ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಧರಿಸಿ, ಜೀವ ಉಳಿಸಿ: ಗೂಗಲ್ ಡೂಡಲ್ ಮನವಿ

|
Google Oneindia Kannada News

ನವದೆಹಲಿ, ಏಪ್ರಿಲ್ 6: ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿರುವುದರಿಂದ ಮಾಸ್ಕ್ ಧರಿಸುವುದು, ಕೈಗಳನ್ನು ತೊಳೆಯುವುದು ಮತ್ತು ಸಾಮಾಜಿಕ ಅಂತರರ ಕಾಪಾಡಿಕೊಳ್ಳುವುದರ ಮಹತ್ವವನ್ನು ಸಾರುವ ವಿಚಾರವನ್ನು ಗೂಗಲ್ ತನ್ನ ಹೊಸ ಡೂಡಲ್ ಮೂಲಕ ನೀಡಿದೆ.

ಪ್ರತಿ ವಿಶೇಷ ದಿನ, ಸಂದರ್ಭಗಳಲ್ಲಿ ಗೂಗಲ್ ವಿಶಿಷ್ಟ ರೀತಿಯ ಡೂಡಲ್ ಸಂದೇಶಗಳನ್ನು ನೀಡುತ್ತದೆ. ಮಂಗಳವಾರ ಗೂಗಲ್ ಡೂಡಲ್‌ನ ಅನಿಮೇಷನ್ ವಿಡಿಯೋ ಗಮನ ಸೆಳೆಯುವಂತಿದೆ. ಇಲ್ಲಿ 'ಗೂಗಲ್‌'ನ ಎಲ್ಲ ಅಕ್ಷರಗಳೂ ಮಾಸ್ಕ್ ಧರಿಸಿಕೊಂಡಿವೆ. ಎಲ್ ಅಕ್ಷರವು ಲಸಿಕೆ ಸಿರಿಂಜ್ ಆಕಾರ ತಳೆದಿದೆ.

ಕನ್ನಡಿಗ, ಬಾಹ್ಯಾಕಾಶ ವಿಜ್ಞಾನಿ ಯು.ಆರ್‌.ರಾವ್‌ಗೆ ಗೂಗಲ್ ಗೌರವಕನ್ನಡಿಗ, ಬಾಹ್ಯಾಕಾಶ ವಿಜ್ಞಾನಿ ಯು.ಆರ್‌.ರಾವ್‌ಗೆ ಗೂಗಲ್ ಗೌರವ

ಡೂಡಲ್‌ನ ಮೇಲೆ ಮೌಸ್ ಕರ್ಸರ್ ಇರಿಸಿದರೆ, 'ಮಾಸ್ಕ್‌ಗಳು ಈಗಲೂ ಬಹಳ ಮುಖ್ಯ. ಮಾಸ್ಕ್ ಧರಿಸಿ ಜೀವಗಳನ್ನು ಉಳಿಸಿ' ಎಂಬ ಸಂದೇಶ ಮೂಡುತ್ತದೆ. ಡೂಡಲ್ ಮೇಲೆ ಕ್ಲಿಕ್ ಮಾಡಿದರೆ ಅದು ಕೋವಿಡ್ ತಡೆಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ವಿವರಗಳಿರುವ ಪುಟವನ್ನು ತೆರೆಯುತ್ತದೆ.

Google Urges People To Wear Masks And Follow Covid Prevention Measures In New Doodle

ಈ ಪುಟ ಕೂಡ ಕೊರೊನಾ ವೈರಸ್ ತಡೆಗೆ ಅನುಸರಿಸುವ ಕ್ರಮಗಳನ್ನು ತಿಳಿಸುತ್ತದೆ. 'ಆಗಾಗ್ಗೆ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ. ಸೋಪ್ ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಿ. ಕೆಮ್ಮುವ ಅಥವಾ ಸೀನುವ ವ್ಯಕ್ತಿಯಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳಿ. ದೈಹಿಕ ಅಂತರ ಸಾಧ್ಯವಾಗದ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ನಿಮ್ಮ ಕಣ್ಣು, ಮೂಗು ಹಾಗೂ ಬಾಯನ್ನು ಮುಟ್ಟಿಕೊಳ್ಳಬೇಡಿ. ಸೀನುವಾಗ ಅಥವಾ ಕೆಮ್ಮುವಾಗ ಮೊಣಕೈ ಅಥವಾ ಟಿಶ್ಯೂವಿನಿಂದ ಮೂಗು ಮತ್ತು ಬಾಯನ್ನು ಮುಚ್ಚಿಕೊಳ್ಳಿ ಎಂದು ಸಲಹೆ ನೀಡಿದೆ.

English summary
Google has urged people to wear masks and follow other covid prevention measures to save lives in its new Doodle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X