ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಟೆಲ್‌ ಮೇಲೆ 7,510 ಕೋಟಿ ಹೂಡಿಕೆ ಮಾಡಿದ ಗೂಗಲ್

|
Google Oneindia Kannada News

ನವದೆಹಲಿ, ಜನವರಿ 28: ಇಂಟರ್ನೆಟ್ ದೈತ್ಯ ಗೂಗಲ್ ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ಏರ್‌ಟೆಲ್‌ನಲ್ಲಿ 1ಬಿಲಿಯನ್‌ ಯುಎಸ್‌ಡಿಯನ್ನು ಹೂಡಿಕೆ ಮಾಡುತ್ತಿದೆ. ಸುಂದರ್ ಪಿಚೈ ನೇತೃತ್ವದ ಗೂಗಲ್ ಕಂಪೆನಿ ಹಾಗೂ ಏರ್‌ಟೆಲ್ ನಡುವೆ ಈ ಬಗ್ಗೆ ವಾಣಿಜ್ಯ ಒಪ್ಪಂದ ಏರ್ಪಟ್ಟಿದೆ.

ಗೂಗಲ್ ಕಂಪೆನಿಯು $700 ಮಿಲಿಯನ್ (ಸುಮಾರು ರೂ. 5,255 ಕೋಟಿ) ಡಾಲರ್ ಇಕ್ವಿಟಿ (ಪ್ರತಿ ಷೇರಿಗೆ 734 ರೂ.) ಹೂಡಿಕೆಯ ಮೂಲಕ ಏರ್‌ಟೆಲ್‌ನಲ್ಲಿ ಶೇ.1.28 ಪಾಲನ್ನು ತನ್ನದಾಗಿಸಿಕೊಳ್ಳುತ್ತಿದೆ. ಇನ್ನು ಉಳಿದ 300 ಮಿಲಿಯನ್ ಯುಎಸ್‌ಡಿ (ಸುಮಾರು ರೂ. 2,250 ಕೋಟಿ) ಮೊತ್ತವನ್ನು ಕಂಪೆನಿಯ ಇತರೆ ವಾಣಿಜ್ಯ ಒಪ್ಪಂದಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ ಎಂದು ಶುಕ್ರವಾರ ಪ್ರಕಟ ಮಾಡಲಾಗಿದೆ.

 ಜಾಗತಿಕವಾಗಿ ಎರಡನೇ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಟಿಸಿಎಸ್‌ ಜಾಗತಿಕವಾಗಿ ಎರಡನೇ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಟಿಸಿಎಸ್‌

ಗೂಗಲ್ ತನ್ನ ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್‌ನ ಭಾಗವಾಗಿ ಹೂಡಿಕೆ ಮಾಡಿದೆ. "ಇದು ಭಾರ್ತಿ ಏರ್‌ಟೆಲ್‌ನಲ್ಲಿ ಯುಎಸ್‌ಡಿ 700 ಮಿಲಿಯನ್ ಈಕ್ವಿಟಿ ಹೂಡಿಕೆಯನ್ನು ಮಾಡಲಿದೆ. ಪ್ರತಿ ಷೇರಿಗೆ 734 ರೂಪಾಯಿ ಆಗಿದೆ," ಎಮದು ಏರ್‌ಟೆಲ್ ಹೇಳಿಕೆಯಲ್ಲಿ ತಿಳಿಸಿದೆ.

Google To Invest USD 1 Billion In Airtel To Buy 1.28 Percent Stake For USD 700 Million

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪರಸ್ಪರ ಒಪ್ಪಿಗೆಯಾಗುವ ಷರತ್ತುಗಳನ್ನು ಗುರುತಿಸಲು ಮತ್ತು ಒಪ್ಪಿಕೊಳ್ಳುವ ಬಗ್ಗೆ ಹೇಳಲಾಗಿದೆ. ಇನ್ನು ಏರ್‌ಟೆಲ್‌ನಲ್ಲಿ ಶೇಕಡ 1.28 ಮಾಲೀಕತ್ವವನ್ನು ಗೂಗಲ್‌ ತೆಗೆದುಕೊಳ್ಳುತ್ತದೆ. ಇನ್ನುಳಿದ 300 ಮಿಲಿಯನ್‌ ಯುಎಸ್‌ಡಿ ಮೊತ್ತವನ್ನು ನವೀನ ಕೈಗೆಟುಕುವ ಕಾರ್ಯಕ್ರಮಗಳು ಮತ್ತು ಭಾರತದ ಡಿಜಿಟಲ್ ಪ್ರವೇಶ ಮತ್ತು ಡಿಜಿಟಲ್ ಸೇರ್ಪಡೆಯನ್ನು ಹೆಚ್ಚಿಸಲು ಗುರಿಯನ್ನು ಹೊಂದಿರುವ ಇತರ ಕೊಡುಗೆಗಳ ಮೂಲಕ ಗ್ರಾಹಕರಿಗೆ ಹಲವಾರು ಸಾಧನಗಳನ್ನು ಒಳಗೊಂಡಿರುವ ಏರ್‌ಟೆಲ್‌ನ ಕೊಡುಗೆಗಳನ್ನು ಸ್ಕೇಲಿಂಗ್‌ ಮಾಡಲು ಬಳಕೆ ಮಾಡಲಾಗುತ್ತದೆ.

1,500 ಮ್ಯಾನೇಜ್‌ಮೆಂಟ್ ಉದ್ಯೋಗಿಗಳನ್ನು ವಜಾಗೊಳಿಸಿದ ಯುನಿಲಿವರ್1,500 ಮ್ಯಾನೇಜ್‌ಮೆಂಟ್ ಉದ್ಯೋಗಿಗಳನ್ನು ವಜಾಗೊಳಿಸಿದ ಯುನಿಲಿವರ್

ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಬಗ್ಗೆ ಸುಳಿವು

ಇನ್ನು ಈ ಹೇಳಿಕೆಯಲ್ಲಿ ಏರ್‌ಟೆಲ್ ಮತ್ತು ಗೂಗಲ್ ಭಾರತೀಯ ಬಳಕೆದಾರರಿಗೆ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಬಗ್ಗೆ ಸುಳಿವು ನೀಡಿವೆ. ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳ ಶ್ರೇಣಿಯನ್ನು ಹೆಚ್ಚಿಸಿ ಏರ್‌ಟೆಲ್‌ಗೆ ಸಹಾಯ ಮಾಡುವಲ್ಲಿ ಗೂಗಲ್‌ನ ಬೆಂಬಲವನ್ನು ಒಪ್ಪಂದದಲ್ಲಿ ಒಳಗೊಂಡಿದೆ ಎರಡು ಸಂಸ್ಥೆಗಳು ವಿವಿಧ ಸಾಧನ ತಯಾರಕರ ಸಹಭಾಗಿತ್ವದಲ್ಲಿ ಬೆಲೆಗಳ ಹೆಚ್ಚಳದಿಂದಾಗಿ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುವಲ್ಲಿ ಇರುವ ಅಡೆತಡೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ. ಇನ್ನು ಈ ಎರಡು ಸಂಸ್ಥೆಗಳು ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಪಾಲುದಾರಿಕೆಯಲ್ಲಿ ಎರಡು ಯೋಜನೆಗಳನ್ನು ಹೊಂದಿದೆ. ಏರ್‌ಟೆಲ್‌ನ ಪ್ರತಿಸ್ಪರ್ಧಿ ಜಿಯೋ ಪ್ಲಾಟ್‌ಫಾರ್ಮ್‌ಗಳು ಜುಲೈ 2020 ರಲ್ಲಿ ಗೂಗಲ್‌ನಿಂದ 4.5 ಶತಕೋಟಿ ಯುಎಸ್‌ಡಿ (ಸುಮಾರು ರೂ. 33,775 ಕೋಟಿ) ಹೂಡಿಕೆಯನ್ನು ಮಾಡಿದೆ.

ಇನ್ನು ಏರ್‌ಟೆಲ್ ಮತ್ತು ಗೂಗಲ್‌ನ ಈ ಒಪ್ಪಂದವು ಅಗತ್ಯ ನಿಯಂತ್ರಣ ಅನುಮೋದನೆಗಳಿಗೆ ಒಳಪಟ್ಟಿದೆ. 'ಎರಡೂ ಸಂಸ್ಥೆಗಳು ಮುಕ್ತವಾಗಿ ಡಿಜಿಟಲ್ ಪರಿಸರವನ್ನು ನಿರ್ಮಿಸಲು ಕೆಲಸ ಮಾಡಲು ಬದ್ಧವಾಗಿವೆ. ನವೀನ ಡಿಜಿಟಲ್ ಸೇವೆಗಳೊಂದಿಗೆ ಗ್ರಾಹಕರು ಮತ್ತು ವ್ಯವಹಾರಗಳಿಗೆ ಸೇವೆ ಸಲ್ಲಿಸುವ ಜೊತೆಯಾಗಿ ಅನ್ವೇಷಿಸಲು ಮತ್ತು ಹೂಡಿಕೆ ಮಾಡಲು ಒಪ್ಪಿಕೊಂಡಿವೆ ಎಂದು ಜಂಟಿ ಹೇಳಿಕೆಯು ತಿಳಿಸಿದೆ. (ಒನ್‌ಇಂಡಿಯಾ ಸುದ್ದಿ)

English summary
Google To Invest USD 1 Billion In Airtel To Buy 1.28 Percent Stake For USD 700 Million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X