada News

ನ್ಯೂಯಾರ್ಕ್, ಅ.25: ಇಂಟರ್ನೆಟ್ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಗೂಗಲ್ ವಿಶ್ವದ ಶ್ರೇಷ್ಠ ಬಹುರಾಷ್ಟ್ರೀಯ ಕಂಪನಿಯಾಗಿ ಹೊರ ಹೊಮ್ಮಿದೆ. ಗೂಗಲ್ ನಂತರದ ಸ್ಥಾನದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಸಂಸ್ಥೆ SAS ಇನ್ಸ್ಟಿಟ್ಯೂಟ್ ಹಾಗೂ NetApp ಸಂಸ್ಥೆ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿವೆ.

ಸಾಫ್ಟ್ ವೇರ್ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ನಾಲ್ಕನೇ ಸ್ಥಾನ ಪಡೆದಿದೆ. ಮಾನವ ಸಂಪನ್ಮೂಲ ಸಂಸ್ಥೆ ಗ್ರೇಟ್ ಪ್ಲೇಸ್ ಟು ವರ್ಕ್ ಇನ್ಸ್ಟಿಟ್ಯೂಟ್ ನಡೆಸಿದ ಸಮೀಕ್ಷೆಯಲ್ಲಿ 25 ಸಂಸ್ಥೆಗಳನ್ನು ಗುರುತಿಸಲಾಗಿದೆ.

ಉಳಿದಂತೆ ಟಾಪ್ 10 ಪಟ್ಟಿಯಲ್ಲಿ ಡಬ್ಲ್ಯೂ ಎಲ್ ಗೋರ್ ಅಂಡ್ ಅಸೋಸಿಯೇಟ್ಸ್ 5ನೇ ಸ್ಥಾನ, ಕಿಂಬರ್ಲಿ ಕ್ಲಾರ್ಕ್ (6), ಮಾರಿಯೊಟ್(7), ಗ್ರಾಹಕ ಸರಕು ಸಾಗಣೆ ಸಂಸ್ಥೆ ಡಿಯಾಜಿಯೋ(8),ನ್ಯಾಷನಲ್ ಇನ್ಸ್ಟ್ರೂಮೆಂಟ್ಸ್ (9) ಹಾಗೂ ಐಟಿ ಸಂಸ್ಥೆ ಸಿಸ್ಕೋ (10) ಕಾಣಿಸಿಕೊಂಡಿದೆ.

Google world's best multinational company to work for: survey

ಲಂಡನ್ ಮೂಲದ ಡಿಯಾಜಿಯೋ ಹೊರತು ಪಡೆಸಿದರೆ ಎಲ್ಲಾ ಟಾಪ್ ಸ್ಥಾನಗಳು ಯುಎಸ್ ಕಂಪನಿಗಳ ಪಾಲಾಗಿದ್ದು, ಏಷ್ಯನ್ ಕಂಪನಿಗಳು ಟಾಪ್ 10 ಪಟ್ಟಿಯಿಂದ ಹೊರಗುಳಿದಿವೆ.

ವಿಶ್ವದ ಶ್ರೇಷ್ಠ ಕಂಪನಿಗಳ ಸ್ಪರ್ಧೆಯಲ್ಲಿ ಸುಮಾರು 45 ರಾಷ್ಟ್ರಗಳ 6000ಕ್ಕೂ ಅಧಿಕ ಕಂಪನಿಗಳು ಪಾಲ್ಗೊಂಡಿದ್ದವು. ಈ ಸಮೀಕ್ಷೆಯಲ್ಲಿ ವಿಶ್ವದ ಶ್ರೇಷ್ಠ 25 ಸಂಸ್ಥೆಗಳನ್ನು ಹೆಸರಿಸಲಾಗಿದೆ.

ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿ ಆಟೋಡೆಸ್ಕ್, 12ನೇ ಸ್ಥಾನದಲ್ಲಿ ಮಾನ್ಸಾಂಟೋ, 13ನೇ ಸ್ಥಾನದಲ್ಲಿ ಬಿಬಿವಿಎ, 14ನೇ ಸ್ಥಾನದಲ್ಲಿ ಅಮೆರಿಕನ್ ಎಕ್ಸ್ ಪ್ರೆಸ್, 15ನೇ ಸ್ಥಾನದಲ್ಲಿ ಹಿಲ್ಟಿ, 16ನೇ ಸ್ಥಾನದಲ್ಲಿ ಟೆಲಿಫೋನಿಕಾ, 17ನೇ ಸ್ಥಾನದಲ್ಲಿ ಅಕೊರ್ (accor), 18ನೇ ಸ್ಥಾನದಲ್ಲಿ ಕ್ವಿಂಟಿಲೆಸ್, 19ನೇಸ್ಥಾನದಲ್ಲಿ ಎಸ್ ಸಿ ಜಾನ್ಸನ್, 20ನೇ ಸ್ಥಾನದಲ್ಲಿ ಫೆಡ್ ಎಕ್ಸ್ ಎಕ್ಸ್ ಪ್ರೆಸ್, 21ನೇ ಸ್ಥಾನದಲ್ಲಿ ಅಟೆಂಟೋ, 22ನೇ ಸ್ಥಾನದಲ್ಲಿ ಮಾರ್ಸ್, 23ನೇ ಸ್ಥಾನದಲ್ಲಿ ಮೆಕ್ ಡೋನಾಲ್ಡ್ಸ್, 24ನೇ ಸ್ಥಾನದಲ್ಲಿ ಕೋಕಾ ಕೋಲಾ ಹಾಗೂ 25ನೇ ಸ್ಥಾನದಲ್ಲಿ ನೊವಾರ್ಟಿಸ್ ಸಂಸ್ಥೆ ಇದೆ. ಒಟ್ಟಾರೆ, ಎಲ್ಲಾ ಕಂಪನಿಗಳು ಸೇರಿ 11.9 ಮಿಲಿಯನ್ ಉದ್ಯೋಗಿಗಳನ್ನು ಹೊಂದಿವೆ.

ವಿಶ್ವದಾದ್ಯಂತ ತನ್ನ ಜಾಲ, 5000ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಶೇ 40ಕ್ಕೂ ಅಧಿಕ ಉದ್ಯೋಗಿಗಳನ್ನು ಮೂಲ ದೇಶದಿಂದ ಹೊರ ದೇಶದಲ್ಲಿ ಹೊಂದಿರುವ ಸಂಸ್ಥೆಗಳನ್ನು ಸಮೀಕ್ಷೆಗೆ ಅಯ್ಕೆ ಮಾಡಲಾಗಿತ್ತು. (ಪಿಟಿಐ)

English summary
Internet giant Google has emerged as the world's best multinational company to work for, followed by software developer SAS Institute and network storage provider NetApp in the second and third place, respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X